ವಿದ್ಯಾರ್ಹತೆ ಬೇಕಿಲ್ಲ, ಲಿಖಿತ ಪರೀಕ್ಷೆಯೂ ಇಲ್ಲ! ಬೀದರ ಮಹಾನಗರ ಪಾಲಿಕೆಯಲ್ಲಿ 264 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಸಂಗ್ರಹಬೀದರ್ ಜಿಲ್ಲೆಯ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಪ್ರಮುಖ ಹಾಗೂ ಸುವರ್ಣ ಅವಕಾಶ! ಜಿಲ್ಲಾ ನಗರಾಭಿವೃದ್ಧಿ ಕೋಶ, ಬೀದರ್ ವತಿಯಿಂದ ಬೀದರ್ ಮಹಾನಗರ ಪಾಲಿಕೆ ಹಾಗೂ ಬಸವಕಲ್ಯಾಣ ನಗರಸಭೆಯಲ್ಲಿ ಖಾಲಿ ಇರುವ 264 ಪೌರಕಾರ್ಮಿಕ (ನೇರ ಪಾವತಿ) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಬೀದರ್ ನಗರ ನಿಗಮವು ಜುಲೈ 2026 ರ ಅಧಿಕೃತ ಅಧಿಸೂಚನೆಯ ಮೂಲಕ ನಾಗರಿಕ ಸೇವಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೀದರ್ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 10-ಆಗಸ್ಟ್-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಯಾವುದೇ ಲಿಖಿತ ಪರೀಕ್ಷೆ ಅಥವಾ ನಿರ್ದಿಷ್ಟ ಶೈಕ್ಷಣಿಕ ವಿದ್ಯಾರ್ಹತೆಯ ಹಂಗಿಲ್ಲದೆ ನೇರ ಪಾವತಿ (Direct Payment) ಆಧಾರದ ಮೇಲೆ ಈ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೀದರ ಪೌರಕಾರ್ಮಿಕ ನೇಮಕಾತಿ 2026: ಮುಖ್ಯಾಂಶಗಳು
- ನೇಮಕಾತಿ ಪ್ರಾಧಿಕಾರ : ಜಿಲ್ಲಾ ನಗರಾಭಿವೃದ್ಧಿ ಕೋಶ, ಬೀದರ
- ಹುದ್ದೆಯ ಹೆಸರು : ಪೌರಕಾರ್ಮಿಕ (Sanitation Worker)
- ಒಟ್ಟು ಹುದ್ದೆಗಳು : 264 ಹುದ್ದೆಗಳು
- ನೇಮಕಾತಿ ವಿಧಾನ : ನೇರ ಪಾವತಿ (Direct Pay) ಮುಖಾಂತರ
- ಅರ್ಜಿ ಸಲ್ಲಿಕೆ ಪ್ರಾರಂಭ : 18 ಜುಲೈ 2026
- ಕೊನೆಯ ದಿನಾಂಕ : 10 ಆಗಸ್ಟ್ 2026 (ಸಂಜೆ 5:30 ರವರೆಗೆ)

ಸ್ಥಳೀಯ ಸಂಸ್ಥೆವಾರು ಹುದ್ದೆಗಳ ವಿಂಗಡನೆ (Vacancy Details)
ಬೀದರ್ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳ ವಿಂಗಡಣೆ ಕೆಳಗಿನಂತಿದೆ:
- ಬೀದರ್ ಮಹಾನಗರ ಪಾಲಿಕೆ: 205 ಹುದ್ದೆಗಳು
- ಬಸವಕಲ್ಯಾಣ ನಗರಸಭೆ: 59 ಹುದ್ದೆಗಳು
- ಒಟ್ಟು ಹುದ್ದೆಗಳು: 264
- ಈ ಹುದ್ದೆಗಳಿಗೆ ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯ (SSLC/PUC) ಅಗತ್ಯವಿರುವುದಿಲ್ಲ.
- ಅಭ್ಯರ್ಥಿಗಳಿಗೆ ಸ್ಪಷ್ಟವಾಗಿ ಕನ್ನಡ ಭಾಷೆಯಲ್ಲಿ ಮಾತನಾಡಲು ಬರಬೇಕು.
ಇದನ್ನು ಓದಿ : AIIMS ಬೃಹತ್ ನೇಮಕಾತಿ 2026: 2218 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 90 ಸಾವಿರಕ್ಕೂ ಹೆಚ್ಚು ಸಂಬಳ!
ಯಾರಿಗೆ ಮೊದಲ ಆದ್ಯತೆ ಸಿಗಲಿದೆ? (Selection Priorities)
ಈ ನೇಮಕಾತಿಯು ನೇರ ಪಾವತಿ ಅಡಿಯಲ್ಲಿ ನಡೆಯುವುದರಿಂದ ಕೆಳಗಿನ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು:
- ಸ್ಥಳೀಯ ಸಂಸ್ಥೆಗಳ ನೌಕರರು: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಠ 1 ವರ್ಷ ಹೊರಗುತ್ತಿಗೆ, ದಿನಗೂಲಿ ಅಥವಾ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರು, ಲೋಡರ್ಸ್, ಯುಜಿಡಿ ಹೆಲ್ಪರ್ಸ್, ಕ್ಲೀನರ್ಸ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವವರು (ESI/PF/ಬ್ಯಾಂಕ್ ಪಾಸ್‌ಬುಕ್ ದಾಖಲೆ ಕಡ್ಡಾಯ).
- ಮೃತರ ಕುಟುಂಬಸ್ಥರು: ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕೋವಿಡ್-19 ಅಥವಾ ಇತರೆ ಕಾರಣಗಳಿಂದ ಮರಣ ಹೊಂದಿದ ಪೌರಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಆದ್ಯತೆ.
- ತ್ಯಾಜ್ಯ ನಿರ್ವಹಣೆ ಸಿಬ್ಬಂದಿ: ಶೂನ್ಯ ತ್ಯಾಜ್ಯ ಘಟಕಗಳು ಹಾಗೂ ಸಾರ್ವಜನಿಕ ಶೌಚಾಲಯ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವುಳ್ಳವರು.
- ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕಾಯ್ದೆ: ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಅಧಿನಿಯಮದಡಿ ಶೇ.10 ರಷ್ಟು ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
- ಗಮನಿಸಿ: ಈ ನೇರ ಪಾವತಿ ನೇಮಕಾತಿ ಪ್ರಕ್ರಿಯೆಯು ಸರ್ಕಾರದ ಸಾಮಾನ್ಯ ಮೀಸಲಾತಿ ಅಧಿನಿಯಮಕ್ಕೆ ಒಳಪಡುವುದಿಲ್ಲ
- ವೇತನ ಶ್ರೇಣಿ: ಕಾರ್ಮಿಕ ಇಲಾಖೆಯ ನಿಯಮಾವಳಿಗಳಂತೆ ಕನಿಷ್ಠ ವೇತನ, ಇ.ಎಸ್.ಐ (ESI) ಮತ್ತು ಪಿ.ಎಫ್ (PF) ಸೌಲಭ್ಯಗಳನ್ನು ನೀಡಲಾಗುತ್ತದೆ.
- ಆರೋಗ್ಯ ಸ್ಥಿತಿ: ಅಭ್ಯರ್ಥಿಗಳು ಸಂಪೂರ್ಣ ಆರೋಗ್ಯವಂತರಾಗಿರಬೇಕು ಹಾಗೂ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ.
- ನೇಮಕಾತಿ ಸ್ವರೂಪ: ಆಯ್ಕೆಯಾದ ನೌಕರರು ತಾತ್ಕಾಲಿಕವಾಗಿ ನೇರ ಪಾವತಿಯಡಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ಅಗತ್ಯ ದಾಖಲೆಗಳು
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಈ ಕೆಳಗಿನ ದಾಖಲೆಗಳ ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು:
- ಪೂರ್ಣಗೊಳಿಸಿದ ನಿಗದಿತ ಅರ್ಜಿ ನಮೂನೆ
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಜನ್ಮ ದಿನಾಂಕ/ಗುರುತಿನ ಚೀಟಿ (ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ (EPIC) / ಪಡಿತರ ಚೀಟಿ)
- ಕನಿಷ್ಠ 1 ವರ್ಷದ ಸೇವಾ ಅನುಭವದ ದಾಖಲೆ (ESI/EPF ಪಾವತಿ ಪ್ರತಿ ಅಥವಾ ಬ್ಯಾಂಕ್ ಪಾಸ್‌ಬುಕ್ / ಹಾಜರಾತಿ ಪ್ರತಿ)
- ಮೃತರಾದ ಪೌರಕಾರ್ಮಿಕರ ಕುಟುಂಬದವರಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು.
ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದೊಳಗಾಗಿ ಸಂಬಂಧಿಸಿದ ಕಚೇರಿಗೆ ಅರ್ಜಿಗಳನ್ನು ತಲುಪಿಸಬೇಕಾಗಿದೆ.
1. ಬೀದರ್ ಮಹಾನಗರ ಪಾಲಿಕೆ:
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 18 ಜುಲೈ 2026 (ಬೆಳಿಗ್ಗೆ 10:30 ರಿಂದ)
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10 ಆಗಸ್ಟ್ 2026 (ಸಂಜೆ 05:30 ರವರೆಗೆ)
- ಅರ್ಜಿ ಸಲ್ಲಿಸಬೇಕಾದ ವಿಳಾಸ: ಆಯುಕ್ತರು, ಬೀದರ್ ಮಹಾನಗರ ಪಾಲಿಕೆ ಕಾರ್ಯಾಲಯ, ಬೀದರ್.
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 28 ಜುಲೈ 2026 (ಬೆಳಿಗ್ಗೆ 10:30 ರಿಂದ)
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10 ಆಗಸ್ಟ್ 2026 (ಸಂಜೆ 05:30 ರವರೆಗೆ)
- ಅರ್ಜಿ ಸಲ್ಲಿಸಬೇಕಾದ ವಿಳಾಸ: ಪೌರಾಯುಕ್ತರು, ನಗರಸಭೆ ಕಾರ್ಯಾಲಯ, ಬಸವಕಲ್ಯಾಣ.
Job Overview
- No. of posts
- 264
- End Date
- 10 ಆಗಸ್ಟ್ 2026
- Employment Type
- FULL_TIME
- Organization
- Bidar City Corporation (Website)
- Location
- Bidar City Corporation. Behind District Jail Zilla Banjara Bhavan, Bidar, KA, 585401
Comments