➤ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜಂಟಿಯಾಗಿ ಜಾರಿಗೆ ತಂದಿರುವ 'FASTag ವಾರ್ಷಿಕ ಪಾಸ್' (FASTag Annual Pass) ಯೋಜನೆ ಹೊಸ ಮೈಲಿಗಲ್ಲು ಸಾಧಿಸಿದೆ. 2025ರ ಆಗಸ್ಟ್ 15 ರಂದು ಪ್ರಾರಂಭಗೊಂಡ ಈ ಯೋಜನೆಯು, ಕೇವಲ ಒಂದು ವರ್ಷದ ಅವಧಿಯಲ್ಲಿ 1 ಕೋಟಿಗೂ ಹೆಚ್ಚು (1 Crore+) ವಾರ್ಷಿಕ ಪಾಸ್ ವಿತರಿಸುವ ಮೂಲಕ ಭಾರಿ ಯಶಸ್ಸು ಕಂಡಿದೆ.

  • ಅನುಷ್ಠಾನ ಸಂಸ್ಥೆಗಳು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಮತ್ತು NHAI.
  • ಅರ್ಹ ವಾಹನಗಳು: ಖಾಸಗಿ ಮತ್ತು ವಾಣಿಜ್ಯೇತರ (Non-commercial) ನಾಲ್ಕು ಚಕ್ರದ ವಾಹನಗಳು (ಕಾರ್, ಜೀಪ್, ವ್ಯಾನ್ ಇತ್ಯಾದಿ).
  • ವಾರ್ಷಿಕ ಶುಲ್ಕ: ₹3,075 (2026ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಪರಿಷ್ಕೃತ ಶುಲ್ಕ).
  • ಮಾನ್ಯತೆ (Validity): 1 ವರ್ಷ (12 ತಿಂಗಳು) ಅಥವಾ ಗರಿಷ್ಠ 200 ಟೋಲ್ ಪ್ಲಾಜಾ ದಾಟುವಿಕೆಗಳು (ಯಾವುದು ಮೊದಲೋ ಅದು).
  • ವ್ಯಾಪ್ತಿ: ದೇಶಾದ್ಯಂತ ಇರುವ ಸುಮಾರು 1,150ಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿ (NH) ಮತ್ತು ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾಗಳಲ್ಲಿ ಅನ್ವಯ.
  • ಸಕ್ರಿಯಗೊಳಿಸುವ ಆ್ಯಪ್: ರಾಜಮಾರ್ಗಯಾತ್ರ (Rajmargyatra App) ಅಥವಾ NHAI ಅಧಿಕೃತ ವೆಬ್‌ಸೈಟ್.

➤ RFID ತಂತ್ರಜ್ಞಾನ (Radio Frequency Identification): FASTag ಸಿಸ್ಟಮ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ. ವಾಹನದ ವಿಂಡ್‌ಸ್ಕ್ರೀನ್‌ಗೆ ಅಂಟಿಸಲಾದ ಈ ಟ್ಯಾಗ್, ಟೋಲ್ ಪ್ಲಾಜಾದಲ್ಲಿರುವ ಸ್ಕ್ಯಾನರ್‌ ಮೂಲಕ ನೇರವಾಗಿ ಡಿಜಿಟಲ್ ಪಾವತಿಯನ್ನು ಸಕ್ರಿಯಗೊಳಿಸುತ್ತದೆ.
➤ ಹೊಸ ಟ್ಯಾಗ್ ಅಗತ್ಯವಿಲ್ಲ: ಈ ವಾರ್ಷಿಕ ಪಾಸ್‌ಗಾಗಿ ವಾಹನ ಮಾಲೀಕರು ಹೊಸ FASTag ಖರೀದಿಸುವ ಅಗತ್ಯವಿಲ್ಲ. ವಾಹನದಲ್ಲಿ ಈಗಾಗಲೇ ಇರುವ ಸಕ್ರಿಯ FASTag ಗೇ 'ರಾಜಮಾರ್ಗಯಾತ್ರ' ಆ್ಯಪ್ ಮೂಲಕ ಈ ವಾರ್ಷಿಕ ಯೋಜನೆಯನ್ನು ಲಿಂಕ್ (ಮರುಪೂರಣ) ಮಾಡಬಹುದು.
➤ VAHAN ಡೇಟಾಬೇಸ್ಸ: ದರಿ ಯೋಜನೆಯ ಲಾಭ ಪಡೆಯಲು ವಾಹನದ ವಿವರಗಳು ಕೇಂದ್ರ ಸರ್ಕಾರದ 'ವಾಹನ್' (VAHAN) ಡೇಟಾಬೇಸ್‌ನಲ್ಲಿ ನೋಂದಣಿಯಾಗಿರಬೇಕು ಹಾಗೂ ಸಕ್ರಿಯ FASTag ಹೊಂದಿರಬೇಕು.