ಶನಿವಾರ, 15 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಪ್ರಧಾನಿ ಮೋದಿ ಜೊತೆ ಪೋರ್ಚುಗೀಸ್ ಅಧ್ಯಕ್ಷರ ದ್ವಿಪಕ್ಷೀಯ ಮಾತುಕತೆ
Authored by:
Siddaram Halli
ನವದೆಹಲಿ: ಭಾರತ ಭೇಟಿ ನೀಡಿರುವ ಪೋರ್ಚ್‍ಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೊಲೊ ಡಿ ಸೌಸಾ ಅವರು ಪ್ರಧಾನಿ ನರೇಂದ್ರ ಮೋದಿಯಾರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಚರ್ಚೆ ನಡೆಸಿದರು.
ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಂಬಂಧ ಸುಧಾರಣೆಗಾಗಿ ಮೋದಿ ಮತ್ತು ಡಿ.ಸೌಸಾ ಚರ್ಚಿಸಿದರು.
ಪೋರ್ಚಗೀಸ್ ಅಧ್ಯಕ್ಷರು 4 ದಿನಗಳ ಭಾರತ ಪ್ರವಾಸದಲ್ಲಿರುವ ಪೋರ್ಚಗೀಸ್ ಅಧ್ಯಕ್ಷರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.