ಬಾಗಲಕೋಟೆ ಜಿಲ್ಲಾ ಸಹಕಾರ ಒಕ್ಕೂಟದಲ್ಲಿ ನೇಮಕಾತಿ: SSLC, ಪಿಯುಸಿ ಪಾಸಾದವರಿಗೆ ₹47,650 ವರೆಗೆ ವೇತನ!

ಬಾಗಲಕೋಟೆ ಜಿಲ್ಲಾ ಸಹಕಾರ ಒಕ್ಕೂಟದಲ್ಲಿ ನೇಮಕಾತಿ: SSLC, ಪಿಯುಸಿ ಪಾಸಾದವರಿಗೆ ₹47,650 ವರೆಗೆ ವೇತನ!
Published by Yallamma G
7 minutes ago Others Featured
Tags: Degree

ಬಾಗಲಕೋಟೆ ಜಿಲ್ಲೆಯ ಸಹಕಾರ ಸಂಘಗಳ ನೇಮಕಾತಿ 2026ರಲ್ಲಿ 5 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ₹47,650ರವರೆಗಿನ ವೇತನ ಶ್ರೇಣಿ, ಅರ್ಹತೆ, ಅರ್ಜಿ ಶುಲ್ಕ ಮತ್ತು ನವೆಂಬರ್ 12ರ ಕೊನೆಯ ದಿನಾಂಕದ ಮಾಹಿತಿ ತಿಳಿಯಿರಿ.

 

ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಸಹಕಾರ ಕ್ಷೇತ್ರದ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವೊಂದು ಪ್ರಕಟವಾಗಿದೆ. ಬಾಗಲಕೋಟೆ ಜಿಲ್ಲೆಯ ಸಹಕಾರ ಸಂಘಗಳ ನೇಮಕಾತಿ ಅಧಿಸೂಚನೆಯ ಪ್ರಕಾರ, ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2026ರ ಅಕ್ಟೋಬರ್ 16ರ ದಿನಾಂಕ ಹೊಂದಿರುವ ಅಧಿಸೂಚನೆಯಲ್ಲಿ ಒಟ್ಟು 5 ಹುದ್ದೆಗಳು, ಹುದ್ದೆಗಳಿಗೆ ಅನುಗುಣವಾದ ವಿದ್ಯಾರ್ಹತೆ, ವೇತನ ಶ್ರೇಣಿ, ಪರೀಕ್ಷಾ ವಿವರಗಳು ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ತಿಳಿಸಲಾಗಿದೆ.

 

ಬಾಗಲಕೋಟೆ ಜಿಲ್ಲೆಯ ಸಹಕಾರ ಸಂಘಗಳ ನೇಮಕಾತಿ ಅಧಿಸೂಚನೆಯ ಪ್ರಕಾರ ದ್ವಿತೀಯ ದರ್ಜೆ ಸಹಾಯಕರು ಕಾಮ್ ಮಾರಾಟಾಧಿಕಾರಿ, ಟೈಪಿಸ್ಟ್ ಕಾಮ್ ಅಕೌಂಟಂಟ್ ಮತ್ತು ಡ್ರೈವರ್ ಕಾಮ್ ಅಟೆಂಡರ್ ಹುದ್ದೆಗಳ ನೇಮಕಾತಿ. ಅರ್ಜಿ ಸಲ್ಲಿಸಲು ನವೆಂಬರ್ 12 2026 ಕೊನೆಯ ದಿನ.  

 

ಈ ನೇಮಕಾತಿಯಲ್ಲಿ ಮೊದಲ ಎರಡು ಹುದ್ದೆಗಳಿಗೆ ತಲಾ 2 ಹುದ್ದೆಗಳು ಮತ್ತು ಮೂರನೇ ಹುದ್ದೆಗೆ 1 ಹುದ್ದೆ ಸೇರಿ ಒಟ್ಟು 5 ಹುದ್ದೆಗಳಿವೆ. ಹುದ್ದೆಗಳಿಗೆ ಅನುಗುಣವಾಗಿ ₹17,000ರಿಂದ ₹47,650ರವರೆಗಿನ ವೇತನ ಶ್ರೇಣಿಗಳನ್ನು ಪ್ರಕಟಣೆಯಲ್ಲಿ ನಮೂದಿಸಲಾಗಿದೆ.

 

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿದ್ಯಾರ್ಹತೆ, ಅರ್ಜಿ ಶುಲ್ಕ, ಪರೀಕ್ಷಾ ವಿಧಾನ ಮತ್ತು ಕೊನೆಯ ದಿನಾಂಕದ ಕುರಿತು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿ ಸಲ್ಲಿಸುವುದು ಸೂಕ್ತ.

 

ಪ್ರಮುಖ ಮಾಹಿತಿ:

  • ನೇಮಕಾತಿ ಸಂಸ್ಥೆ : ಬಾಗಲಕೋಟೆ ಜಿಲ್ಲೆಯ ಸಹಕಾರ ಸಂಘಗಳ ನೇಮಕಾತಿ ಸಂಸ್ಥೆ
  • ಅಧಿಸೂಚನೆ ದಿನಾಂಕ : 16 ಅಕ್ಟೋಬರ್ 2026
  • ಒಟ್ಟು ಹುದ್ದೆಗಳು : 5
  • ಗರಿಷ್ಠ ವೇತನ ಶ್ರೇಣಿ : ₹47,650ರವರೆಗೆ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12 ನವೆಂಬರ್ 2026
  • ಕೊನೆಯ ಸಮಯ : ಸಂಜೆ 5:00 ಗಂಟೆ
  • ಅಧಿಕೃತ ಪ್ರಕಟಣೆ : ನೇಮಕಾತಿ ಅಧಿಸೂಚನೆ

 

ಹುದ್ದೆಗಳ ವಿವರ

  • ದ್ವಿತೀಯ ದರ್ಜೆ ಸಹಾಯಕರು ಕಾಮ್ ಮಾರಾಟಾಧಿಕಾರಿ : 02
  • ಟೈಪಿಸ್ಟ್ ಕಾಮ್ ಅಕೌಂಟಂಟ್ : 02
  • ಡ್ರೈವರ್ ಕಾಮ್ ಅಟೆಂಡರ್ : 01

 

ವಿದ್ಯಾರ್ಹತೆ : 

ದ್ವಿತೀಯ ದರ್ಜೆ ಸಹಾಯಕ ಕಮ್ ಮಾರಾಟಾಧಿಕಾರಿ

1. ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರಬೇಕು.
2. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಮತ್ತು
3. ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಶನ್ ಜ್ಞಾನವಿರಬೇಕು.


ಟೈಪಿಸ್ಟ್ ಕಮ್ ಅಕೌಂಟಿಂಟ್

1. ದ್ವಿತೀಯ ಪಿ.ಯು.ಸಿ. ಯಲ್ಲಿ ಅಥವಾ ಮೂರು ವರ್ಷದ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್‌ನಲ್ಲಿ ಉತ್ತೀರ್ಣರಾಗಿರಬೇಕು.
2. ಕನ್ನಡ / ಇಂಗ್ಲಿಷ್ ಟೈಪ್‌ ರೈಟಿಂಗ್‌ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕಂಪ್ಯೂಟರ್‌ನಲ್ಲಿ ಕನ್ನಡ / ಇಂಗ್ಲಿಷ್ ಟೈಪಿಂಗ್‌ನಲ್ಲಿ ಉತ್ತೀರ್ಣರಾಗಿ ರಬೇಕು ಮತ್ತು ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನವಿರಬೇಕು. ಮತ್ತು
3. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

 

ಡ್ರೈವರ್ ಕಮ್ ಅಟೆಂಡರ್

1. ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿದ್ದು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
2. ಕಾನೂನುಬದ್ಧ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು.

 

ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

ಮಾಸಿಕ ವೇತನ : 

  • ದ್ವಿತೀಯ ದರ್ಜೆ ಸಹಾಯಕರು ಕಾಮ್ ಮಾರಾಟಾಧಿಕಾರಿ : ₹23,500–₹47,650
  • ಟೈಪಿಸ್ಟ್ ಕಾಮ್ ಅಕೌಂಟಂಟ್ : ₹21,400–₹42,000
  • ಡ್ರೈವರ್ ಕಾಮ್ ಅಟೆಂಡರ್ : ₹17,000–₹28,950

 

ವಯೋಮಿತಿ

  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ:
  • ಸಾಮಾನ್ಯ ವರ್ಗಕ್ಕೆ  : 35 ವರ್ಷ
  • ಹಿಂದುಳಿದ ವರ್ಗಗಳಿಗೆ (2A, 2B, 3A, 3B) : 38 ವರ್ಷ
  • SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ : 40 ವರ್ಷ ನಿಗದಿಪಡಿಸಲಾಗಿದೆ.
  • (ಸರ್ಕಾರದ ಆದೇಶದಂತೆ ಎಲ್ಲಾ ವರ್ಗದವರಿಗೂ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ).

 

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹1,000/- ಹಾಗೂ SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ ₹500/- ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕದ ಮೊತ್ತವನ್ನು ಡಿಮಾಂಡ್ ಡ್ರಾಫ್ಟ್ / ಬ್ಯಾಂಕರ್ಸ್ ಚೆಕ್ ಅನ್ನು "ಬಾಗಲಕೋಟೆ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ / ಸಹಕಾರಿಗಳ ಸಹಕಾರ ಒಕ್ಕೂಟ ನಿ., ಬಾಗಲಕೋಟೆ" ಈ ಹೆಸರಿನಲ್ಲಿ ತೆಗೆಯತಕ್ಕದ್ದು ಅಥವಾ ಒಕ್ಕೂಟದ ಕಛೇರಿಗೆ ಭೇಟಿ ನೀಡಿ ಶುಲ್ಕ ಪಾವತಿಸಿ ರಸೀದಿ ಪಡೆದುಕೊಳ್ಳತಕ್ಕದ್ದು. ಶುಲ್ಕವನ್ನು ಯಾವುದೇ ಕಾರಣಕ್ಕೂ ಮರಳಿಸಲಾಗುವುದಿಲ್ಲ.

 

ಅರ್ಜಿ ಫಾರ್ಮ್: ಒಕ್ಕೂಟದ ಕಛೇರಿ, ಪ್ಲಾಟ್ ನಂ. 58ಡಿ, ಸೆಕ್ಟರ್ ನಂ. 25, ನವನಗರ, ಬಾಗಲಕೋಟೆ 587103 ರಲ್ಲಿ ದಿನಾಂಕ: 19-10-2026 ರಿಂದ ರೂ. 100/- ಶುಲ್ಕ ಪಾವತಿಸಿ ಅರ್ಜಿಯನ್ನು ಒಕ್ಕೂಟದ ಕೆಲಸದ ದಿನದಂದು ಬೆಳಿಗ್ಗೆ 11:00 ರಿಂದ ಸಂಜೆ 05:00 ಗಂಟೆಯವರೆಗೆ ಪಡೆಯತಕ್ಕದ್ದು.

 

ಅರ್ಜಿ ಸಲ್ಲಿಸುವ ವಿಧಾನ:

1. ಒಕ್ಕೂಟದಿಂದ ಪೂರೈಸಿದ ಮೂಲ ಅರ್ಜಿಯನ್ನು ಸ್ವ-ಹಸ್ತಾಕ್ಷರದಲ್ಲಿ ಭರ್ತಿ ಮಾಡಿ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ, ಹೆಚ್ಚುವರಿ ಎರಡು (2) ಭಾವಚಿತ್ರಗಳನ್ನು ಸಲ್ಲಿಸತಕ್ಕದ್ದು.
2. ವಯಸ್ಸು ದೃಢೀಕರಣ ಕುರಿತು ಎಸ್.ಎಸ್.ಎಲ್.ಸಿ / 10 ನೇ ತರಗತಿ ಅಂಕಪಟ್ಟಿ ಪ್ರಮಾಣ ಪತ್ರ ಅಥವಾ ವರ್ಗಾವಣೆ ಪ್ರಮಾಣ ಪತ್ರ (TC) ದಾಖಲಾತಿಯನ್ನು ಸಲ್ಲಿಸತಕ್ಕದ್ದು ಹಾಗೂ ಹುದ್ದೆವಾರು ನಿಗದಿಪಡಿಸಿದ ವಿದ್ಯಾರ್ಹತೆಯ ಪ್ರಮಾಣಪತ್ರ ಮತ್ತು ಅಂಕಪಟ್ಟಿಯ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಅರ್ಜಿಯ ಜೊತೆಗೆ ಸಲ್ಲಿಸತಕ್ಕದ್ದು.
3. ಅರ್ಜಿ ಶುಲ್ಕ ವಿನಾಯಿತಿ ಪಡೆಯಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಪ್ರವರ್ಗ-1 ವರ್ಗಗಳ ಅರ್ಜಿದಾರರು ಅವಧಿಯೊಳಗಿನ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು.

 

ಅರ್ಜಿ ಸಲ್ಲಿಸುವ ವಿಳಾಸ 
ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಬಾಗಲಕೋಟೆ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ / ಸಹಕಾರಿಗಳ ಸಹಕಾರ ಒಕ್ಕೂಟ ನಿ., ಬಾಗಲಕೋಟೆ", ಪ್ಲಾಟ್ ನಂ. 58ಡಿ, ಸೆಕ್ಟರ್ ನಂ. 25, ನವನಗರ, ಬಾಗಲಕೋಟೆ 587103.

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸರಿಯಾಗಿ ಭರ್ತಿ ಮಾಡಿದ / ಪೂರ್ಣಗೊಂಡ ಅರ್ಜಿಗಳನ್ನು ಎಲ್ಲಾ ದಾಖಲಾತಿಗಳೊಂದಿಗೆ ದಿನಾಂಕ: 12-11-2026 ಸಂಜೆ 05.00 ಗಂಟೆಯ ಒಳಗಾಗಿ ಅರ್ಜಿಸಲ್ಲಿಸಬೇಕು.

 

ಇತರೆ ಷರತ್ತುಗಳು ಮತ್ತು ನಿಬಂಧನೆಗಳು:

  1. "ದ್ವಿತೀಯ ದರ್ಜೆ ಸಹಾಯಕ ಕಮ್ ಮಾರುಕಟ್ಟೆ ಅಧಿಕಾರಿ" ಹಾಗೂ "ಟೈಪಿಸ್ಟ್ ಕಮ್ ಅಟೆಂಡೆಂಟ್" ಮತ್ತು "ಡ್ರೈವರ್ ಕಮ್ ಅಟೆಂಡರ್" ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ಜರುಗಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಡೆಯಲಾದ ಅಂಕಗಳ ಶೇಕಡಾವಾರು ಆಧಾರದ ಮೇಲೆ 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
  2. ನೇಮಕಾತಿ ನಿಯಮಗಳ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ಮಾತ್ರ ಲಿಖಿತ ಪರೀಕ್ಷೆ ಅಥವಾ ಸಂದರ್ಶನಕ್ಕೆ ಕರೆಯಲಾಗುವುದು.
  3. 200 ಅಂಕಗಳ ಲಿಖಿತ ಪರೀಕ್ಷೆಯಿದ್ದು, ಕನ್ನಡ ಭಾಷೆಗಾಗಿ 50 ಅಂಕಗಳು, ಸಾಮಾನ್ಯ ಇಂಗ್ಲೀಷ್‌ಗಾಗಿ 25 ಅಂಕಗಳು, ಸಾಮಾನ್ಯ ಜ್ಞಾನಕ್ಕಾಗಿ 25 ಅಂಕಗಳು, ಸಹಕಾರ ವಿಷಯಗಳಿಗಾಗಿ 50 ಅಂಕಗಳು, ಭಾರತದ ಸಂವಿಧಾನಕ್ಕಾಗಿ 25 ಅಂಕಗಳು ಹಾಗೂ ಬ್ಯಾಂಕಿಂಗ್ ಚಟುವಟಿಕೆಗಳು ಮತ್ತು ವಸ್ತುನಿಷ್ಠ ವಿಷಯ ವಸ್ತುವಿಗೆ 25 ಅಂಕಗಳು ಒಳಗೊಂಡಿರುತ್ತದೆ.
  4. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಲಿಖಿತ ಪರೀಕ್ಷೆ / ಸಂದರ್ಶನಕ್ಕೆ ಹಾಜರಾಗತಕ್ಕದ್ದು.
  5. ಅಪೂರ್ಣ, ಸ್ಪಷ್ಟವಾಗಿ ಬರೆಯದ, ಸಹಿ ಮಾಡದೇ ಇರುವ, ಶುಲ್ಕವನ್ನು ಪಾವತಿಸದ, ಅಗತ್ಯ ದೃಢೀಕೃತ ದಾಖಲಾತಿಗಳನ್ನು ಲಗತ್ತಿಸದ ಹಾಗೂ ಎಲ್ಲಾ ದಾಖಲಾತಿಗಳನ್ನು ದೃಢೀಕರಿಸದೇ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಮತ್ತು ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಅವಧಿಯ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  6. ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಕಾರಣವನ್ನು ನೀಡದೆ ಮುಂದೂಡುವ, ರದ್ದುಪಡಿಸುವ ಹಾಗೂ ನಿಬಂಧನೆಗಳನ್ನು ಬದಲಾಯಿಸುವ ಸಂಪೂರ್ಣ ಹಕ್ಕನ್ನು ನೇಮಕಾತಿ ಸಮಿತಿ ಕಾಯ್ದಿರಿಸಿಕೊಂಡಿದೆ.
  7. ಅರ್ಹತೆ ಹೊಂದಲು ವಿಫಲವಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ / ಸಂದರ್ಶನಕ್ಕೆ ಕರೆ ಅಥವಾ ಸೂಚನೆ ನೀಡಲಾಗುವುದಿಲ್ಲ. ಅನರ್ಹತೆ ಹೊಂದಿದ ಅಭ್ಯರ್ಥಿಗಳ ಜೊತೆ ಈ ಕುರಿತು ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ.
  8. ವಿವಾಹಿತ ಮಹಿಳಾ ಅರ್ಜಿದಾರರು ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳ ಪ್ರಕಾರ ಅರ್ಜಿಯಲ್ಲಿ ತಮ್ಮ ವಿವರಗಳನ್ನು (ಪೂರ್ಣ ಹೆಸರು, ವಿಳಾಸ, ಇತ್ಯಾದಿ) ಭರ್ತಿ ಮಾಡಬೇಕು ಮತ್ತು ವಿವಾಹ ಪ್ರಮಾಣಪತ್ರವನ್ನು ಸಹ ಲಗತ್ತಿಸಬೇಕು. 

 

ಇದನ್ನು ಓದಿ : SSLC, ಪಿಯುಸಿ ಪಾಸಾದವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರಿ ನೌಕರಿ: 130 ಹುದ್ದೆಗಳಿಗೆ ಅರ್ಜಿ ಆಹ್ವಾನ!

 

ಕೊನೆಯ ಮಾತು

ಬಾಗಲಕೋಟೆ ಜಿಲ್ಲೆಯ ಸಹಕಾರ ಸಂಘಗಳ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 5 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗೆ ಅನುಗುಣವಾಗಿ ₹47,650ರವರೆಗೆ ವೇತನ ಶ್ರೇಣಿಯನ್ನು ನೀಡಲಾಗಿದೆ. ಅರ್ಜಿ ಸಲ್ಲಿಸಲು 12 ನವೆಂಬರ್ 2026ರ ಸಂಜೆ 5:00 ಗಂಟೆಯವರೆಗೆ ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ನಿಖರ ಹೆಸರು, ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಮೂಲ ಅಧಿಸೂಚನೆಯಲ್ಲಿ ಪರಿಶೀಲಿಸಿ, ಕೊನೆಯ ದಿನಾಂಕದೊಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು. 

 

ಹೆಚ್ಚಿನ ಕರ್ನಾಟಕ ಉದ್ಯೋಗ ಸುದ್ದಿಗಳು ಮತ್ತು ನೇಮಕಾತಿ ಮಾಹಿತಿಗಾಗಿ KPSCVaani ಜಾಲತಾಣವನ್ನು ಗಮನಿಸುತ್ತಿರಿ.

 

Job Overview
End Date
12 ನವೆಂಬರ್ 2026
Pay Scale
17000 - 47650 INR
Employment Type
FULL_TIME
Location
ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಅಥವಾ ಸಹಕಾರ ಇಲಾಖೆ ಕಚೇರಿ,, ಬಾಗಲಕೋಟೆ, KA, 587101
To Download Official Notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.