Add KPSC Vaani to your Home Screen. In Safari, tap Share, then Add to Home Screen.

KEA JE Recruitment 2026: KEA ಯಿಂದ 218 ತಾಂತ್ರಿಕ ಹುದ್ದೆಗಳ ಬಂಪರ್ ನೇಮಕಾತಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

KEA JE Recruitment 2026: KEA ಯಿಂದ 218 ತಾಂತ್ರಿಕ ಹುದ್ದೆಗಳ ಬಂಪರ್ ನೇಮಕಾತಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
Published by Yallamma G
1 hour ago Karnataka Examination Authority Featured
Tags: Degree PUC

KEA Recruitment 2026: 218 ತಾಂತ್ರಿಕ ಹುದ್ದೆಗಳ ನೇಮಕಾತಿ ಪ್ರಕಟ; RPC ಮತ್ತು KK ವೃಂದಗಳಲ್ಲಿ ಅರ್ಜಿ ಆಹ್ವಾನ!

 

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಕಾಯುತ್ತಿರುವ ಡಿಪ್ಲೊಮಾ ಮತ್ತು ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮಹತ್ವದ ಉದ್ಯೋಗಾವಕಾಶ ಲಭ್ಯವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದ ವಿವಿಧ ಇಲಾಖೆಗಳು, ನಿಗಮಗಳು ಮತ್ತು ಪ್ರಾಧಿಕಾರಗಳಲ್ಲಿ ಖಾಲಿ ಇರುವ ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಎರಡು ಪ್ರತ್ಯೇಕ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಿದೆ.

 

ಈ ನೇಮಕಾತಿಯಲ್ಲಿ ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ – KK) ವೃಂದದಲ್ಲಿ 31 ಹುದ್ದೆಗಳು ಹಾಗೂ ಉಳಿದ ಮೂಲ ವೃಂದ (RPC)ದಲ್ಲಿ 187 ಹುದ್ದೆಗಳು ಸೇರಿ ಒಟ್ಟು 218 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

 

ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಿರಿಯ ಎಂಜಿನಿಯರ್ (ಸಿವಿಲ್), ಸಹಾಯಕ ನಗರ ಯೋಜಕರು ಹಾಗೂ ಇತರೆ ತಾಂತ್ರಿಕ ಹುದ್ದೆಗಳು ಸೇರಿವೆ.

ಅಭ್ಯರ್ಥಿಗಳು 2026ರ ಅಕ್ಟೋಬರ್ 31ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 26, 2026. ಆಸಕ್ತರು ವಿದ್ಯಾರ್ಹತೆ, ವಯೋಮಿತಿ, ಹುದ್ದೆಗಳ ವಿವರ ಮತ್ತು ಪರೀಕ್ಷಾ ವಿಧಾನವನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.

 

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..

 

ಪ್ರಮುಖ ಮಾಹಿತಿ

  • ನೇಮಕಾತಿ ಪ್ರಾಧಿಕಾರ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( ಕೆಇಎ )
  • ಹುದ್ದೆಗಳ ಸಂಖ್ಯೆ: 218
  • ಅಧಿಸೂಚನೆ ದಿನಾಂಕ : 31-10-2026
  • ಪ್ರಮುಖ ಹುದ್ದೆಗಳು : ಸಹಾಯಕ ನಗರ ಯೋಜಕರು, ಕಿರಿಯ ಎಂಜಿನಿಯರ್ ಮುಂತಾದವು
  • ವೇತನ ಶ್ರೇಣಿ : ₹54,175–₹99,400
  • ಕೊನೆಯ ದಿನಾಂಕ : 26-11-2026

 

ಒಟ್ಟು ಖಾಲಿ ಹುದ್ದೆಗಳ ವಿಂಗಡಣೆ (Vacancy Details)

KK ವೃಂದ: 31 ಹುದ್ದೆಗಳು.
ಉಳಿಕೆ ಮೂಲ ವೃಂದ (RPC): ಒಟ್ಟು 187 ಹುದ್ದೆಗಳು.
ಒಟ್ಟು: 218 ಹುದ್ದೆಗಳು.

 

KK ವೃಂದ: 31 ಹುದ್ದೆಗಳು.

 

 

ಉಳಿಕೆ ಮೂಲ ವೃಂದ (RPC): ಒಟ್ಟು 187 ಹುದ್ದೆಗಳು.

 

ಶೈಕ್ಷಣಿಕ ಅರ್ಹತೆಗಳು

  • ಸಹಾಯಕ ನಗರ ಯೋಜಕರು: ಮಾನ್ಯತೆ ಪಡೆದ ಸಂಸ್ಥೆಯಿಂದ ಸಿವಿಲ್ ಇಂಜಿನಿಯರಿಂಗ್ (Civil Engineering) ನಲ್ಲಿ ಡಿಪ್ಲೊಮಾ, ಅಥವಾ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ (ಡ್ರಾಫ್ಟ್ ಮನ್ ಶಿಪ್) ಹೊಂದಿರಬೇಕು.
  • ಕಿರಿಯ ಇಂಜಿನಿಯರ್ (ಸಿವಿಲ್): ಮಾನ್ಯತೆ ಪಡೆದ ಸಂಸ್ಥೆಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ 3 ವರ್ಷಗಳ ಡಿಪ್ಲೊಮಾ, ಅಥವಾ ಆರ್ಕಿಟೆಕ್ಚರಲ್ ಅಸಿಸ್ಟೆಂಟ್‌ಶಿಪ್, ಅಥವಾ ಲ್ಯಾಂಡ್‌ಸ್ಕೇಪ್ ಆರ್ಕಿಟೆಕ್ಚರ್ ಮುಂತಾದ ತತ್ಸಮಾನ ಕೋರ್ಸ್‌ಗಳನ್ನು ಪೂರೈಸಿರಬೇಕು. (ಆಟೋಕ್ಯಾಡ್ (AUTOCAD) ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು).
  • ಪ್ರಾಯೋಜಕರು (ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ) : ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪಡೆದಿರಬೇಕು.
  • ಕಿರಿಯ ಅಭಿಯಂತರರು (ಸಿವಿಲ್) : ಸರ್ಕಾರದಿಂದ ಅಥವಾ ಅದಕ್ಕೆ ಸಮಾನವಾದ ಸಂಸ್ಥೆಯಿಂದ ಸಿವಿಲ್ ಇಂಜಿನಿಯರಿಂಗ್ (ಜನರಲ್) ಅಥವಾ ಸಿವಿಲ್ ಇಂಜಿನಿಯರಿಂಗ್ (ಡ್ರಾಫ್ಟ್‌ಮನ್‌ಶಿಪ್) ಅಥವಾ ಆರ್ಕಿಟೆಕ್ಚರಲ್ ಅಥವಾ ಆರ್ಕಿಟೆಕ್ಚರಲ್ ಅಸಿಸ್ಟೆಂಟ್‌ಶಿಪ್ (ಸಿ-20 ಸಿಲಬಸ್) ನಲ್ಲಿ ಮೂರು ವರ್ಷಗಳ ಡಿಪ್ಮೋಮೋ ಹೊಂದಿರಬೇಕು. ಆಟೋಕ್ಯಾಡ್ (autocad) ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು.

 

ಸೂಚನೆ : ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿ / ಪ್ರಮಾಣ ಪತ್ರಗಳ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದಾಗ ನೇಮಕಾತಿ ಪ್ರಾಧಿಕಾರಕ್ಕೆ ಹಾಜರುಪಡಿಸಬೇಕು. ಒಂದು ವೇಳೆ ಹಾಜರು ಪಡಿಸದಿದ್ದಲ್ಲಿ, ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವು ರದ್ದಾಗುವುದು

 

ವಯೋಮಿತಿ
ಕರ್ನಾಟಕ ನಾಗರಿಕ ಸೇವಾ ನಿಯಮಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ನಿರ್ದಿಷ್ಟಪಡಿಸಿರುವ ಅರ್ಹತೆಯನ್ನು ಹಾಗೂ ನಿಗದಿತ ವಯಸ್ಸಿನ ಮಿತಿಯಾದ ಕನಿಷ್ಠ 18 ವರ್ಷಗಳು ತುಂಬಿರತಕ್ಕದ್ದು, ಹಾಗೂ ಸರ್ಕಾರದ ಉಳಿದ ವಯೋಮಿತಿ ಸಡಿಲಿಕೆ ಸಂಖ್ಯೆ: ಸಿಆಸುಇ 262 ಸೇನಿಕ 2025 ದಿನಾಂಕ 29.01.2026 ರಲ್ಲಿ ಉಳಿಸಿಕೊಟ್ಟಿರುವ ಒಂದು ಬಾರಿಯ ವಯೋಮಿತಿ ಸಡಿಲಿಕೆ ಸೌಲಭ್ಯವನ್ನು, 5 ವರ್ಷಗಳ ಸಡಿಲಿಕೆಯನ್ನು ನೀಡಿ, ಈ ಸೌಲಭ್ಯವನ್ನು ಉಪಯೋಗಿಸುವ ಸಂದರ್ಭದಲ್ಲಿ ಈ ಕೆಳಗಿನ ಸಡಿಲಿಕೆಯನ್ನು ಮಾಡಿಕೊಳ್ಳಬಹುದಾಗಿರುತ್ತದೆ;

  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು : 40 ವರ್ಷ
  • ಪ್ರವರ್ಗ 2A, 2B, 3A ಮತ್ತು 3B : 43 ವರ್ಷ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 : 45 ವರ್ಷ

 

ವೇತನ ಶ್ರೇಣಿ: ಈ ಎಲ್ಲಾ ಹುದ್ದೆಗಳಿಗೂ ಅತ್ಯುತ್ತಮವಾದ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು, ಮೂಲ ವೇತನವು ರೂ. 54,175 ದಿಂದ ರೂ. 99,400/- ವರೆಗೆ ಇರಲಿದೆ.

 

ಇದನ್ನು ಓದಿ : KEA FDA & SDA Recruitment 2026: ಡಿಗ್ರಿ, ಪಿಯುಸಿ ಪಾಸಾದವರಿಗೆ 5,431 FDA ಹಾಗೂ SDA ಹುದ್ದೆಗಳ ಬೃಹತ್ ನೇಮಕಾತಿ! ಇಂದೇ ಅರ್ಜಿ ಸಲ್ಲಿಸಿ

 

ಪ್ರಮುಖ ದಿನಾಂಕಗಳು : 

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 31 ಅಕ್ಟೋಬರ್ 2026.  
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ನವೆಂಬರ್ 2026.  
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27 ನವೆಂಬರ್ 2026.
  • ಸ್ಪರ್ಧಾತ್ಮಕ ಪರೀಕ್ಷೆ : ಜನವರಿ 2027ರಲ್ಲಿ (ನಿಖರ ದಿನಾಂಕ ನಂತರ ಪ್ರಕಟ)
  • ಕನ್ನಡ ಭಾಷಾ ಪರೀಕ್ಷೆ : 08-01-2027, ಮಧ್ಯಾಹ್ನ 3ರಿಂದ 5ರವರೆಗೆ

 

ಅರ್ಜಿ ಶುಲ್ಕ:

  • ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ: ರೂ. 750/-.  
  • SC/ST/ಪ್ರವರ್ಗ-1/ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 500/-.  
  • ವಿಶೇಷ ಚೇತನ (PwD) ಅಭ್ಯರ್ಥಿಗಳಿಗೆ: ರೂ. 250/-.  

 

ಆಯ್ಕೆ ಪ್ರಕ್ರಿಯೆ ಹಾಗೂ ಪರೀಕ್ಷಾ ವಿಧಾನ : ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಆಫ್‌ಲೈನ್ ಓಎಂಆರ್ (Offline OMR) ಸ್ಪರ್ಧಾತ್ಮಕ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ನಡೆಯಲಿದೆ.   

  • ಪರೀಕ್ಷಾ ದಿನಾಂಕ: ಜನವರಿ 2027 ರಲ್ಲಿ 100 ಅಂಕಗಳ ಪತ್ರಿಕೆ-1 (ಸಾಮಾನ್ಯ ಜ್ಞಾನ) ಮತ್ತು 100 ಅಂಕಗಳ ಪತ್ರಿಕೆ-2 (ನಿರ್ದಿಷ್ಟ ವಿಷಯ) ಪರೀಕ್ಷೆಗಳು ನಡೆಯಲಿವೆ.   
    ಕಡ್ಡಾಯ ಕನ್ನಡ ಪರೀಕ್ಷೆ: 08 ಜನವರಿ 2027 ರಂದು ಮಧ್ಯಾಹ್ನ 3:00 ರಿಂದ 5:00 ರವರೆಗೆ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ. (ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಓದದವರಿಗೆ ಮಾತ್ರ ಅನ್ವಯ).   
    ನೆಗೆಟಿವ್ ಮಾರ್ಕಿಂಗ್: ಪ್ರತಿಯೊಂದು ತಪ್ಪು ಉತ್ತರಕ್ಕೂ 0.25 (1/4) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. OMR ನಲ್ಲಿ ಉತ್ತರಿಸಲು ಗೊತ್ತಿಲ್ಲದ ಪ್ರಶ್ನೆಗಳಿಗೆ ಕಡ್ಡಾಯವಾಗಿ 5ನೇ ಆಯ್ಕೆಯನ್ನು ಶೇಡ್ ಮಾಡಬೇಕು. 

 

ಅರ್ಜಿ ಸಲ್ಲಿಸುವ ವಿಧಾನ : 

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ
ಅಭ್ಯರ್ಥಿಗಳು ಕಡ್ಡಾಯವಾಗಿ KEA ಯ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಬೇಕು.   
ಮುಖಪುಟದಲ್ಲಿರುವ 'ನೇಮಕಾತಿ' (Recruitment) ವಿಭಾಗದಲ್ಲಿ ನೀವು ಅರ್ಜಿ ಸಲ್ಲಿಸಲಿಚ್ಛಿಸುವ ಹುದ್ದೆಯ (ಉದಾ: FDA/SDA ಅಥವಾ JE) ಆನ್‌ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 2: ಸೂಚನೆಗಳನ್ನು ಓದುವುದು - ಅರ್ಜಿ ಭರ್ತಿ ಮಾಡುವ ಮೊದಲು ಅಧಿಸೂಚನೆಯಲ್ಲಿ ನೀಡಿರುವ ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಮೀಸಲಾತಿ ನಿಯಮಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ.  
 ಹಂತ 3: ಆನ್‌ಲೈನ್ ಅರ್ಜಿ ಭರ್ತಿ (Registration & Details) - ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ವಿವರ, ಶೈಕ್ಷಣಿಕ ಮಾಹಿತಿ ಹಾಗೂ ಮೊಬೈಲ್ ನಂಬರ್ / ಇ-ಮೇಲ್ ಐಡಿಯನ್ನು ಜಾಗರೂಕತೆಯಿಂದ ಭರ್ತಿ ಮಾಡಿ. (ಒಮ್ಮೆ ನಮೂದಿಸಿದ ಮಾಹಿತಿಯನ್ನು ಮತ್ತೆ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ).   
ಹಂತ 4: ಮೀಸಲಾತಿ RD ನಂಬರ್ ನಮೂದು (ಅತ್ಯಂತ ಪ್ರಮುಖ)
ನೀವು ಜಾತಿ, ಆದಾಯ, ಗ್ರಾಮೀಣ, ಕನ್ನಡ ಮಾಧ್ಯಮ, ಅಥವಾ ಕಲ್ಯಾಣ ಕರ್ನಾಟಕ (371J) ಮೀಸಲಾತಿಗಳನ್ನು ಕೋರುತ್ತಿದ್ದರೆ, ಆಯಾ ಪ್ರಮಾಣ ಪತ್ರಗಳ ಮೇಲಿರುವ 'RD ನಂಬರ್' (RD Number) ಅನ್ನು ಕಡ್ಡಾಯವಾಗಿ ನಮೂದಿಸಬೇಕು.   
ತಪ್ಪು RD ನಂಬರ್ ನಮೂದಿಸಿದರೆ ಮೀಸಲಾತಿಯು ತಿರಸ್ಕೃತಗೊಳ್ಳುತ್ತದೆ.   
ಹಂತ 5: ಫೋಟೋ ಮತ್ತು ಸಹಿ ಅಪ್‌ಲೋಡ್ (Upload Documents)ಭಾವಚಿತ್ರ: 
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಬಣ್ಣದ ಫೋಟೋವನ್ನು (White background) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು (ಫೈಲ್ ಸೈಜ್: 50KB ಯಿಂದ 200KB ಒಳಗಿರಬೇಕು, JPEG format).   
ಸಹಿ: ಬಿಳಿ ಹಾಳೆಯ ಮೇಲೆ ಕಪ್ಪು ಶಾಹಿಯ ಪೆನ್ (Sketch/Marker) ನಿಂದ ಮಾಡಿದ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು (ಫೈಲ್ ಸೈಜ್: 50KB ಯಿಂದ 70KB ಒಳಗಿರಬೇಕು, JPEG format).   
(ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡದ ಅರ್ಜಿಗಳು ನೇರವಾಗಿ ತಿರಸ್ಕೃತಗೊಳ್ಳುತ್ತವೆ).   
ಹಂತ 6: ಶುಲ್ಕ ಪಾವತಿ (Payment of Fee) - ಅರ್ಜಿಯನ್ನು Submit ಮಾಡಿದ ನಂತರ, ಆನ್‌ಲೈನ್ ಮೂಲಕವೇ (ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, UPI) ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಬೇಕು.   
ಹಂತ 7: ಪ್ರಿಂಟ್ ಔಟ್ (Printout) - ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಯಶಸ್ವಿಯಾದ ಬಳಿಕ, ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ಔಟ್ (Printout) ಮತ್ತು ಶುಲ್ಕ ಪಾವತಿಯ ಚಲನ್ ಅನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಸುರಕ್ಷಿತವಾಗಿ ಇಟ್ಟುಕೊಳ್ಳಿ.     

 

ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ಅಂಶಗಳು

  1. RPC ಮತ್ತು KK ವೃಂದಗಳ ಅಧಿಸೂಚನೆಗಳನ್ನು ಪ್ರತ್ಯೇಕವಾಗಿ ಓದಿ.
  2. ನಿಮ್ಮ ವಿದ್ಯಾರ್ಹತೆಗೆ ಹೊಂದುವ ಹುದ್ದೆಯನ್ನು ಮಾತ್ರ ಆಯ್ಕೆಮಾಡಿ.
  3. ವಯೋಮಿತಿ ಮತ್ತು ಮೀಸಲಾತಿ ಅರ್ಹತೆಯನ್ನು ಪರಿಶೀಲಿಸಿ.
  4. ಅರ್ಜಿ ಸಲ್ಲಿಸುವಾಗ ಸರಿಯಾದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಬಳಸಿ.
  5. ಜಾತಿ, ಆದಾಯ ಮತ್ತು ಇತರೆ ಮೀಸಲಾತಿ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿಕೊಳ್ಳಿ.
  6. ಭಾವಚಿತ್ರ ಮತ್ತು ಸಹಿಯನ್ನು ಅಧಿಸೂಚನೆಯಲ್ಲಿನ ಗಾತ್ರದ ನಿಯಮದಂತೆ ಅಪ್‌ಲೋಡ್ ಮಾಡಿ.
  7. ಶುಲ್ಕ ಪಾವತಿ ಯಶಸ್ವಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
  8. ಅಂತಿಮ ಅರ್ಜಿಯ ಪ್ರತಿಯನ್ನು ಉಳಿಸಿಕೊಳ್ಳಿ.
  9. ಪರೀಕ್ಷಾ ವೇಳಾಪಟ್ಟಿ ಮತ್ತು ಪ್ರವೇಶ ಪತ್ರದ ಮುಂದಿನ ಪ್ರಕಟಣೆಗಳನ್ನು ಗಮನಿಸಿ.
  10. ಅರ್ಹ ಅಭ್ಯರ್ಥಿಗಳು ಕೂಡಲೇ KEA ಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ. 

 

ಸಮಾರೋಪ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ RPC ಮತ್ತು KK ವೃಂದಗಳ ತಾಂತ್ರಿಕ ಹುದ್ದೆಗಳ ನೇಮಕಾತಿಯು ಡಿಪ್ಲೊಮಾ ಮತ್ತು ಸಂಬಂಧಿತ ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಎರಡು ಅಧಿಸೂಚನೆಗಳಡಿ ಒಟ್ಟು 218 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

 

ಅರ್ಜಿ ಸಲ್ಲಿಸಲು 2026ರ ನವೆಂಬರ್ 26 ಕೊನೆಯ ದಿನಾಂಕವಾಗಿದ್ದು, ಶುಲ್ಕ ಪಾವತಿಗೆ ನವೆಂಬರ್ 27 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವಯೋಮಿತಿ ಮತ್ತು ವೃಂದಕ್ಕೆ ಅನುಗುಣವಾಗಿ ಸೂಕ್ತ ಹುದ್ದೆಯನ್ನು ಆಯ್ಕೆಮಾಡಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು.

 

ನೇಮಕಾತಿಯ ಪಠ್ಯಕ್ರಮ (Syllabus) ಮತ್ತು ಕ್ಷಣಕ್ಷಣದ ನಿಖರ ಮಾಹಿತಿಗಾಗಿ KPSCVaani ಜಾಲತಾಣ ಹಾಗೂ ಆ್ಯಪ್‌ ಅನ್ನು ನಿರಂತರವಾಗಿ ವೀಕ್ಷಿಸುತ್ತಿರಿ.

Job Overview
No. of posts
218
Start Date
2 ನವೆಂಬರ್ 2026
End Date
26 ನವೆಂಬರ್ 2026
Pay Scale
54175 - 99400 INR
Employment Type
FULL_TIME
Organization
KEA (Website)
Location
Bengaluru, KA, 560001
To download official notification
Related Tags: Degree PUC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.