➤ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜ ಮೂರ್ತಿ ಅವರು 2026-27ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಹಿರಿಯ ನಟ ಡಾ. 'ಮುಖ್ಯಮಂತ್ರಿ' ಚಂದ್ರು ಅವರಿಗೆ ₹50,000 ನಗದು ಒಳಗೊಂಡ 'ಜೀವಮಾನ ಸಾಧನೆ ಗೌರವ' ಹಾಗೂ ಇತರ ಸಾಧಕರಿಗೆ 25 ವಾರ್ಷಿಕ (ತಲಾ ₹25,000) ಮತ್ತು 7 ದತ್ತಿನಿಧಿ (ತಲಾ ₹15,000) ಪುರಸ್ಕಾರಗಳನ್ನು ಘೋಷಿಸಿದ್ದಾರೆ.
➤ ಜೀವಮಾನ ಸಾಧನೆ ಗೌರವ ಪ್ರಶಸ್ತಿ: ಕನ್ನಡ ರಂಗಭೂಮಿ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮ ವಿಶಿಷ್ಟ ಅಭಿನಯ, ಕಂಠಸಿರಿ ಮತ್ತು ವಿಭಿನ್ನ ಪಾತ್ರಗಳ ಮೂಲಕ ಮನೆಮಾತಾಗಿರುವ ಹಿರಿಯ ನಟ ಡಾ. ಮುಖ್ಯಮಂತ್ರಿ ಚಂದ್ರು ಅವರು 2026-27ನೇ ಸಾಲಿನ ಪ್ರತಿಷ್ಠಿತ 'ಜೀವಮಾನ ಸಾಧನೆ ಗೌರವ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ವಿಶೇಷತೆ: ಪ್ರಸಿದ್ಧ 'ಮುಖ್ಯಮಂತ್ರಿ' ನಾಟಕದ ಮೂಲಕ ಜನಪ್ರಿಯರಾದ ಇವರು, ರಂಗಭೂಮಿ ಮತ್ತು ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಹಾಗೂ ಖಳನಟನಾಗಿ ಅಪಾರ ಕೊಡುಗೆ ನೀಡಿದ್ದಾರೆ.
➤ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ (25 ರಂಗಕರ್ಮಿಗಳು):  
ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ - ಧಾರವಾಡ  ರಮೇಶ ತಿಪ್ಪಣ್ಣ ಚಿತ್ರಗಾರ - ಇಳಕಲ್, ಬಾಗಲಕೋಟೆ  ಶಿವಾನಂದ ತಗಡೂರು - ಬೆಂಗಳೂರು  ಆರ್. ರಾಮಕೃಷ್ಣ (ಚನ್ನಯ್ಯ) - ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ  ಅನುಸೂಯ ರೇವಣಸಿದ್ದಯ್ಯ ಹೊಸೂರುಮಠ - ಲಕ್ಕುಂಡಿ  ಅಯ್ಯಣ್ಣ ಸ್ವಾಮಿ ಹಿರೇಮಠ - ಕಲಬುರಗಿ  ಫಜೀಯಮ್ಮ ಹೆಚ್.ಎಸ್. - ಸಾಗರ, ಶಿವಮೊಗ್ಗ  ಮಲ್ಲಪ್ಪ ಭರಮಪ್ಪ ಕುರಿ - ಕೊಪ್ಪಳ  ಕೆ.ಪಿ. ಸ್ವಾಮಿ - ಮಂಡ್ಯ  ಸುಶೀಲಾ ಹೆಗಡೆ ಮೂಡೇರು - ಸಿದ್ಧಾಪುರ, ಉತ್ತರ ಕನ್ನಡ  ರಾಜಕುಮಾರ್ ಎಸ್. - ಬೆಂಗಳೂರು ನಗರ  ಡಾ. ಎಂ. ಗಣೇಶ್ ಬೇಗೂರು - ಸಾಗರ, ಶಿವಮೊಗ್ಗ  ಪ್ರದೀಪ್ ಚಂದ್ರ ಕುತ್ಪಾಡಿ - ಉಡುಪಿ  ಎನ್.ಟಿ. ಕೃಷ್ಣಪ್ಪ - ಬೆಂಗಳೂರು ನಗರ  ಪುರುಷೋತ್ತಮ ಹಂಡ್ಯಾಳ್ - ಬಳ್ಳಾರಿ  ಡಾ. ಎಸ್.ವಿ. ಸುಷ್ಮಾ - ಬೆಂಗಳೂರು ನಗರ  ನಂದಾ ಹಳೆಮನೆ - ಮೈಸೂರು  ಶ್ರೀನಿವಾಸ್ - ರಾಮನಗರ  ವೈ.ಎನ್. ಉಮಾ - ಯಲಹಂಕ, ಬೆಂಗಳೂರು ನಗರ  ಗದಿಗೆಯ್ಯ ಬಿ. ಹಿರೇಮಠ - ಬೈಲಹೊಂಗಲ, ಬೆಳಗಾವಿ  ಜಿ. ಭಾರತಿ - ಕೂಡ್ಲಿಗಿ, ವಿಜಯನಗರ  ಬಿ. ಸಾವಿತ್ರಮ್ಮ - ದಾವಣಗೆರೆ  ಎಂ.ಸಿ. ಶಿವರುದ್ರಪ್ಪ - ತುಮಕೂರು  ವೇಣುಗೋಪಾಲ್ ಕೆ. - ಬೆಂಗಳೂರು ನಗರ  ಎನ್.ಎಂ. ಲಕ್ಷ್ಮಯ್ಯ - ಮಾಲೂರು, ಕೋಲಾರ  
➤ ದತ್ತಿನಿಧಿ ಪುರಸ್ಕಾರಗಳು (7 ಸಾಧಕರು):
ಎಚ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ: ಬಿ.ಜಿ. ಶ್ರೀಧರ್ (ಬೆಂಗಳೂರು ನಗರ)  ಬಿ.ಆರ್. ಅರಿಶಿಣಗೋಡಿ ದತ್ತಿ ಪುರಸ್ಕಾರ: ಅಶ್ಫಾಕ್ ಹುಸೇನ್ ಹಾ. ಜಾಗೀರದಾರ್ (ವಿಜಯಪುರ)  ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ: ಡಾ. ಎಂ. ಚಂದ್ರಪ್ಪ (ಟಿ. ನರಸೀಪುರ, ಮೈಸೂರು)  ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ: ದಯಾನಂದ ಚ. ಬೆಳಗಿ (ಗದಗ)  ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ: ಗಂಗಾಧರ ರೆಡ್ಡಿ ಬಿ.ಆರ್. (ಕುಣಿಗಲ್, ತುಮಕೂರು)  ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ: ವೈ.ಎನ್. ಶಿವಣ್ಣ (ತುಮಕೂರು)  ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ: ಚಂದ್ರಮ್ಮ (ಸಾಣೇಹಳ್ಳಿ, ಚಿತ್ರದುರ್ಗ)