Add KPSC Vaani to your Home Screen. In Safari, tap Share, then Add to Home Screen.

ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗಾವಕಾಶ; ಯಾವುದೇ ಪರೀಕ್ಷೆ ಇಲ್ಲದೆ ನೇರ ಸಂದರ್ಶನದಿಂದ ಆಯ್ಕೆ!

ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗಾವಕಾಶ; ಯಾವುದೇ ಪರೀಕ್ಷೆ ಇಲ್ಲದೆ ನೇರ ಸಂದರ್ಶನದಿಂದ ಆಯ್ಕೆ!
Published by Heena Sheregar
1 hour ago Others Featured
Tags: Diploma M.Sc

ಮೈಸೂರಿನ ಪ್ರತಿಷ್ಠಿತ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ (AIISH) ಖಾಲಿ ಇರುವ ಸಂಶೋಧನಾ ಹುದ್ದೆಗಳ ಭರ್ತಿಗೆ ಬಂಪರ್ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ. ಸೀನಿಯರ್ ರಿಸರ್ಚ್ ಫೆಲೋ (SRF), ಜೂನಿಯರ್ ರಿಸರ್ಚ್ ಫೆಲೋ (JRF), ಪ್ರಾಜೆಕ್ಟ್ ಅಸಿಸ್ಟೆಂಟ್ ಹಾಗೂ ಸ್ಪೀಚ್ & ಹಿಯರಿಂಗ್ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ, ನೇರ ವಾಕ್-ಇನ್-ಇಂಟರ್‌ವ್ಯೂ (Walk-in-Interview) ಮೂಲಕ ಆಯ್ಕೆ ಮಾಡಲಾಗುತ್ತದೆ.   


ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (AIISH Mysore Recruitment 2026) ಖಾಲಿ ಇರುವ ವಿವಿಧ ಸಂಶೋಧನಾ ಮತ್ತು ತಾಂತ್ರಿಕ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ನವೆಂಬರ್ 5, 2026 ರಂದು ನೌಕರಿ ಬಯಸುವ ಅರ್ಹ ಅಭ್ಯರ್ಥಿಗಳಿಗೆ ವಾಕ್-ಇನ್-ಇಂಟರ್‌ವ್ಯೂ ಆಯೋಜಿಸಲಾಗಿದೆ.

 

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹42,000 ವರೆಗೆ ಆಕರ್ಷಕ ವೇತನದ ಜೊತೆಗೆ ಮನೆ ಬಾಡಿಗೆ ಭತ್ಯೆ (HRA) ಸಿಗಲಿದೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

 

 

AIISH, Mysore ನೇಮಕಾತಿಯ ಪ್ರಮುಖ ವಿವರಗಳು :

  • ಸಂಸ್ಥೆಯ ಹೆಸರು: ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (AIISH, Mysore)   
  • ಹುದ್ದೆಯ ಹೆಸರು: ಸೀನಿಯರ್ ರಿಸರ್ಚ್ ಫೆಲೋ (SRF), ಜೂನಿಯರ್ ರಿಸರ್ಚ್ ಫೆಲೋ (JRF), ಪ್ರಾಜೆಕ್ಟ್ ಅಸಿಸ್ಟೆಂಟ್ ಮತ್ತು ಸ್ಪೀಚ್ & ಹಿಯರಿಂಗ್ ಅಸಿಸ್ಟೆಂಟ್   
  • ಒಟ್ಟು ಹುದ್ದೆಗಳು: 04   
  • ವೇತನ ಶ್ರೇಣಿ: ಪ್ರತಿ ತಿಂಗಳು ₹25,000/- ರಿಂದ ₹42,000/- ರವರೆಗೆ (ಹುದ್ದೆಗೆ ಅನುಗುಣವಾಗಿ ಬದಲಾಗುತ್ತದೆ + HRA)   
  • ಉದ್ಯೋಗ ಸ್ಥಳ: ಮೈಸೂರು (ಕರ್ನಾಟಕ)   
  • ಅರ್ಜಿ ಸಲ್ಲಿಕೆ ವಿಧಾನ: ನೇರ ಸಂದರ್ಶನ (Walk-in-Interview) / ವರ್ಚುವಲ್ ಸಂದರ್ಶನ   
  • ಅಧಿಕೃತ ವೆಬ್‌ಸೈಟ್: www.aiishmysore.in   


ಹುದ್ದೆಗಳ ವಿವರ :

  • Senior Research Fellow (SRF)   : 01   ಹುದ್ದೆ  
  •  Junior Research Fellow (JRF)   : 01   ಹುದ್ದೆ
  •  Project Assistant   : 01   ಹುದ್ದೆ
  •  Speech & Hearing Assistant   : 01   ಹುದ್ದೆ
  • ಒಟ್ಟು ಹುದ್ದೆಗಳು: 4 ಹುದ್ದೆಗಳು  

 

ವಿದ್ಯಾರ್ಹತೆ [Qualifications]:

  • Senior Research Fellow (SRF)   : M.Sc (Audiology) / MASLP ಹಾಗೂ RCI ನೋಂದಣಿ.   
  • Junior Research Fellow (JRF)   : M.Sc (Audiology) ಅಥವಾ ಸಮಾನ ವಿದ್ಯಾರ್ಹತೆ (ಕನಿಷ್ಠ 55% ಅಂಕಗಳು).   
  • Project Assistant   : ECE/CSE/EEE/ಮೆಯ್ಟ್ರೋನಿಕ್ಸ್ ಅಥವಾ DHLS/DHA&ET ಡಿಪ್ಲೊಮಾ.   
  • Speech & Hearing Assistant   : ಸ್ಪೀಚ್ ಮತ್ತು ಹಿಯರಿಂಗ್ ಕ್ಷೇತ್ರದಲ್ಲಿ ಡಿಪ್ಲೊಮಾ (DHLS/DHA&ET/DECSE).   

 

ವೇತನ ಶ್ರೇಣಿ:

  •  ಸೀನಿಯರ್ ರಿಸರ್ಚ್ ಫೆಲೋ (SRF): ₹42,000/- + 20% HRA (ಪ್ರತಿ ತಿಂಗಳು)   
  •  ಜೂನಿಯರ್ ರಿಸರ್ಚ್ ಫೆಲೋ (JRF): ₹37,000/- + 18% HRA (ಪ್ರತಿ ತಿಂಗಳು)   
  •  ಪ್ರಾಜೆಕ್ಟ್ ಅಸಿಸ್ಟೆಂಟ್: ₹25,000/- (ಪ್ರತಿ ತಿಂಗಳು)   
  •  ಸ್ಪೀಚ್ & ಹಿಯರಿಂಗ್ ಅಸಿಸ್ಟೆಂಟ್ / ಟೆಕ್ನಿಷಿಯನ್: ₹25,000/- (ಪ್ರತಿ ತಿಂಗಳು)   

 

 

ಪ್ರಮುಖ ದಿನಾಂಕಗಳು [Important Dates]

  • ಅಧಿಸೂಚನೆ ದಿನಾಂಕ: ಅಕ್ಟೋಬರ್ 28, 2026   
  • ವರ್ಚುವಲ್ ಸಂದರ್ಶನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 04, 2026 (ಸಂಜೆ 04:00 ರವರೆಗೆ)   
  • ನೇರ ಸಂದರ್ಶನ ದಿನಾಂಕ (Walk-in Interview Date): ನವೆಂಬರ್ 05, 2026 (ಬೆಳಿಗ್ಗೆ 10:30 ಗಂಟೆಗೆ)   

 

ಅರ್ಜಿ ಶುಲ್ಕ ವಿವರಗಳು [Application Fee]: ಅಭ್ಯರ್ಥಿಗಳು BHIM QR ಕೋಡ್ ಮೂಲಕ ಶುಲ್ಕ ಪಾವತಿಸಬೇಕು:   

  • ಸಾಮಾನ್ಯ ವರ್ಗ, OBC ಮತ್ತು EWS ಅಭ್ಯರ್ಥಿಗಳಿಗೆ: ₹140/- (GST ಸೇರಿದಂತೆ)   
  • SC / ST ಅಭ್ಯರ್ಥಿಗಳಿಗೆ: ₹60/- (GST ಸೇರಿದಂತೆ)   
  • ಮಹಿಳೆಯರು ಮತ್ತು PwBD (ಅಂಗವಿಕಲ) ಅಭ್ಯರ್ಥಿಗಳಿಗೆ: ಸಂಪೂರ್ಣ ವಿನಾಯಿತಿ ಇದೆ.   

 

ಅರ್ಜಿ ಸಲ್ಲಿಕೆ ವಿಧಗಳು:

  • ನೇರ ಸಂದರ್ಶನದಲ್ಲಿ ಭೇಟಿ ನೀಡುವುದು: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಸ್ವಯಂ-ದೃಢೀಕೃತ ಪ್ರತಿಗಳೊಂದಿಗೆ ಸಂದರ್ಶನದ ದಿನದಂದು (05.11.2026) ಬೆಳಿಗ್ಗೆ 9:30 ರೊಳಗೆ ಹಾಜರಾಗಬೇಕು.  
  • ವರ್ಚುವಲ್ ಸಂದರ್ಶನ (Virtual Interview): ನೇರ ಸಂದರ್ಶನದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಲು ಇಚ್ಛಿಸುವವರು, ಭರ್ತಿ ಮಾಡಿದ ಅರ್ಜಿ ಹಾಗೂ ಎಲ್ಲಾ ದಾಖಲೆಗಳನ್ನು ಸಂದರ್ಶನಕ್ಕೂ ಒಂದು ದಿನ ಮುಂಚಿತವಾಗಿ ಅಂದರೆ 04.11.2026 ರ ಸಂಜೆ 04:00 ರೊಳಗೆ personnelsection@aiishmysore.in ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.   

 

ವಾಕ್-ಇನ್-ಇಂಟರ್‌ವ್ಯೂ ಸ್ಥಳ [Interview Venue]

Dean (Research) Cell, 
COE Building,
All India Institute of Speech and Hearing (AIISH),
Manasagangothri, 
Mysore - 570006.   

 

ವರ್ಚುವಲ್ ಸಂದರ್ಶನದ ಮೂಲಕ ಹಾಜರಾಗಲು ಇಮೇಲ್ ವಿವರಗಳು: personnelsection@aiishmysore.in

Job Overview
No. of posts
4
End Date
4 ನವೆಂಬರ್ 2026
Pay Scale
25000 - 42000 INR
Employment Type
FULL_TIME
Organization
The All India Institute of Speech and Hearing (AIISH), Mysore (Website)
Location
Manasagangothri, Mysore, KA, 570006
To download official notification
Related Tags: Diploma M.Sc
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.