➤ ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ವಿಶ್ವಾದ್ಯಂತ ಅಂತರರಾಷ್ಟ್ರೀಯ ಶಾಂತಿ ದಿನವನ್ನು (International Day of Peace) ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆ (UN) 1981 ರಲ್ಲಿ ಈ ದಿನವನ್ನು ಘೋಷಿಸಿದ್ದು, ಜಾಗತಿಕ ಮಟ್ಟದಲ್ಲಿ ಹಿಂಸಾಚಾರ ಮತ್ತು ಯುದ್ಧಗಳನ್ನು ತಡೆದು ಶಾಂತಿ ಹಾಗೂ ಸಹಬಾಳ್ವೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
2026 ರ ಧೇಯವಾಕ್ಯ (Theme): ಎಲ್ಲರಿಗೂ, ಎಲ್ಲೆಡೆಯೂ, ಪ್ರತಿದಿನ – ಶಾಂತಿಯಲ್ಲಿ ಹೂಡಿಕೆ ಮಾಡಿ("Invest in Peace – For Everyone, Everywhere, Every Day" )
ಇತಿಹಾಸ ಮತ್ತು ಹಿನ್ನೆಲೆ:
- ಸ್ಥಾಪನೆ (1981): ಯುಎನ್ ಸಾಮಾನ್ಯ ಸಭೆ (UN General Assembly) 1981 ರಲ್ಲಿ ಈ ದಿನವನ್ನು ಆಚರಿಸಲು ನಿರ್ಣಯ ಅಂಗೀಕರಿಸಿತು.
- ಜಾಗತಿಕ ಕಣವಿರಾಮ (2001): 2001 ರಲ್ಲಿ ಯುಎನ್ ಸಾಮಾನ್ಯ ಸಭೆಯು ಸರ್ವಸಮ್ಮತಿಯಿಂದ ಸೆಪ್ಟೆಂಬರ್ 21 ರಂದು ಜಾಗತಿಕ ಶಸ್ತ್ರತ್ಯಾಗ ಮತ್ತು ಕದನ ವಿರಾಮದ (Global Ceasefire & Non-violence) ದಿನವನ್ನಾಗಿ ಘೋಷಿಸಿತು.
- ಶಾಂತಿ ಗಂಟೆ (Peace Bell): ಪ್ರತಿ ವರ್ಷ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಯುಎನ್ ಪೀಸ್ ಬೆಲ್ (Peace Bell - ಜಪಾನ್ ನೀಡಿದ ಉಡುಗೊರೆ) ಬಾರಿಸುವ ಮೂಲಕ ಈ ದಿನದ ಆಚರಣೆಗೆ ಚಾಲನೆ ನೀಡಲಾಗುತ್ತದೆ.
➤ ಪ್ರಸ್ತುತ ವಿಶ್ವದ ಜಾಗತಿಕ ಸ್ಥಿತಿಗತಿಯನ್ನು ಪರಿಶೀಲಿಸಿದಾಗ, ಯುದ್ಧ ತಡೆಯುವ ಕ್ರಮಗಳಿಗಿಂತ ಯುದ್ಧದ ಸಿದ್ಧತೆಗಳೇ ಹೆಚ್ಚಾಗಿ ನಡೆಯುತ್ತಿವೆ. ಪ್ರಸ್ತುತ ಜಾಗತಿಕ ಮಿಲಿಟರಿ ವೆಚ್ಚದ ವಾಸ್ತವ:
- SIPRI ವರದಿ (2025/2026): ಸಿಪ್ರಿ (Stockholm International Peace Research Institute) ನೀಡಿದ ದತ್ತಾಂಶದಂತೆ ಜಾಗತಿಕ ಮಿಲಿಟರಿ ವೆಚ್ಚ ಸಾರ್ವಕಾಲಿಕ ಗರಿಷ್ಠ ಮಟ್ಟವಾದ $2.88 ಟ್ರಿಲಿಯನ್ (USD) ತಲುಪಿದೆ.
- ಪ್ರಸ್ತುತ ಜಾಗತಿಕ ಸಂಘರ್ಷಗಳು: ರಷ್ಯಾ-ಉಕ್ರೇನ್ ಯುದ್ಧ, ಗಾಜಾ ಮಾನವೀಯ ಬಿಕ್ಕಟ್ಟು ಮತ್ತು ಮಧ್ಯಪ್ರಾಚ್ಯದ ಉದ್ವಿಗ್ನತೆಗಳು ಆಧುನಿಕ ಜಗತ್ತು ಇನ್ನೂ ಶಸ್ತ್ರಾಸ್ತ್ರಗಳ ಮೂಲಕವೇ 'ಸುರಕ್ಷತೆ' ಹುಡುಕುತ್ತಿರುವುದನ್ನು ತೋರಿಸುತ್ತವೆ.
ಶಾಂತಿ ಸಚಿವಾಲಯ' ಕಲ್ಪನೆ ಬಂದಿದ್ದು: ಖ್ಯಾತ ಗಾಂಧಿವಾದಿ ಚಿಂತಕ ಮತ್ತು ಬರಹಗಾರ ಸತೀಶ್ ಕುಮಾರ್ ಅವರು ಪ್ರತಿ ದೇಶದಲ್ಲೂ 'ಶಾಂತಿ ಸಚಿವಾಲಯ' (Ministry of Peace) ಇರಬೇಕು ಎಂಬ ಪ್ರಸ್ತಾವನೆಯನ್ನು ಮುನ್ನೆಲೆಗೆ ತಂದಿದ್ದಾರೆ.

ರಕ್ಷಣಾ ಸಚಿವಾಲಯ (Ministry of Defence) ಶಾಂತಿ ಸಚಿವಾಲಯ (Ministry of Peace - ಪ್ರಸ್ತಾವಿತ)
ಯುದ್ಧ, ಶಸ್ತ್ರಾಸ್ತ್ರ ಸಂಗ್ರಹಣೆ ಹಾಗೂ ಸೇನಾ ಬಲವರ್ಧನೆಗೆ ಆದ್ಯತೆ ಶಾಂತಿ ಶಿಕ್ಷಣ, ಮಧ್ಯಸ್ಥಿಕೆ (Mediation) ಮತ್ತು ಸಂವಾದಕ್ಕೆ ಆದ್ಯತೆ
ಶಸ್ತ್ರಾಸ್ತ್ರ ನವೀಕರಣಕ್ಕಾಗಿ ಶತಕೋಟಿ ಡಾಲರ್ ವೆಚ್ಚ ಸಮುದಾಯಗಳ ನಡುವೆ ಹಿಂಸಾರಹಿತ ಪರಿಹಾರ ಮತ್ತು ಮೈತ್ರಿಗೆ ಆದ್ಯತೆ

ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ