➤ ಮೋಟಾರ್ ರೇಸಿಂಗ್ ಜಗತ್ತಿನಲ್ಲಿ ಭಾರತೀಯರು ಮತ್ತೊಮ್ಮೆ ತಮ್ಮ ಛಾಪನ್ನು ಮೂಡಿಸಿದ್ದಾರೆ. ಹೈದರಾಬಾದ್‌ನ ಪ್ರತಿಭಾವಂತ ರೇಸರ್ ಜೀತ್ ಝಬಾಕ್ (Jeet Jhabakh) ಅವರು ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಸೀಸನ್‌ನಲ್ಲಿಯೇ 2026ರ ಎಫ್‌ಐಎ ಏಷ್ಯಾ-ಪೆಸಿಫಿಕ್ ರೇಲಿ ಚಾಂಪಿಯನ್‌ಶಿಪ್‌ (FIA Asia-Pacific Rally Championship - APRC) ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

  • ಚೊಚ್ಚಲ ಸೀಸನ್‌ನಲ್ಲಿಯೇ ದಾಖಲೆ: ತಮ್ಮ ಮೊದಲ ಅಂತರರಾಷ್ಟ್ರೀಯ ರೇಲಿ ಸೀಸನ್‌ನಲ್ಲಿಯೇ ಈ ಖಂಡಾಂತರ ಪ್ರಶಸ್ತಿಯನ್ನು ಗೆದ್ದುಕೊಳ್ಳುವ ಮೂಲಕ ಜೀತ್ ಝಬಾಕ್ ಅಸಾಧ್ಕ ಸಾಧನೆ ಮಾಡದ್ದಾರೆ.
  • 38 ವರ್ಷಗಳ ಇತಿಹಾಸದಲ್ಲೇ ಪ್ರಥಮ: ಚಾಂಪಿಯನ್‌ಶಿಪ್‌ನ 38 ವರ್ಷಗಳ ಇತಿಹಾಸದಲ್ಲಿ, ಟು-ವೀಲ್-ಡ್ರೈವ್ (Two-Wheel-Drive) ಕಾರಿನ ಮೂಲಕ ಸಮಗ್ರ (Overall) ಪ್ರಶಸ್ತಿಯನ್ನು ಗೆದ್ದ ಮೊದಲ ಡ್ರೈವರ್ ಎಂಬ ಹೆಗ್ಗಳಿಗೆ ಜೀತ್ ಪಾತ್ರರಾಗಿದ್ದಾರೆ.
  • ಸಹ-ಚಾಲಕರ ಸಾಥ್: ಈ ಐತಿಹಾಸಿಕ ಜಯದಲ್ಲಿ ಅನುಭವಿ ಸಹ-ಚಾಲಕ (Co-driver) ಮೂಸಾ ಶರೀಫ್ (Musa Sherif) ಅವರ ಪಾತ್ರವೂ ನಿರ್ಣಾಯಕವಾಗಿತ್ತು.

➤ ಗೆಲುವಿನ ಹಾದಿ ಮತ್ತು ಸಾಧನೆಗಳು: ಇಂಡೋನೇಷ್ಯಾದಲ್ಲಿ ನಡೆದ 'ರ‍್ಯಾಲಿ ಆಫ್ ಇಂಡೋನೇಷಿಯಾ' (Danau Toba) ಸೇರಿದಂತೆ ಪ್ರಮುಖ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜೀತ್ ಝಬಾಕ್, ಒಟ್ಟು 73 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡರು. ಇದರೊಂದಿಗೆ 2026ರ FIA APRC4 ಚಾಂಪಿಯನ್‌ಶಿಪ್‌ ಅನ್ನು ಸಹ ತಮ್ಮದಾಗಿಸಿಕೊಂಡು ಟು-ವೀಲ್-ಡ್ರೈವ್ ವಿಭಾಗದಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.

ಗೆಲುವಿನ ಬಳಿಕ ಮಾತನಾಡಿದ ಜೀತ್ ಝಬಾಕ್, "ನಾವು ಪ್ರತಿ ರಾಲಿಯಲ್ಲೂ ಸ್ಥಿರತೆಯಿಂದ ರೇಸ್ ಪೂರ್ಣಗೊಳಿಸಿದೆವು. ಸೀಸನ್‌ನಾದ್ಯಂತ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾದರೂ, ನನ್ನ ಸಹ-ಚಾಲಕ ಮೂಸಾ ಶರೀಫ್ ಪ್ರತಿ ಕಾರ್ನರ್‌ನಲ್ಲೂ ಸರಿಯಾದ ಸೂಚನೆ ನೀಡಿದರು ಮತ್ತು ಎಂಜಿನಿಯರ್‌ಗಳು ಕಾರನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಂಡರು. ಇದು ಕೇವಲ ಆರಂಭವಷ್ಟೇ, ಅಂತಿಮವಲ್ಲ" ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
➤ ವೃತ್ತಿಜೀವನದ ಹಿನ್ನೆಲೆ (Career Background): ಮೋಟಾರ್‌ಸ್ಪೋರ್ಟ್ಸ್‌ ಲೋಕದಲ್ಲಿ ಜೀತ್ ಝಬಾಕ್ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದಾರೆ:
- ಸರ್ಕ್ಯೂಟ್ ರೇಸಿಂಗ್: ಎರಡು ಬಾರಿ ಭಾರತೀಯ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್ ಆಗಿರುವ ಇವರು, 2016ರಲ್ಲಿ ವೋಕ್ಸ್‌ವ್ಯಾಗನ್ ವೆಂಟೋ ಕಪ್ ಮತ್ತು 2019ರಲ್ಲಿ ಅಮೊ ಕಪ್ (Ameo Cup) ಗೆದ್ದಿದ್ದಾರೆ. ವೆಂಟೋ ಕಪ್‌ನಲ್ಲಿ ಭಾಗವಹಿಸಿದ ಎಲ್ಲಾ 10 ರೇಸ್‌ಗಳನ್ನೂ ಗೆದ್ದು ದಾಖಲೆ ಬರೆದಿದ್ದರು.  
- ರ‍್ಯಾಲಿಗೆ ಪಾದಾರ್ಪಣೆ: 2024ರಲ್ಲಿ ರೇಸಿಂಗ್‌ನಿಂದ ರಾಲಿಗೆ ಬದಲಾವಣೆ ಮಾಡಿಕೊಂಡ ಇವರು, ಚೊಚ್ಚಲ ಸೀಸನ್‌ನಲ್ಲಿಯೇ INRC3 ರನ್ನರ್-ಅಪ್ ಆಗಿ ಹೊರಹೊಮ್ಮಿದ್ದರು. 2025ರಲ್ಲೂ INRC3T ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.