➤ ಟಾಟಾ ಗ್ರೂಪ್‌ನಲ್ಲಿ ಪ್ರಮುಖ ನಾಯಕತ್ವದ ಬದಲಾವಣೆಯಾಗಿದ್ದು, ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ (Tata Investment Corporation) ನ ಹೊಸ ಅಧ್ಯಕ್ಷರಾಗಿ ಹಿರಿಯ ಕಾರ್ಪೊರೇಟ್ ವಕೀಲರಾದ ಬಹ್ರಮ್ ವಕೀಲ್ (Bahram Vakil) ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇಷ್ಟು ದಿನ ಈ ಹುದಲ್ಲಿದ್ದ ನೋಯೆಲ್ ಟಾಟಾ (Noel Tata) ಅವರು ವಯೋಮಿತಿಯ ಕಾರಣದಿಂದ ನಿವೃತ್ತರಾಗಿದ್ದು, ಅವರನ್ನು ಕಂಪನಿಯ ‘ಚೇರ್ಮನ್ ಎಮೆರಿಟಸ್’ (Chairman Emeritus) ಆಗಿ ನೇಮಿಸಲಾಗಿದೆ.
- ಹೊತ ಹುದ್ದೆ ಮತ್ತು ಅಧಿಕಾರ ಸ್ವೀಕಾರ: ಬಹ್ರಮ್ ವಕೀಲ್ ಅವರು ನವೆಂಬರ್ 12 ರಿಂದ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್‌ನ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.   
- ಚೇರ್ಮನ್ ಎಮೆರಿಟಸ್ ಗೌರವ: ಟಾಟಾ ಗ್ರೂಪ್‌ಗೆ ಸಲ್ಲಿಸಿದ ದೀರ್ಘಕಾಲದ ಸೇವೆಯನ್ನು ಪರಿಗಣಿಸಿ ನೋಯೆಲ್ ಟಾಟಾ ಅವರನ್ನು ಕಂಪನಿಯ ‘ಚೇರ್ಮನ್ ಎಮೆರಿಟಸ್’ ಆಗಿ ಘೋಷಿಸಲಾಗಿದೆ.
- ನಿವೃತ್ತಿಗೆ ಕಾರಣ: ಟಾಟಾ ಗುಂಪಿನ ಆಡಳಿತ ಮಾರ್ಗಸೂಚಿಗಳ (Tata Group Governance Guidelines) ಪ್ರಕಾರ, ನಾನ್-ಎಕ್ಸಿಕ್ಯೂಟಿವ್ ಮತ್ತು ನಾನ್-ಇಂಡಿಪೆಂಡೆಂಟ್ ನಿರ್ದೇಶಕರು 70 ವರ್ಷ ವಯಸ್ಸನ್ನು ತಲುಪಿದಾಗ ನಿವೃತ್ತರಾಗಬೇಕು. ಇದರನ್ವಯ ನೋಯೆಲ್ ಟಾಟಾ ಅವರು ನವೆಂಬರ್ 11 ರಂದು ತಮ್ಮ 70 ನೇ ವಯಸ್ಸಿಗೆ ಪೂರಕವಾಗಿ ಅಧಿಕಾರದಿಂದ ಕೆಳಗಳಿದಿದ್ದಾರೆ.   
➤ ಬಹ್ರಮ್ ವಕೀಲ್:
- ಬಹ್ರಮ್ ವಕೀಲ್ ಅವರು ಭಾರತದ ಖ್ಯಾತ ಕಾನೂನು ಸಂಸ್ಥೆಯಾದ AZB & Partners ನ ಸಹ-ಸಂಸ್ಥಾಪಕರಲ್ಲಿ ಒಬ್ಬರು. ಕಾರ್ಪೊರೇಟ್ ಕಾನೂನು, ದಿವಾಳಿತನ (Insolvency), ಮೂಲಸೌಕರ್ಯ ಮತ್ತು ಪ್ರಾಜೆಕ್ಟ್ ಫೈನಾನ್ಸ್‌ನಲ್ಲಿ ಇವರು ಅಪಾರ ಪರಿಣತಿ ಹೊಂದಿದ್ದಾರೆ.   
- ಇವರು ಮಾರ್ಚ್ 2025 ರಿಂದ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್‌ನ ಉಪಾಧ್ಯಕ್ಷರಾಗಿ ಮತ್ತು ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
➤ ನೋಯೆಲ್ ಟಾಟಾ ಅವರ ಸುದೀರ್ಘ ಸೇವೆ:
- ನೋಯೆಲ್ ಟಾಟಾ ಅವರು ಜೂನ್ 9, 2004 ರಂದು ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಮಂಡಳಿಗೆ ಸೇರಿದ್ದರು.
- ಜೂನ್ 24, 2010 ರಂದು ಕಂಪನಿಯ ಅಧ್ಯಕ್ಷರಾಗಿ ನೇಮಕಗೊಂಡು, ಸುಮಾರು 16 ವರ್ಷಗಳಿಗೂ ಅಧಿಕ ಕಾಲ ಅಧ್ಯಕ್ಷರಾಗಿ ಹಾಗೂ ಒಟ್ಟು 22 ವರ್ಷಗಳ ಕಾಲ ನಿರ್ದೇಶಕರಾಗಿ ಯಶಸ್ವಿ ಸೇವೆ ಸಲ್ಲಿಸಿದ್ದಾರೆ. ಇವರ ನೇತೃತ್ವದಲ್ಲಿ ಕಂಪನಿಯು ಗಣನೀಯ ಪ್ರಗತಿ ಸಾಧಿಸಿತ್ತು.
➤ ಮತ್ತೊಬ್ಬ ನೂತನ ನಿರ್ದೇಶಕರ ನೇಮಕ: ಮಂಡಳಿಯ ಈ ಬದಲಾವಣೆಗಳ ಜೊತೆಗೆ, ಚಾರ್ಟರ್ಡ್ ಅಕೌಂಟೆಂಟ್ ಮತ್ತು 'ನಿಯೋಸ್ಟ್ರಾಟ್ ಅಡ್ವೈಸರ್ಸ್' ಸಂಸ್ಥೆಯ ಸ್ಥಾಪಕರಾದ ಅಬೈಜರ್ ಶಬ್ಬೀರ್ ದಿವಾನ್ಜಿ (Abizer Shabbir Diwanji) ಅವರನ್ನು ಕಂಪನಿಯ ಹೆಚ್ಚುವರಿ ನಾನ್-ಎಕ್ಸಿಕ್ಯೂಟಿವ್ ಇಂಡಿಪೆಂಡೆಂಟ್ ನಿರ್ದೇಶಕರಾಗಿ 5 ವರ್ಷಗಳ ಅವಧಿಗೆ (ನವೆಂಬರ್ 11, 2031 ರವರೆಗೆ) ನೇಮಕ ಮಾಡಲಾಗಿದೆ.