ಶನಿವಾರ, 15 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಮಹಾರಾಷ್ಟ್ರದಲ್ಲಿ 'ಶಿವ ಭೋಜನ್' ಕ್ಯಾಂಟೀನ್ ಆರಂಭ
Authored by:
Siddaram Halli
ಮುಂಬೈ : ಮಹಾರಾಷ್ಟ್ರ ಸರ್ಕಾರವು "ಶಿವ ಭೋಜನ್" ಕ್ಯಾಂಟೀನ್ ಅನ್ನು ಪ್ರಾರಂಭಿಸಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಚಾಲನೆ ನೀಡಿದರು. ದಿನಾಂಕ ಜನವರಿ 26, 2020ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶಿವ ಭೋಜನ್ ಕ್ಯಾಂಟೀನ್ ಗೆ ಚಾಲನೆ ನೀಡಿದ್ರು, ಇವು ಕರ್ನಾಟಕ ರಾಜ್ಯ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿವೆ. ರೂ.5 ನೀಡಿದ್ರೇ ತಿಂಡಿ ಮತ್ತು ರೂ.10 ನೀಡಿದ್ರೇ ಒಂದು ಬೌಲ್ ಅನ್ನ, ದಾಲ್, ತರಕಾರಿ ಸಾಂಬಾರ್ ಹಾಗೂ ಒಂದು ಕಪ್ ಸ್ವೀಟ್ ಇಲ್ಲಿ ಸಿಗುತ್ತದೆ.