ಬೆಳಗಾವಿ ಜಿಲ್ಲಾ ಪಂಚಾಯತ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ: ಪದವೀಧರರಿಗೆ ₹35,000 ವರೆಗೆ ಸಂಬಳದ ಕೆಲಸ!
ನಿಮ್ಮದೊಂದು ಸರ್ಕಾರಿ ಸಂಘಟನೆ ಅಥವಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಕನಸೇ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ಧನ ಸಂಸ್ಥೆ (KSRLPS) ‘ಸಂಜೀವಿನಿ’ ಯೋಜನೆ ಅಡಿಯಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ 17 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಬೆಳಗಾವಿ ಜಿಲ್ಲಾ ಪಂಚಾಯತ್ ಜುಲೈ 2026 ರ ಅಧಿಕೃತ ಅಧಿಸೂಚನೆಯ ಮೂಲಕ ಜಿಲ್ಲಾ ವ್ಯವಸ್ಥಾಪಕರು, ಕ್ಲಸ್ಟರ್ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಳಗಾವಿಯಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು - ಕರ್ನಾಟಕ ಸರ್ಕಾರ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 15-ಜುಲೈ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹೊರಗುತ್ತಿಗೆ ಆಧಾರದ ಮೇರೆಗೆ (ರಾಮ್ ಕಂಪ್ಯೂಟರ್ಸ್ ಸಂಸ್ಥೆಯ ಮೂಲಕ) ಈ ನೇಮಕಾತಿ ನಡೆಯುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಉದ್ಯೋಗದ ಸಂಪೂರ್ಣ ವಿವರಗಳು, ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ಸವಿಸ್ತಾರವಾಗಿ ನೀಡಲಾಗಿದೆ.
ಪ್ರಮುಖ ಉದ್ಯೋಗ ಮಾಹಿತಿ (Job Overview)
- ನೇಮಕಾತಿ ಸಂಸ್ಥೆ: ಸಂಜೀವಿನಿ - ಕೆ.ಎಸ್.ಆರ್.ಎಲ್.ಪಿ.ಎಸ್ (KSRLPS), ಬೆಳಗಾವಿ ಜಿಲ್ಲಾ ಪಂಚಾಯತ್.
- ಮೂಲ ಸಂಸ್ಥೆ (Outsourcing Agency): ರಾಮ್ ಕಂಪ್ಯೂಟರ್ಸ್ (Ram Computers).
- ಒಟ್ಟು ಹುದ್ದೆಗಳು: 17 ಹುದ್ದೆಗಳು.
- ಕೆಲಸದ ಸ್ಥಳ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ಮತ್ತು ವಿವಿಧ ತಾಲೂಕುಗಳು.
- ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 01 ಜುಲೈ 2026.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಜುಲೈ 2026.
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮಾತ್ರ.

ಹುದ್ದೆಗಳ ವಿವರ
ಈ ನೇಮಕಾತಿಯನ್ನು ಎರಡು ಅನುಬಂಧಗಳ ಅಡಿಯಲ್ಲಿ ವಿಂಗಡಿಸಲಾಗಿದೆ. ಚಿಕ್ಕೋಡಿ ಉಪವಿಭಾಗ ಮಟ್ಟದ ಹುದ್ದೆಗಳು ಮತ್ತು ತಾಲೂಕು ನಿರ್ವಹಣಾ ಘಟಕಗಳ (TMMU) ಹುದ್ದೆಗಳ ವಿವರ ಕೆಳಗಿನಂತಿದೆ.
ಅನುಬಂಧ-1: ಚಿಕ್ಕೋಡಿ ಉಪವಿಭಾಗ ಮಟ್ಟದ ಹುದ್ದೆಗಳು
- 1 ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು (District Program Manager) : 01
- 2 ಜಿಲ್ಲಾ ವ್ಯವಸ್ಥಾಪಕರು - SM & CD : 01
- 3 ಜಿಲ್ಲಾ ವ್ಯವಸ್ಥಾಪಕರು - ಫಾರ್ಮ್ ಲೈವ್ಲಿಹುಡ್ (Farm Livelihood) : 01
- 4 ಜಿಲ್ಲಾ ವ್ಯವಸ್ಥಾಪಕರು - ಸ್ಕಿಲ್ ಮತ್ತು ಉದ್ಯಮಶೀಲತೆ (Skill & Entrepreneur) : 01
- 5 ಜಿಲ್ಲಾ ಎಂ.ಐ.ಎಸ್ ಸಹಾಯಕರು ಮತ್ತು ಡಿ.ಇ.ಓ (District MIS Assistant cum DEO) : 01
- 1 ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು (Taluka Program Manager) : 01
- 2 ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು (SVEP) : 01
- 3 ಬ್ಲಾಕ್ ಮ್ಯಾನೇಜರ್ - ಫಾರ್ಮ್ (Block Manager - Farm) : 04
- 4 ಬ್ಲಾಕ್ ಮ್ಯಾನೇಜರ್ - ನಾನ್-ಫಾರ್ಮ್ (Block Manager - Non-Farm) : 03
- 5 ಕ್ಲಸ್ಟರ್ ಮೇಲ್ವಿಚಾರಕರು (Cluster Supervisor) : 01
- 6 ಕ್ಲಸ್ಟರ್ ಮೇಲ್ವಿಚಾರಕರು - ಸ್ಕಿಲ್ (Cluster Supervisor - Skill) : 02
ಪ್ರತಿಯೊಂದು ಹುದ್ದೆಗೂ ಪ್ರತ್ಯೇಕ ವಿದ್ಯಾರ್ಹತೆ ಮತ್ತು ಕನಿಷ್ಠ ಅನುಭವವನ್ನು ನಿಗದಿಪಡಿಸಲಾಗಿದೆ:
- ಜಿಲ್ಲಾ/ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ಜಿಲ್ಲಾ ವ್ಯವಸ್ಥಾಪಕರು (SM & CD / Skill): ಸಮಾಜ ವಿಜ್ಞಾನ (Social Sciences), ಗ್ರಾಮೀಣಾಭಿವೃದ್ಧಿ (Rural Development), MSW, MBA, ಕೃಷಿ ವಿಜ್ಞಾನ ಅಥವಾ ತತ್ಸಮಾನ ವಿಷಯಗಳಲ್ಲಿ ಪೂರ್ಣಾವಧಿ ಸ್ನಾತಕೋತ್ತರ ಪದವಿ (Post Graduate Degree) ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಅನುಭವ ಕಡ್ಡಾಯ.
- ಜಿಲ್ಲಾ ವ್ಯವಸ್ಥಾಪಕರು ಹಾಗೂ ಬ್ಲಾಕ್ ಮ್ಯಾನೇಜರ್ (Farm Livelihood): M.Sc (Agriculture) / B.Sc (Agriculture) ಅಥವಾ ಪರಿಸರ ವಿಜ್ಞಾನ/ಸ್ನಾತಕೋತ್ತರ ಪದವಿ ಪಡೆದಿರಬೇಕು. ಹುದ್ದೆಗೆ ಅನುಗುಣವಾಗಿ 1 ರಿಂದ 7 ವರ್ಷಗಳ ಕ್ಷೇತ್ರ ಮಟ್ಟದ ಕೆಲಸದ ಅನುಭವ ಇರಬೇಕು.
- ಜಿಲ್ಲಾ ಎಂ.ಐ.ಎಸ್ ಸಹಾಯಕರು ಮತ್ತು ಡಿ.ಇ.ಓ: ಯಾವುದೇ ವೃತ್ತಿಪರ ಪದವಿ ಅಥವಾ ಸ್ನಾತಕೋತ್ತರ ಪದವಿ (Graduate / Post Graduate) ಜೊತೆಗೆ ಕನಿಷ್ಠ 3 ವರ್ಷಗಳ ಅನುಭವ ಇರಬೇಕು. ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಹಾಗೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯ.
- ಬ್ಲಾಕ್ ಮ್ಯಾನೇಜರ್ (Non-Farm): ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ (Post-Graduate) ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ 3+ ವರ್ಷಗಳ ಅನುಭವ ಇರಬೇಕು.
- ಕ್ಲಸ್ಟರ್ ಮೇಲ್ವಿಚಾರಕರು (General / Skill): ಯಾವುದೇ ಪದವಿ (Any Graduation) ಮುಗಿಸಿರಬೇಕು ಮತ್ತು ಸಂಬಂಧಿತ ಕ್ಷೇತ್ರದಲ್ಲಿ 2 ರಿಂದ 3 ವರ್ಷಗಳ ಅನುಭವ ಹೊಂದಿರಬೇಕು.
- ವಿಶೇಷ ಗಮನ: ಜಿಲ್ಲಾ ಮಟ್ಟದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ಅತ್ಯುತ್ತಮ ಕೌಶಲ್ಯವಿರಬೇಕು ಹಾಗೂ ಕಂಪ್ಯೂಟರ್ ಕಾರ್ಯನಿರ್ವಹಣೆಯ ಜ್ಞಾನ ಕಡ್ಡಾಯವಾಗಿರುತ್ತದೆ.
ಅನುಬಂಧ-1: ಚಿಕ್ಕೋಡಿ ಉಪವಿಭಾಗ ಮಟ್ಟದ ಹುದ್ದೆಗಳು
- ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು (District Program Manager) : 35,000/-
- ಜಿಲ್ಲಾ ವ್ಯವಸ್ಥಾಪಕರು - SM & CD, ಜಿಲ್ಲಾ ವ್ಯವಸ್ಥಾಪಕರು - ಫಾರ್ಮ್ ಲೈವ್ಲಿಹುಡ್ (Farm Livelihood) ಮತ್ತು ಜಿಲ್ಲಾ ವ್ಯವಸ್ಥಾಪಕರು - ಸ್ಕಿಲ್ ಮತ್ತು ಉದ್ಯಮಶೀಲತೆ (Skill & Entrepreneur) : 30,000/-
- ಜಿಲ್ಲಾ ಎಂ.ಐ.ಎಸ್ ಸಹಾಯಕರು ಮತ್ತು ಡಿ.ಇ.ಓ (District MIS Assistant cum DEO) : 20,500/-
- ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು : 28,000/-
- ಬ್ಲಾಕ್ ಮ್ಯಾನೇಜರ್ : 25,000/-
- ಕ್ಲಸ್ಟರ್ ಮೇಲ್ವಿಚಾರಕರು : 18,000/-
ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷಗಳ ಒಳಗಿರಬೇಕು.
ಇದನ್ನು ಓದಿ : 12ನೇ ಪಾಸ್ ಆಗಿದ್ದರೆ ಸಾಕು! ಆಧಾರ್ ಸೇವಾ ಕೇಂದ್ರಗಳಲ್ಲಿ ಭರ್ಜರಿ ಉದ್ಯೋಗಾವಕಾಶ; ₹25,000 ಸಂಬಳದ ಕೆಲಸಕ್ಕೆ ಇಂದೇ ಅರ್ಜಿ ಹಾಕಿ!
ಅರ್ಜಿ ಸಲ್ಲಿಸುವುದು ಹೇಗೆ? (How to Apply)
- ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
- ಮೊದಲಿಗೆ ಅಧಿಕೃತ ಜಾಬ್ ಪೋರ್ಟಲ್ ವೆಬ್‌ಸೈಟ್‌ಗೆ ಭೇಟಿ ನೀಡಿ: http://jobsksrips.karnataka.gov.in/
- ವೆಬ್‌ಸೈಟ್‌ನಲ್ಲಿ ನೀಡಲಾದ ಸೂಚನೆಗಳನ್ನು ಸರಿಯಾಗಿ ಓದಿಕೊಳ್ಳಿ.
- ಆನ್‌ಲೈನ್ ಅರ್ಜಿಯಲ್ಲಿ ಕೇಳಲಾದ ನಿಮ್ಮ ವೈಯಕ್ತಿಕ ವಿವರಗಳು, ವಿದ್ಯಾರ್ಹತೆ ಮತ್ತು ಅನುಭವದ ದಾಖಲೆಗಳನ್ನು ನಿಖರವಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ (Submit).
- ಪ್ರಮುಖ ಎಚ್ಚರಿಕೆ: ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ನೇರವಾಗಿ (Offline) ತಂದು ಸಲ್ಲಿಸುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಕೇವಲ ಅಧಿಕೃತ ಜಾಬ್ ಪೋರ್ಟಲ್‌ನಲ್ಲಿ ಸಲ್ಲಿಸಲಾದ ಆನ್‌ಲೈನ್ ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗುತ್ತದೆ.
ಈ ನೇಮಕಾತಿಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಮಾಹಿತಿ, ಮೀಸಲಾತಿ ನಿಯಮಗಳು ಅಥವಾ ಯಾವುದೇ ಗೊಂದಲಗಳಿದ್ದಲ್ಲಿ ಅಭ್ಯರ್ಥಿಗಳು ಈ ಕೆಳಗಿನ ವಿಳಾಸ/ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು:
- ಸಂಪರ್ಕಿಸಬೇಕಾದ ಅಧಿಕಾರಿಗಳು: ಯೋಜನಾ ನಿರ್ದೇಶಕರು, ಡಿ.ಆರ್.ಡಿ.ಎ ಕೋಶ, ಜಿಲ್ಲಾ ಪಂಚಾಯತ್, ಬೆಳಗಾವಿ.
- ಅಧಿಕೃತ ದೂರವಾಣಿ ಸಂಖ್ಯೆ: 0831-2407209
ನಿಮ್ಮ ಸ್ನೇಹಿತರೊಂದಿಗೆ ಈ ಉದ್ಯೋಗ ಮಾಹಿತಿಯನ್ನು ಶೇರ್ ಮಾಡಿ ಮತ್ತು ಜುಲೈ 15, 2026 ರ ಒಳಗಾಗಿ ಅರ್ಜಿ ಸಲ್ಲಿಸಿ ಯಶಸ್ವಿಯಾಗಿ. ಇಂತಹ ಮತ್ತಷ್ಟು ನಿಖರ ಉದ್ಯೋಗ ಸುದ್ದಿಗಳಿಗಾಗಿ ಸದಾ ಓದುತ್ತಿರಿ KPSCVaani.
Job Overview
- End Date
- 15 ಜುಲೈ 2026
- Pay Scale
- 18000 - 35000 INR
- Employment Type
- FULL_TIME
- Organization
- Belagavi Zilla Panchayat (Website)
- Location
- Office of the Zilla Panchayat, DC Compound, Belagavi, KA, 590001
Apply online Belagavi Zilla Panchayat recruitment 2026 online apply
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Related Tags:
Degree
Comments