ಸ್ವಿಝರ್ ಲ್ಯಾಂಡ್ ನ ಮ್ಯಾಟರ್‌ಹಾರ್ನ್ ಪರ್ವತದಲ್ಲಿ ಬೆಳಗಿದ ತ್ರಿವರ್ಣ ಧ್ವಜ
Published by Basavaraj Halli
19 ಏಪ್ರಿಲ್ 2020
ಬರ್ನ್ (ಜಿನೀವ) :ಸ್ವಿಝರ್ ಲ್ಯಾಂಡ್ ಮತ್ತು ಇಟಲಿ ದೇಶಗಳ ಗಡಿಭಾಗದಲ್ಲಿ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ವ್ಯಾಪಿಸಿರುವ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿರುವ 14,692 ಅಡಿ ಎತ್ತರದ ಮ್ಯಾಟರ್‌ಹಾರ್ನ್ ಪರ್ವತದಲ್ಲಿ ಸುಮಾರು 1000 ಮೀಟರನಷ್ಟು ಭಾರೀಗಾತ್ರದಲ್ಲಿ ಭಾರತೀಯ ತ್ರಿವರ್ಣ ಧ್ವಜದ ಮಾದರಿಯ ಲೇಸರ್ ಬೆಳಕನ್ನು ಬೆಳಗಿಸುವ ಮೂಲಕ, ಸ್ವಿಝರ್ ಲ್ಯಾಂಡ್ ವಿನೂತನವಾಗಿ ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ನೀಡಿದೆ.