➤ ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮಹತ್ವದ ರಾಜಕೀಯ ಸ್ಥಾನಕ್ಕೇರುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಪ್ರಮುಖ ನಗರವಾದ ಗ್ರೇಟರ್ ಬೆಂಡಿಗೋ (Greater Bendigo) ನಗರದ ಮೇಯರ್ ಆಗಿ ಭಾರತ ಮೂಲದ ಅಭಿಷೇಕ್ ಅವಸ್ಥಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಭಾರತ ಮೂಲದ ಮೊಟ್ಟಮೊದಲ ವ್ಯಕ್ತಿ ಎಂಬ ಐತಿಹಾಸಿಕ ಹೆಗ್ಗಳಿಗೆಗೆ ಪಾತ್ರರಾಗಿದ್ದಾರೆ.
- ಹುದ್ದೆ: ಮೇಯರ್, ಗ್ರೇಟರ್ ಬೆಂಡಿಗೋ ನಗರ (City of Greater Bendigo, Victoria, Australia).
- ಅಧಿಕಾರಾವಧಿ: 2026–2027.
- ವಿಶೇಷತೆ: ಆಸ್ಟ್ರೇಲಿಯಾದ ಈ ಪ್ರದೇಶದಲ್ಲಿ ಮೇಯರ್ ಹುಕ್ಕೆಯನ್ನು ಅಲಂಕರಿಸಿದ ಭಾರತ ಮೂಲದ ಮೊದಲ ವಲಸಿಗ (First Indian-origin migrant).
- ಮೂಲ ನೆಲೆ: ಅಭಿಷೇಕ್ ಅವಸ್ಥಿ ಅವರು ಮೂಲತಃ ಭಾರತದ ಹಿಮಾಚಲ ಪ್ರದೇಶದ 'ಮಂಡಿ' (ಚೋಟಿ ಕಾಶಿ) ನಗರದವರು.
- ಉಪ ಮೇಯರ್: ಆಡಳಿತ ಮಂಡಳಿಯಲ್ಲಿ ಆಂಡ್ರಿಯಾ ಮೆಟ್ಕಾಫ್ (Andrea Metcalfe) ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
➤ ಅಭಿಷೇಕ್ ಅವಸ್ಥಿ ಅವರ ಸ್ಪೂರ್ತಿದಾಯಕ ಹಿನ್ನೆಲೆ:
- ವಿದ್ಯಾರ್ಥಿಯಾಗಿ ವಲಸೆ: ಅಭಿಷೇಕ್ ಅವಸ್ಥಿ ಅವರು 2008ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಗೆ ತೆರಳಿದ್ದರು. ಅಲ್ಲಿನ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ (La Trobe University) ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಯೋಇನ್ಫರ್ಮ್ಯಾಟಿಕ್ಸ್ನಲ್ಲಿ ಪದವಿ ಪಡೆದರು.
- ನಾಗರಿಕತೆ: 2015ರಲ್ಲಿ ಇವರು ಅಧಿಕೃತವಾಗಿ ಆಸ್ಟ್ರೇಲಿಯಾದ ನಾಗತ್ವ ಪಡೆದರು.
- ಸ್ಥಳೀಯ ರಾಜಕೀಯ ಪ್ರವೇಶ: 2024ರ ನವೆಂಬರ್ನಲ್ಲಿ ನಡೆದ ಸ್ಥಳೀಯ ಕೌನ್ಸಿಲ್ ಚುನಾವಣೆಯಲ್ಲಿ ಕೆನ್ನಿಂಗ್ಟನ್ ವಾರ್ಡ್ನಿಂದ ಕೌನ್ಸಿಲರ್ ಆಗಿ ಜಯಶಾಲಿಯಾಗುವ ಮೂಲಕ ಸಕ್ರಿಯ ರಾಜಕೀಯ ಪ್ರವೇಶ ಮಾಡಿದರು. ಮೇಯರ್ ಆಗಿ ಆಯ್ಕೆಗೂ ಮುನ್ನ ಅವರು ಅದೇ ನಗರದ ಉಪ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದರು.
- ಸಾಮಾಜಿಕ ಸೇವೆ: ಇವರು 2021ರಲ್ಲಿ 'ಇಂಡಿಯನ್ ಅಸೋಸಿಯೇಷನ್ ಆಫ್ ಬೆಂಡಿಗೋ' (Indian Association of Bendigo) ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ವಿಕ್ಟೋರಿಯಾ ಭಾಗದಲ್ಲಿ ಭಾರತೀಯ ಸಮುದಾಯವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಆಸ್ಟ್ರೇಲಿಯಾದ ಗ್ರೇಟರ್ ಬೆಂಡಿಗೋ ಮೇಯರ್ ಆಗಿ ಆಯ್ಕೆಯಾದ ಭಾರತ ಮೂಲದ ಅಭಿಷೇಕ್ ಅವಸ್ಥಿ:
Published by Yallamma G
1 day ago