Add KPSC Vaani to your Home Screen. In Safari, tap Share, then Add to Home Screen.

ಸರ್ಕಾರಿ ಉದ್ಯೋಗದ ಭರ್ಜರಿ ಅವಕಾಶ: KEA ರೇಷ್ಮೆ & ಕೃಷಿ ಇಲಾಖೆಯಲ್ಲಿ ಗ್ರೂಪ್-ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ತಿಂಗಳಿಗೆ ₹83,700 ವರೆಗೆ ವೇತನ.

ಸರ್ಕಾರಿ ಉದ್ಯೋಗದ ಭರ್ಜರಿ ಅವಕಾಶ: KEA ರೇಷ್ಮೆ & ಕೃಷಿ ಇಲಾಖೆಯಲ್ಲಿ ಗ್ರೂಪ್-ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ತಿಂಗಳಿಗೆ ₹83,700 ವರೆಗೆ ವೇತನ.
Published by Yallamma G
45 minutes ago Karnataka Examination Authority Featured
Tags: PUC

ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ 2026: KEA ಮೂಲಕ 38 ಗ್ರೂಪ್-C ಹುದ್ದೆಗಳ ಭರ್ತಿ. ರೇಷ್ಮೆ ನಿರೀಕ್ಷಕರು ಮತ್ತು ಮಾರುಕಟ್ಟೆ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ, ವಿದ್ಯಾರ್ಹತೆ, ವಯೋಮಿತಿ, ವೇತನ ಹಾಗೂ ಪರೀಕ್ಷಾ ವಿವರಗಳು.

 

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶವೊಂದು ಒದಗಿಬಂದಿದೆ. ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆಯಲ್ಲಿ (Karnataka Sericulture Department) ಕಲ್ಯಾಣ ಕರ್ನಾಟಕ ವೃಂದದಡಿ ಖಾಲಿ ಇರುವ ಗ್ರೂಪ್-C ವೃಂದದ ಒಟ್ಟು 38 ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.

 

ಈ ನೇಮಕಾತಿಯಡಿ ರೇಷ್ಮೆ ನಿರೀಕ್ಷಕರು (Sericulture Inspectors) ಮತ್ತು ಮಾರುಕಟ್ಟೆ ಮೇಲ್ವಿಚಾರಕರು (Marketing Supervisors) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿಶೇಷವಾಗಿ ರೇಷ್ಮೆ ಕೃಷಿ, ಕೃಷಿ ಮಾರುಕಟ್ಟೆ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

 

ಆಯ್ಕೆಯಾದ ಅಭ್ಯರ್ಥಿಗಳಿಗೆ ₹44,425ರಿಂದ ₹83,700ರವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2026ರ ನವೆಂಬರ್ 18ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ.

 

ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ, ಪರೀಕ್ಷಾ ಮಾದರಿ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

 

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..

 

ಪ್ರಮುಖ ವಿವರಗಳು : 

  • ನೇಮಕಾತಿ ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
  • ಇಲಾಖೆ : ಕರ್ನಾಟಕ ರೇಷ್ಮೆ ಇಲಾಖೆ
  • ಹುದ್ದೆಗಳ ಹೆಸರು : ರೇಷ್ಮೆ ನಿರೀಕ್ಷಕರು, ಮಾರುಕಟ್ಟೆ ಮೇಲ್ವಿಚಾರಕರು
  • ಹುದ್ದೆಗಳ ವರ್ಗ : ಗ್ರೂಪ್-C
  • ವೇತನ ಶ್ರೇಣಿ : ₹44,425–83,700
  • ಅರ್ಜಿ ವಿಧಾನ : ಆನ್‌ಲೈನ್
  • ಅಧಿಕೃತ ವೆಬ್‌ಸೈಟ್ : cetonline.karnataka.gov.in/kea 

 

ಹುದ್ದೆಗಳ ವಿವರ (Vacancy Details)

  • ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ನಿರೀಕ್ಷಕರು (Sericulture Inspector) - 34
  • ಕೃಷಿ ಮಾರಾಟ ಇಲಾಖೆಯಲ್ಲಿನ ಮಾರುಕಟ್ಟೆ ಮೇಲ್ವಿಚಾರಕ (Market Supervisor) - 04 (03 + 01 ಹಿಂಬಾಕಿ)  
  • ಒಟ್ಟು ಹುದ್ದೆಗಳು - 38 (37 + 01 ಹಿಂಬಾಕಿ)

 

 

ಪ್ರಮುಖ ದಿನಾಂಕಗಳು (Important Dates):

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 18.11.2026.  
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.12.2026.  
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ: 16.12.2026.  
  • ಕನ್ನಡ ಭಾಷಾ ಪರೀಕ್ಷೆ ದಿನಾಂಕ: 08.01.2027 (ಮಧ್ಯಾಹ್ನ 3:00 ರಿಂದ 5:00 ರವರೆಗೆ).  
  • ಸ್ಪರ್ಧಾತ್ಮಕ ಪರೀಕ್ಷೆ (ಪತ್ರಿಕೆ-1 & 2): ಫೆಬ್ರವರಿ 2027 ರಲ್ಲಿ ನಡೆಸಲಾಗುವುದು (ವಿವರವಾದ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು).

 

ಶೈಕ್ಷಣಿಕ ವಿದ್ಯಾರ್ಹತೆ (Educational Qualification):

1. ರೇಷ್ಮೆ ನಿರೀಕ್ಷಕರು (Sericulture Inspector):

  • ರೇಷ್ಮೆ ಕೃಷಿಯಲ್ಲಿ ಪದವಿ (Degree in Sericulture) ಅಥವಾ ವಿಜ್ಞಾನ ಪದವಿಯೊಂದಿಗೆ ರೇಷ್ಮೆ ಕೃಷಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ (PG Diploma in Sericulture) ಹೊಂದಿರಬೇಕು.  
  • ವಿಶೇಷ ಅವಕಾಶ: ಮೇಲಿನ ವಿದ್ಯಾರ್ಹತೆ ಹೊಂದಿರುವ ಸೂಕ್ತ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಸಸ್ಯಶಾಸ್ತ್ರ (Botany), ಪ್ರಾಣಿಶಾಸ್ತ್ರ (Zoology) ಅಥವಾ ರೇಷ್ಮೆ ಕೃಷಿಯನ್ನು ಒಂದು ವಿಷಯವಾಗಿ ಓದಿರುವ ವಿಜ್ಞಾನ ಪದವೀಧರರು (B.Sc) ಅಥವಾ ಕೃಷಿ (B.Sc Agriculture) / ತೋಟಗಾರಿಕೆ (B.Sc Horticulture) ಪದವೀಧರರನ್ನು ಪರಿಗಣಿಸಲಾಗುವುದು.  

 

2. ಮಾರುಕಟ್ಟೆ ಮೇಲ್ವಿಚಾರಕ (Market Supervisor):

  • ICAR ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯದಿಂದ B.Sc. / B.Sc. (Hons) in Agricultural Marketing and Co-operation ಅಥವಾ B.Sc. (Hons) in Agricultural Business Management ಪದವಿ ಹೊಂದಿರಬೇಕು.  
  • ಗಮನಿಸಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದೊಳಗೆ (15.12.2026) ನಿಗದಿತ ಪದವಿಯ ಅಂಕಪಟ್ಟಿ/ಪ್ರಮಾಣ ಪತ್ರ ಹೊಂದಿರಬೇಕು. ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.  

 

ವೇತನ ಶ್ರೇಣಿ:

  • ರೇಷ್ಮೆ ನಿರೀಕ್ಷಕರು  : ₹44,425 - ₹83,700
  • ಮಾರುಕಟ್ಟೆ ಮೇಲ್ವಿಚಾರಕ : ₹44,425 - ₹83,700 

 

ಇದನ್ನು ಓದಿ : Forest Guard Recruitment 2026: ಪಿಯುಸಿ ಆದವರಿಗೆ ಭರ್ಜರಿ ಗುಡ್ ನ್ಯೂಸ್! 450 ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ.  

 

ವಯೋಮಿತಿ (Age Limit) & 5 ವರ್ಷಗಳ ಸಡಿಲಿಕೆ:
ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಸರ್ಕಾರದ ವಿಶೇಷ ಆದೇಶದನ್ವಯ ಒಂದು ಬಾರಿಗೆ ಅನ್ವಯವಾಗುವಂತೆ 5 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆ ನೀಡಲಾಗಿದ್ದು, ಪರಿಷ್ಕೃತ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:   

  • ಸಾಮಾನ್ಯ ಅರ್ಹತೆ (GM): 40 ವರ್ಷಗಳು.  
  • ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ: 43 ವರ್ಷಗಳು.  
  • ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST) / ಪ್ರವರ್ಗ-1: 45 ವರ್ಷಗಳು.
  • (ವಿಶೇಷಚೇತನರು, ವಿಧವೆಯರು, ಜೀತ ಕಾರ್ಮಿಕರಿಗೆ 10 ವರ್ಷ ಹಾಗೂ ಮಾಜಿ ಸೈನಿಕರಿಗೆ ನಿಯಮಾನುಸಾರ ಹೆಚ್ಚುವರಿ ಸಡಿಲಿಕೆ ಇರುತ್ತದೆ).

 

ಅರ್ಜಿ ಶುಲ್ಕದ ವಿವರ (Application Fee):

  • ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ/2ಬಿ/3ಎ/3ಬಿ: ರೂ. 750/-.  
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 / ಮಾಜಿ ಸೈನಿಕ / ತೃತೀಯ ಲಿಂಗಿ: ರೂ. 500/-.  
  • ವಿಶೇಷ ಚೇತನ ಅಭ್ಯರ್ಥಿಗಳಿಗೆ (PwD): ರೂ. 250/-.
  • (ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು ಮತ್ತು ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ). 

 

ಪರೀಕ್ಷಾ ವಿಧಾನ ಮತ್ತು ಪಠ್ಯಕ್ರಮ (Exam Pattern & Syllabus):
ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್‌ಲೈನ್-ಒಎಂಆರ್ (Offline-OMR) ಮಾದರಿಯಲ್ಲಿ ನಡೆಸಲಾಗುವುದು.

 

 

ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಪರೀಕ್ಷಾ ನಿಯಮಗಳು:

  • ಕಡ್ಡಾಯ ಕನ್ನಡ ಪರೀಕ್ಷೆ: ಎಸ್.ಎಸ್.ಎಲ್.ಸಿ ಅಥವಾ ಉನ್ನತ ಮಟ್ಟದಲ್ಲಿ ಕನ್ನಡವನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಅಥವಾ ಕನ್ನಡ ಮಾಧ್ಯಮದಲ್ಲಿ ಓದದ ಅಭ್ಯರ್ಥಿಗಳಿಗೆ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆ ಇರುತ್ತದೆ (ಕನಿಷ್ಠ 50 ಅಂಕ ಪಡೆಯುವುದು ಕಡ್ಡಾಯ).  
  • ಕನಿಷ್ಠ 35% ಅಂಕಗಳು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಗೆ ಅರ್ಹತೆ ಪಡೆಯಲು ಕನಿಷ್ಠ ಶೇ. 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯ.  
  • ಋಣಾತ್ಮಕ ಮೌಲ್ಯಮಾಪನ (Negative Marking): ಪ್ರತಿ ತಪ್ಪು ಉತ್ತರಕ್ಕೆ 0.25 (1/4) ಅಂಕಗಳನ್ನು ಕಡಿತಗೊಳಿಸಲಾಗುವುದು. 
  • OMR 5ನೇ ವೃತ್ತದ ನಿಯಮ: ಉತ್ತರಿಸದೇ ಇರುವ ಪ್ರಶ್ನೆಗಳಿಗೆ OMR ಶೀಟ್‌ನಲ್ಲಿ 5ನೇ ವೃತ್ತವನ್ನು ಶೇಡ್ ಮಾಡಲು ಕೊನೆಯ ಬೆಲ್ ನಂತರ ಹೆಚ್ಚುವರಿ 5 ನಿಮಿಷ ನೀಡಲಾಗುವುದು. ಯಾವುದೇ ವೃತ್ತ ಶೇಡ್ ಮಾಡದೇ ಖಾಲಿ ಬಿಟ್ಟರೆ 0.25 ಅಂಕ ಕಡಿತವಾಗುತ್ತದೆ. 

 

 

ಅರ್ಜಿ ಸಲ್ಲಿಸುವ ವಿಧಾನ

ಹಂತ 1: ಮೊದಲು KEA ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಹಂತ 2: ನೇಮಕಾತಿ ಅಥವಾ Recruitment ವಿಭಾಗದಲ್ಲಿ ರೇಷ್ಮೆ ಇಲಾಖೆ ನೇಮಕಾತಿ 2026ರ ಅಧಿಸೂಚನೆಯನ್ನು ಹುಡುಕಿ.
ಹಂತ 3: ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಿಮ್ಮ ವಿದ್ಯಾರ್ಹತೆಗೆ ಹೊಂದುವ ಹುದ್ದೆಯನ್ನು ಖಚಿತಪಡಿಸಿಕೊಳ್ಳಿ.
ಹಂತ 4: ಆನ್‌ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವೈಯಕ್ತಿಕ ವಿವರಗಳನ್ನು ನಮೂದಿಸಿ.
ಹಂತ 5: ಶೈಕ್ಷಣಿಕ ಅರ್ಹತೆ, ಮೀಸಲಾತಿ ಮತ್ತು ಇತರೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.
ಹಂತ 6: ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ನಿಗದಿತ ಸ್ವರೂಪದಲ್ಲಿ ಅಪ್‌ಲೋಡ್ ಮಾಡಿ.
ಹಂತ 7: ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
ಹಂತ 8: ಅರ್ಜಿಯನ್ನು ಪರಿಶೀಲಿಸಿ ಅಂತಿಮವಾಗಿ ಸಲ್ಲಿಸಿ.
ಹಂತ 9: ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಮತ್ತು ಶುಲ್ಕ ಪಾವತಿ ರಸೀದಿಯನ್ನು ಡೌನ್‌ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ.

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

  • ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿ.
  • SSLC ಅಂಕಪಟ್ಟಿ.
  • ಪದವಿ ಪ್ರಮಾಣಪತ್ರ.
  • ಪದವಿ ಅಂಕಪಟ್ಟಿಗಳು.
  • ರೇಷ್ಮೆ ಕೃಷಿ ಸ್ನಾತಕೋತ್ತರ ಡಿಪ್ಲೊಮಾ ಪ್ರಮಾಣಪತ್ರ (ಅನ್ವಯಿಸಿದಲ್ಲಿ).
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯಿಸಿದಲ್ಲಿ).
  • ಕಲ್ಯಾಣ ಕರ್ನಾಟಕ ಸ್ಥಳೀಯ ಅಭ್ಯರ್ಥಿ ಪ್ರಮಾಣಪತ್ರ (ಅನ್ವಯಿಸಿದಲ್ಲಿ).
  • ಇತ್ತೀಚಿನ ಭಾವಚಿತ್ರ.
  • ಸಹಿ.
  • ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ.

 

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

 

ಕೊನೆಯ ಮಾತು
ಕರ್ನಾಟಕ ರೇಷ್ಮೆ ಇಲಾಖೆಯ ಈ ನೇಮಕಾತಿಯು ರೇಷ್ಮೆ ಕೃಷಿ, ಕೃಷಿ ಮಾರುಕಟ್ಟೆ ಮತ್ತು ಸಂಬಂಧಿತ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಉತ್ತಮ ಸರ್ಕಾರಿ ಉದ್ಯೋಗಾವಕಾಶವಾಗಿದೆ.

 

ಒಟ್ಟು 38 ಹುದ್ದೆಗಳ ಪೈಕಿ 34 ರೇಷ್ಮೆ ನಿರೀಕ್ಷಕರು ಮತ್ತು 4 ಮಾರುಕಟ್ಟೆ ಮೇಲ್ವಿಚಾರಕರು ಹುದ್ದೆಗಳಿದ್ದು, ಎರಡೂ ಹುದ್ದೆಗಳಿಗೆ ಪ್ರತ್ಯೇಕ ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದೆ.

 

ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ತಮ್ಮ ಅರ್ಹತೆಯನ್ನು ಪರಿಶೀಲಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪರೀಕ್ಷೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿ, KEA ಪ್ರಕಟಿಸುವ ಮುಂದಿನ ಸೂಚನೆಗಳು, ಪ್ರವೇಶ ಪತ್ರ ಮತ್ತು ಪರೀಕ್ಷಾ ವೇಳಾಪಟ್ಟಿಯನ್ನು ಗಮನಿಸುತ್ತಿರಿ.

 

ಇಂತಹ ಇನ್ನಷ್ಟು ಕರ್ನಾಟಕ ಸರ್ಕಾರಿ ಉದ್ಯೋಗ ಅಧಿಸೂಚನೆಗಳು, ಪರೀಕ್ಷಾ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳಿಗಾಗಿ KPSCVaani ಜಾಲತಾಣವನ್ನು ನಿಯಮಿತವಾಗಿ ಭೇಟಿ ನೀಡಿ.

Job Overview
No. of posts
38
Start Date
20 ನವೆಂಬರ್ 2026
End Date
15 ಡಿಸೆಂಬರ್ 2026
Last Payment
16 ಡಿಸೆಂಬರ್ 2026
Pay Scale
44425 - 83700 INR
Employment Type
FULL_TIME
Organization
KEA (Website)
Location
5ನೇ ಮಹಡಿ, ಬಹುಮಹಡಿ ಕಟ್ಟಡ (ಎಂ.ಎಸ್. ಬಿಲ್ಡಿಂಗ್), ಡಾ. ಬಿ.ಆರ್. ಅಂಬೇಡ್ಕರ್ ವೀಧಿ,, ಬೆಂಗಳೂರು, KA, ಬೆಂಗಳೂ
To download official notification
Related Tags: PUC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.