ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ನೇಮಕಾತಿ 2026: 40 ಫ್ರಂಟ್ ಡೆಸ್ಕ್ ಅಸೋಸಿಯೇಟ್ ಮತ್ತು ಸೆಕ್ಯೂರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಈ ನೇಮಕಾತಿಯಲ್ಲಿ ಫ್ರಂಟ್ ಡೆಸ್ಕ್ ಅಸೋಸಿಯೇಟ್ (ಕಸ್ಟಮರ್ ರಿಲೇಷನ್‌ಶಿಪ್ ಅಸೋಸಿಯೇಟ್) ಮತ್ತು ಅಟೆಂಡರ್/ಸಿಪಾಯಿ/ಭದ್ರತಾ ರಕ್ಷಕ (ಸೆಕ್ಯೂರಿಟಿ ಗಾರ್ಡ್) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಿಗೆ ಅನುಗುಣವಾಗಿ ಪದವಿ ಹಾಗೂ ಎಸ್.ಎಸ್.ಎಲ್.ಸಿ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಕರ್ಷಕ ವೇತನ ಶ್ರೇಣಿ ಹಾಗೂ ಸರ್ಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆಯ ಸೌಲಭ್ಯವೂ ಈ ಹುದ್ದೆಗಳಿಗಿರಲಿದೆ.
ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ಜಾಲತಾಣದಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಕಳುಹಿಸಲು ಜುಲೈ 28, 2026 ಕೊನೆಯ ದಿನಾಂಕವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು, ಉದ್ಯೋಗದ ಸಂಪೂರ್ಣ ವಿವರಗಳು ಮತ್ತು ಇತ್ತೀಚಿನ ಅಪ್ಡೇಟ್‌ಗಳಿಗಾಗಿ ನಿರಂತರವಾಗಿ ನೋಡ್ತಾ ಇರಿ ನಮ್ಮ KPSCVAANI.COM.
ಪ್ರಮುಖ ವಿವರಗಳು (Overview):
- ಸಂಸ್ಥೆಯ ಹೆಸರು: ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್
- ಹುದ್ದೆಗಳ ಹೆಸರು: ಫ್ರಂಟ್ ಡೆಸ್ಕ್ ಅಸೋಸಿಯೇಟ್ ಮತ್ತು ಸೆಕ್ಯೂರಿಟಿ ಗಾರ್ಡ್ (ಸೇವಕ)
- ಒಟ್ಟು ಹುದ್ದೆಗಳು: 40 ಹುದ್ದೆಗಳು
- ಉದ್ಯೋಗ ಸ್ಥಳ: ಶಿರಸಿ, ಕರ್ನಾಟಕ
- ಅರ್ಜಿ ಸಲ್ಲಿಸುವ ವಿಧಾನ: ಆಫ್‌ಲೈನ್ (ಅಂಚೆ ಮೂಲಕ ಮಾತ್ರ)
- ಫ್ರಂಟ್ ಡೆಸ್ಕ್ ಅಸೋಸಿಯೇಟ್ / ಕಸ್ಟಮರ್ ರಿಲೇಷನ್‌ಶಿಪ್ ಅಸೋಸಿಯೇಟ್: 30 ಹುದ್ದೆಗಳು
- ಸೇವಕ / ಸಿಪಾಯಿ / ಕಾವಲುಗಾರ / ಭದ್ರತಾ ರಕ್ಷಕ: 10 ಹುದ್ದೆಗಳು
- ಒಟ್ಟು ಹುದ್ದೆಗಳು: 40 ಹುದ್ದೆಗಳು
- ಫ್ರಂಟ್ ಡೆಸ್ಕ್ ಅಸೋಸಿಯೇಟ್: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Com, BBA, BBM, BE/B.Tech, BCA, B.Sc, ಅಥವಾ BA ಪದವಿಯಲ್ಲಿ ಕನಿಷ್ಠ ಶೇಕಡಾ 50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
- (ಗಮನಿಸಿ: B.Sc ನಲ್ಲಿ ಗಣಿತ/ಸಂಖ್ಯಾಶಾಸ್ತ್ರ ಹಾಗೂ BA ನಲ್ಲಿ ಗಣಿತ/ಸಂಖ್ಯಾಶಾಸ್ತ್ರ/ಅರ್ಥಶಾಸ್ತ್ರವನ್ನು ಕಡ್ಡಾಯವಾಗಿ ಐಚ್ಛಿಕ ವಿಷಯವಾಗಿ ಓದಿರಬೇಕು). ಸ್ನಾತಕೋತ್ತರ ಪದವಿ (M.Com/MBA/MCA) ಅಥವಾ ಬ್ಯಾಂಕಿಂಗ್ ಡಿಪ್ಲೋಮಾ ಹೊಂದಿದವರಿಗೆ ಆದ್ಯತೆ ಇರಲಿದೆ.
- ಸೇವಕ / ಸೆಕ್ಯೂರಿಟಿ ಗಾರ್ಡ್: ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ (10th Standard) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
- ಫ್ರಂಟ್ ಡೆಸ್ಕ್ ಅಸೋಸಿಯೇಟ್ / ಕಸ್ಟಮರ್ ರಿಲೇಷನ್‌ಶಿಪ್ ಅಸೋಸಿಯೇಟ್:ರೂ. 34,100 ರಿಂದ ರೂ. 1,07,500/-
- ಸೇವಕ / ಸಿಪಾಯಿ / ಕಾವಲುಗಾರ / ಭದ್ರತಾ ರಕ್ಷಕ: ರೂ. 27,000 ರಿಂದ ರೂ. 83,700/-
ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
- ಸಾಮಾನ್ಯ ವರ್ಗ (General Merit): ಗರಿಷ್ಠ 40 ವರ್ಷಗಳು
- ಹಿಂದುಳಿದ ವರ್ಗಗಳು (2A, 2B, 3A, 3B): ಗರಿಷ್ಠ 43 ವರ್ಷಗಳು
- SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷಗಳು
- ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ರೂ. 1,000/-
- ಶುಲ್ಕವನ್ನು "Chief Executive Officer, The Sirsi Urban Sahakari Bank Ltd., Sirsi" ಇವರ ಹೆಸರಿಗೆ ಡಿಮಾಂಡ್ ಡ್ರಾಫ್ಟ್ (Demand Draft - DD) ಮೂಲಕ ಮಾತ್ರ ಪಾವತಿಸಬೇಕು. ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸುವುದಿದ್ದಲ್ಲಿ ಪ್ರತ್ಯೇಕ ಶುಲ್ಕ ಹಾಗೂ ಅರ್ಜಿ ಸಲ್ಲಿಸಬೇಕು.
- ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Exam) ಮತ್ತು ಮೌಖಿಕ ಸಂದರ್ಶನ (Interview) ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು 85% ಕ್ಕೆ ಮತ್ತು ಸಂದರ್ಶನವನ್ನು 15% ಅಂಕಗಳಿಗೆ ನಿಗದಿಪಡಿಸಲಾಗುವುದು.
- ಲಿಖಿತ ಪರೀಕ್ಷೆಯ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ (How to Apply?):
- ಮೊದಲಿಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ www.sirsiurbanbank.bank.in ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. (ಬ್ಯಾಂಕು ಪೂರೈಸುವ ಮೂಲ ಅರ್ಜಿ ಫಾರ್ಮ್ ಮಾತ್ರ ಬಳಸಬೇಕು, ಜೆರಾಕ್ಸ್ ಅಥವಾ ಟೈಪ್ ಮಾಡಿದ ಪ್ರತಿಗಳನ್ನು ಪರಿಗಣಿಸುವುದಿಲ್ಲ).
- ಅರ್ಜಿಯನ್ನು ನಿಮ್ಮ ಸ್ವ-ಹಸ್ತಾಕ್ಷರದಲ್ಲಿ ಸಂಪೂರ್ಣವಾಗಿ ಭರ್ತಿ ಮಾಡಿ.
- ಅರ್ಜಿಯೊಂದಿಗೆ ಅಗತ್ಯವಿರುವ ಎಲ್ಲಾ ಶೈಕ್ಷಣಿಕ ಅಂಕಪಟ್ಟಿಗಳು, ಜನ್ಮ ದಿನಾಂಕ ಪ್ರಮಾಣಪತ್ರ (SSLC), ಜಾತಿ ಪ್ರಮಾಣಪತ್ರ ಮತ್ತು ಇತ್ತೀಚಿನ ಬಣ್ಣದ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದ ಸ್ವ-ದೃಢೀಕೃತ (Self-Attested) ನಕಲು ಪ್ರತಿಗಳನ್ನು ಲಗತ್ತಿಸಿ.
- ಭರ್ತಿ ಮಾಡಿದ ಅರ್ಜಿಯನ್ನು ಲಕೋಟೆಯಲ್ಲಿ ಹಾಕಿ, ಲಕೋಟೆಯ ಮೇಲೆ ನೀವು ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ಬರೆಯಿರಿ. ಉದಾಹರಣೆಗೆ: "ಫ್ರಂಟ್ ಡೆಸ್ಕ್ ಅಸೋಸಿಯೇಟ್ ಹುದ್ದೆಗೆ ಅರ್ಜಿ" ಅಥವಾ "ಸೆಕ್ಯೂರಿಟಿ ಗಾರ್ಡ್ ಹುದ್ದೆಗೆ ಅರ್ಜಿ".
- ಅರ್ಜಿಯನ್ನು ಅಂಚೆ (Speed Post / Registered Post) ಮೂಲಕ ಮಾತ್ರ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು (ವೈಯಕ್ತಿಕವಾಗಿ ನೀಡುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ).
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್,
ಕೇಂದ್ರ ಕಛೇರಿ, ರಾಯರಪೇಟೆ,
ಶಿರಸಿ - 581 401, ಉತ್ತರ ಕನ್ನಡ (ಉ.ಕ).
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 07-07-2026
- ಅರ್ಜಿ ತಲುಪಲು ಕೊನೆಯ ದಿನಾಂಕ: 28-07-2026 (ಸಾಯಂಕಾಲ 5:00 ಗಂಟೆಯೊಳಗೆ)
Job Overview
- No. of posts
- 40
- Start Date
- 7 ಜುಲೈ 2026
- End Date
- 28 ಜುಲೈ 2026
- Pay Scale
- 27000 - 107500 INR
- Employment Type
- FULL_TIME
- Organization
- Sirsi Urban Sahakari Bank (Website)
- Location
- Rayarpet, Sirsi, Uttara Kannada, KA, 581401

Comments