IMF-ವಿಶ್ವ ಬ್ಯಾಂಕಿನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ಭಾರತ
Published by Basavaraj Halli
18 ಏಪ್ರಿಲ್ 2020
ಭಾರತ ವಿಶ್ವಬ್ಯಾಂಕ್-ಅಂತರರಾಷ್ಟ್ರೀಯ ಹಣಕಾಸು ನಿಧಿಯ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭಾಗವಹಿಸಿತು. ಭಾರತದ ಪ್ರತಿನಿಧಿಯಾಗಿ ಕೇಂದ್ರ ಹಣಕಾಸು ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಪ್ರತಿನಿಧಿಸಿದ್ದರು.
* ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಅಭಿವೃದ್ಧಿ ಸಮಿತಿಯ 101 ನೇ ಸಭೆಯಲ್ಲಿ ಭಾರತ ಭಾಗವಹಿಸಿತು.
* ಈ ಸಭೆಯಲ್ಲಿ ಭಾಗವಹಿಸಿದ ತಜ್ಞರು COVID-19 ನಿಂದ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಪ್ರತಿಕ್ರಿಯೆ ಕುರಿತು ಚರ್ಚಿಸಿದರು.
* ಮುಂದಿನ 15 ತಿಂಗಳುಗಳವರೆಗೆ COVID-19 virudda ಹೋರಾಡಲು ವಿಶ್ವಬ್ಯಾಂಕನಿಂದ ದೊರೆಯುವ 150 ರಿಂದ 160 ಶತಕೋಟಿ ಡಾಲರ್ಗಳಷ್ಟು ಆರ್ಥಿಕ ಸಹಾಯವನ್ನು ಸಮಿತಿಯು ಸ್ವಾಗತಿಸಿತು.
* ಅಭಿವೃದ್ಧಿ ಸಮಿತಿಯ ಮುಂದಿನ ಸಭೆಯನ್ನು 17 ಅಕ್ಟೋಬರ್ 2020 ರಂದು ನಿಗದಿಪಡಿಸಲಾಗಿದೆ.