ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಇನ್ನಿಲ್ಲ
Published by Basavaraj Halli
19 ಏಪ್ರಿಲ್ 2020
ಬೆಳಗಾವಿ: ಕಲಬುರಗಿ ಮೂಲದ ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಅವರು ತಮ್ಮ 90 ನೇ ವಯಸ್ಸಿನಲ್ಲಿ ಶನಿವಾರ (19 ಏಪ್ರಿಲ್ 2020) ರ ರಾತ್ರಿ ವಯೋಸಹಜ ಕಾಯಿಲೆಯಿಂದ ಬೆಳಗಾವಿಯಲ್ಲಿ ನಿಧನರಾದರು.
* ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿ ಹಾಗು ರಂಗಕರ್ಮಿಯಾಗಿದ್ದರು.
* 1931ರಲ್ಲಿ ಕಲಬುರ್ಗಿಯ ಕುಸನೂರಲ್ಲಿ ಜನನ
* ಕಲಬುರಗಿಯಲ್ಲಿ "ರಂಗ ಮಾಧ್ಯಮ" ಎಂಬ ನಾಟಕ ಸಂಸ್ಥೆಯ ಸ್ಥಾಪಕರಾಗಿದ್ದು
* 1975ರಲ್ಲಿ 'ಯಾತನಾ ಶಿಬಿರ' ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡಮಿಯ ಪುರಸ್ಕಾರ ಲಭಿಸಿದೆ. * 1992ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಗೌರವ ಪ್ರಶಸ್ತಿ ನೀಡಲಾಗಿದೆ ಮತ್ತು 2006 ನೇ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ದೊರೆತಿದೆ.