ಪವರ್‌ಗ್ರಿಡ್(POWERGRID) ನೇಮಕಾತಿ 2026: ಎಲೆಕ್ಟ್ರಾನಿಕ್ಸ್ ಎಂಜಿನಿಯರ್‌ಗಳಿಗೆ 1.4 ಲಕ್ಷದವರೆಗೆ ವೇತನ, ಗೇಟ್ (GATE-2026) ಪಾಸಾದವರಿಗೆ ಬಂಪರ್ ಆಫರ್!
POWERGRID ನೇಮಕಾತಿ 2026: 33 ಟ್ರೈನಿ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್) ಹುದ್ದೆಗಳಿಗೆ ಅರ್ಜಿ ಆಹ್ವಾನ, ₹14.33 ಲಕ್ಷ ವಾರ್ಷಿಕ ವೇತನ! GATE 2026 ಅರ್ಹತೆ ಇದ್ದರೆ ಅರ್ಜಿ ಸಲ್ಲಿಸಿ
ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶವೊಂದು ಲಭ್ಯವಾಗಿದೆ. ಭಾರತದ ಪ್ರಮುಖ ವಿದ್ಯುತ್ ಪ್ರಸರಣ ಸಂಸ್ಥೆಯಾದ Power Grid Corporation of India Limited (POWERGRID) ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ PowerTel (POWERGRID Teleservice Limited) ನಲ್ಲಿ ಖಾಲಿ ಇರುವ 33 ಟ್ರೈನಿ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
ಈ ನೇಮಕಾತಿಯ ವಿಶೇಷವೆಂದರೆ ಅಭ್ಯರ್ಥಿಗಳನ್ನು GATE-2026 ಪರೀಕ್ಷೆಯ ಎಲೆಕ್ಟ್ರಾನಿಕ್ಸ್ (EC) ವಿಭಾಗದ ಅಂಕಗಳ ಆಧಾರದ ಮೇಲೆ ಮುಂದಿನ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ಅಸಿಸ್ಟೆಂಟ್ ಇಂಜಿನಿಯರ್ (E0) ಹುದ್ದೆಗೆ ನಿಯಮಿತಗೊಳಿಸಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2026ರ ನವೆಂಬರ್ 13ರಿಂದ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ನವೆಂಬರ್ 27, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಷಕ್ಕೆ ಅಂದಾಜು ₹14.33 ಲಕ್ಷ CTC ಪ್ಯಾಕೇಜ್ ದೊರೆಯಲಿದೆ.
ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಹಾಗೂ ಸಂಬಂಧಿತ ಎಂಜಿನಿಯರಿಂಗ್ ವಿಭಾಗಗಳಲ್ಲಿ ಪದವಿ ಪಡೆದಿರುವ ಮತ್ತು GATE-2026 ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..
ಹುದ್ದೆಗಳ ವಿವರ ಹಾಗೂ ಮೀಸಲಾತಿ (Vacancy Details)
ಈ ನೇಮಕಾತಿಯಲ್ಲಿ 'ಎಲೆಕ್ಟ್ರಾನಿಕ್ಸ್' ವಿಭಾಗದ ಒಟ್ಟು 33 ಟ್ರೈನಿ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
- ಸಾಮಾನ್ಯ ವರ್ಗ (UR): 14
- ಒಬಿಸಿ (OBC - NCL): 07
- ಪ.ಜಾತಿ (SC): 06
- ಪ.ಪಂಗಡ (ST): 03
- ಆರ್ಥಿಕವಾಗಿ ಹಿಂದುಳಿದ ವರ್ಗ (EWS): 03
- (ಗಮನಿಸಿ: ವಿಕಲಚೇತನರಿಗೆ 2 ಹುದ್ದೆಗಳನ್ನು ಮೀಸಲಿಡಲಾಗಿದೆ).
ಶೈಕ್ಷಣಿಕ ಅರ್ಹತೆ (Educational Qualification)
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ / ಟೆಲಿಕಮ್ಯುನಿಕೇಶನ್ ವಿಭಾಗದಲ್ಲಿ ಬಿ.ಇ (B.E), ಬಿ.ಟೆಕ್ (B.Tech) ಅಥವಾ ಬಿ.ಎಸ್ಸಿ ಎಂಜಿನಿಯರಿಂಗ್ (B.Sc Engg) ಅನ್ನು ಪೂರ್ಣಾವಧಿಯಲ್ಲಿ (Full Time) ಮುಗಿಸಿರಬೇಕು.
- ಪದವಿಯಲ್ಲಿ ಕನಿಷ್ಠ 60% ಅಂಕಗಳು (ಅಥವಾ ತತ್ಸಮಾನ CGPA) ಪಡೆದಿರುವುದು ಕಡ್ಡಾಯ.
- ಪ್ರಮುಖ ಅರ್ಹತೆ: ಅಭ್ಯರ್ಥಿಗಳು ಕಡ್ಡಾಯವಾಗಿ GATE-2026 ಪರೀಕ್ಷೆಯ 'EC' (Electronics) ಪೇಪರ್ ಬರೆದು ಅರ್ಹತೆ (Qualified) ಪಡೆದಿರಬೇಕು.
ವಯೋಮಿತಿ (Age Limit)
- 27 ನವೆಂಬರ್ 2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 28 ವರ್ಷ ಮೀರಿರಬಾರದು.
- ವಯೋಮಿತಿ ಸಡಿಲಿಕೆ:
- OBC(NCL) ಅಭ್ಯರ್ಥಿಗಳಿಗೆ 3 ವರ್ಷ,
- SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ
- PwBD ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ ಹಾಗೂ ಪ್ರಮೋಷನ್ (Salary & Career Progression)
- ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷದ ತರಬೇತಿ (Training) ಪಡೆಯಲಿದ್ದು, ಈ ಅವಧಿಯಲ್ಲಿ 30,000/- ದಿಂದ 1,20,000/- ರೂ. ಮೂಲ ವೇತನದೊಂದಿಗೆ IDA, HRA ಹಾಗೂ ಇತರೆ ಭತ್ಯೆಗಳನ್ನು ನೀಡಲಾಗುವುದು.
- ಒಂದು ವರ್ಷದ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳನ್ನು 'ಸಹಾಯಕ ಎಂಜಿನಿಯರ್' (Assistant Engineer - E0 level) ಆಗಿ ಕಾಯಂಗೊಳಿಸಲಾಗುವುದು.
- ವಾರ್ಷಿಕ ಪ್ಯಾಕೇಜ್ (CTC): ಕಾಯಂಗೊಂಡ ಬಳಿಕ ಸರಿಸುಮಾರು ವಾರ್ಷಿಕ 14.33 ಲಕ್ಷ ರೂ. (CTC) ವೇತನ ಸಿಗಲಿದೆ.
ಆಯ್ಕೆ ಪ್ರಕ್ರಿಯೆ (Selection Process)
ಆಯ್ಕೆ ಪ್ರಕ್ರಿಯೆಯು GATE-2026 ಅಂಕಗಳು, ಗ್ರೂಪ್ ಡಿಸ್ಕಷನ್ (GD) ಹಾಗೂ ವೈಯಕ್ತಿಕ ಸಂದರ್ಶನವನ್ನು (Interview) ಒಳಗೊಂಡಿರುತ್ತದೆ. ಇದರ ತೂಕ (Weightage) ಹೀಗಿದೆ:
- GATE-2026 ಸ್ಕೋರ್: 85%
- ಗ್ರೂಪ್ ಡಿಸ್ಕಷನ್: 3%
- ವೈಯಕ್ತಿಕ ಸಂದರ್ಶನ: 12%
ಅರ್ಜಿ ಶುಲ್ಕ (Application Fee)
- ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ರೂ. 500/- (ಆನ್‌ಲೈನ್ ಮೂಲಕ ಪಾವತಿಸಬೇಕು).
- SC/ST/PwBD ಹಾಗೂ ಇಲಾಖಾ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿರುವುದಿಲ್ಲ.
ಪ್ರಮುಖ ದಿನಾಂಕಗಳು (Important Dates)
- ಅಧಿಸೂಚನೆ ಪ್ರಕಟಣೆ - 13-11-2026
- ಆನ್‌ಲೈನ್ ಅರ್ಜಿ ಆರಂಭ - 13-11-2026
- ಅರ್ಜಿ ಶುಲ್ಕ ಪಾವತಿ ಆರಂಭ - 13-11-2026\
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 27-11-2026
- ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ - 27-11-2026
- ಅರ್ಹತೆ ನಿರ್ಧರಿಸುವ ಕೊನೆಯ ದಿನಾಂಕ - 27-11-2026
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
- ಅಭ್ಯರ್ಥಿಯ ಸಹಿ.
- ಜನ್ಮ ದಿನಾಂಕದ ಪುರಾವೆ.
- ಪದವಿ ಪ್ರಮಾಣಪತ್ರ.
- ಎಲ್ಲಾ ಸೆಮಿಸ್ಟರ್‌ಗಳ ಅಥವಾ ವರ್ಷದ ಅಂಕಪಟ್ಟಿಗಳು.
- CGPA ಪರಿವರ್ತನೆ ನಿಯಮಗಳ ದಾಖಲೆ (ಅನ್ವಯಿಸಿದರೆ).
- ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ).
- EWS ಪ್ರಮಾಣಪತ್ರ (ಅನ್ವಯಿಸಿದರೆ).
- PwBD ಪ್ರಮಾಣಪತ್ರ (ಅನ್ವಯಿಸಿದರೆ).
- ಸರ್ಕಾರಿ ಅಥವಾ PSU ಉದ್ಯೋಗಿಗಳಿಗೆ NOC ಪ್ರಮಾಣಪತ್ರ.
ಅರ್ಜಿ ಸಲ್ಲಿಸುವ ವಿಧಾನ
- ಮೊದಲಿಗೆ POWERGRID ಅಧಿಕೃತ ವೆಬ್‌ಸೈಟ್ https://www.powergrid.in ಗೆ ಭೇಟಿ ನೀಡಿ.
- Career ವಿಭಾಗವನ್ನು ತೆರೆಯಿರಿ.
- Recruitment of Trainee Engineer (Electronics) through GATE-2026 ಎಂಬ ಅಧಿಸೂಚನೆಯನ್ನು ಆಯ್ಕೆಮಾಡಿ.
- ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
- ಆನ್‌ಲೈನ್ ಅರ್ಜಿ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಿ.
- GATE-2026 Application Number ಮತ್ತು Registration Number ನಮೂದಿಸಿ.
- ವೈಯಕ್ತಿಕ, ಶೈಕ್ಷಣಿಕ ಹಾಗೂ ಇತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ನಿಗದಿತ ಗಾತ್ರದಲ್ಲಿ ಅಪ್‌ಲೋಡ್ ಮಾಡಿ.
- ಅನ್ವಯವಾಗುವ ಅಭ್ಯರ್ಥಿಗಳು ₹500 ಅರ್ಜಿ ಶುಲ್ಕ ಪಾವತಿಸಿ.
- ಅರ್ಜಿಯನ್ನು Submit ಮಾಡಿ, ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಿ.
- ಭರ್ತಿ ಮಾಡಿದ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಿ.
- Start Date
- 17 ನವೆಂಬರ್ 2026
- End Date
- 27 ನವೆಂಬರ್ 2026
- Employment Type
- FULL_TIME
- Organization
- POWERGRID (Website)
- Location
- Saudamini, Plot No. 2, Sector 29,, Gurugram, Haryana, 122001
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.

.jpeg)