➤ ಆಗಸ್ಟ್ 30, 2026 ರಿಂದ ವಿಯೆಟ್ನಾಂನ ದಾ ನಾಂಗ್‌ನಲ್ಲಿ ನಡೆದ "ಪಿಕಲ್‌ಬಾಲ್ ವಿಶ್ವಕಪ್ 2026" ಟೂರ್ನಿಯಲ್ಲಿ ಭಾರತ ಒಟ್ಟು 41 ಪದಕಗಳನ್ನು ಗೆಲ್ಲುವ ಮೂಲಕ 82 ದೇಶಗಳ ಪೈಕಿ 4ನೇ ಸ್ಥಾನ ಪಡೆದುಕೊಂಡಿದೆ.
- ಆಯೋಜಿತ ಸ್ಥಳ: ದಾ ನಾಂಗ್ (Da Nang), ವಿಯೆಟ್ನಾಂ
- ಭಾರತದ ಒಟ್ಟು ಪದಕಗಳು: 41 (7 ಚಿನ್ನ, 17 ಬೆಳ್ಳಿ, 17 ಕಂಚು)
- ಭಾರತದ ಶ್ರೇಯಾಂಕ: 4ನೇ ಸ್ಥಾನ (ಕಳೆದ ಬಾರಿ 7ನೇ ಸ್ಥಾನ)
- ಭಾಗವಹಿಸಿದ್ದ ದೇಶಗಳು: 82
- ಆಡಳಿತ ಮಂಡಳಿ: ಇಂಡಿಯನ್ ಪಿಕಲ್‌ಬಾಲ್ ಅಸೋಸಿಯೇಷನ್ (IPA)
➤ ಪಿಕಲ್‌ಬಾಲ್ ವಿಶ್ವಕಪ್ 2026 ಭಾರತದ ಸಾಧನೆ: ವಿಯೆಟ್ನಾಂನ ದಾ ನಾಂಗ್‌ನಲ್ಲಿ ನಡೆದ ಪಿಕಲ್‌ಬಾಲ್ ವಿಶ್ವಕಪ್‌ನಲ್ಲಿ 48 ಅಥ್ಲೀಟ್‌ಗಳನ್ನೊಳಗೊಂಡ ಭಾರತೀಯ ತಂಡವು ಅದ್ಭುತ ಪ್ರದರ್ಶನ ನೀಡಿದೆ. ಕಿರಿಯರ, ಹಿರಿಯರ ಹಾಗೂ ಮಾಸ್ಟರ್ಸ್ ವಿಭಾಗಗಳಲ್ಲಿ ಸ್ಪರ್ಧಿಸಿದ ಭಾರತೀಯ ಕ್ರೀಡಾಪಟುಗಳು ಒಟ್ಟು 41 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
- ಏಷ್ಯಾದಲ್ಲಿ ಇದೇ ಮೊದಲ ಬಾರಿಗೆ ಈ ಪಿಕಲ್‌ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು ಎಂಬುದು ವಿಶೇಷ.
➤ ಪದಕಗಳ ವಿವರ
1. ಚಿನ್ನದ ಪದಕಗಳು (Gold): 07 ಪದಕಗಳು
2. ಬೆಳ್ಳಿ ಪದಕಗಳು (Silver): 17 ಪದಕಗಳು
3. ಕಂಚಿನ ಪದಕಗಳು (Bronze): 17 ಪದಕಗಳು
ಒಟ್ಟು ಪದಕಗಳು (Total)41
➤ ಪ್ರಮುಖ ಚಿನ್ನದ ಪದಕ ವಿಜೇತರು:
1. ಭೂಷಣ್ ಅಕುಟ್ (Bhushan Akut): 60+ ವಯೋಮಿತಿಯ ವಿಭಾಗದಲ್ಲಿ ಭೂಷಣ್ ಅಕುಟ್ 3 ಚಿನ್ನದ ಪದಕಗಳನ್ನು ಗೆದ್ದು 'ಹ್ಯಾಟ್ರಿಕ್' ಸಾಧನೆ ಮಾಡಿದರು:
- 60+ ಪುರುಷರ ಸಿಂಗಲ್ಸ್
- 60+ ಪುರುಷರ ಡಬಲ್ಸ್ (ಅಶೋಕ್ ರೋಹಿರಾ ಜೊತೆ)
- 60+ ಮಿಕ್ಸೆಡ್ ಡಬಲ್ಸ್ (ಎಲಿಜಬೆತ್ ವಿಲ್ಕಾಕ್ಸ್ ಜೊತೆ)
2. ಪೂರ್ವಂಶ್ ಪಟೇಲ್ (Purvansh Patel): 18 ವರ್ಷದೊಳಗಿನವರ (U-18) ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ.
3. ಫೈರೂಜ್ ಝೈದಿ (Fayrouz Zaidi): 40+ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ.
4. ವಿವೇಕ್ ರೆಡ್ಡಿ (Vivek Reddy): 40+ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ.
5. ಕಿರಣ್ ಸಾಲಿಯಾನ್ (Kiran Salian): 50+ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ.
➤ ಇತರ ಪ್ರಮುಖ ಸಾಧನೆಗಳು:
- ಕಿಡ್ಸ್ ತಂಡ (Kids Team): ವೀರ್ ಶಾ ನಾಯಕತ್ವದ ಭಾರತೀಯ ಕಿರಿಯರ ತಂಡವು ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ 3-0 ಅಂತರದಲ್ಲಿ ಗೆದ್ದು, ಫೈನಲ್‌ನಲ್ಲಿ ಅಮೆರಿಕ (USA) ವಿರುದ್ಧ ಸೋತು ಬೆಳ್ಳಿ ಪದಕ ಗೆದ್ದುಕೊಂಡಿತು.
- ಓಪನ್ ಪ್ರೋ ಪುರುಷರ ಡಬಲ್ಸ್: ಹರ್ಷ ಮೆಹ್ತಾ ಅವರು ಕಂಚಿನ ಪದಕ ಗೆದ್ದಿದ್ದಾರೆ.
ಪಿಕಲ್‌ಬಾಲ್ ವಿಶ್ವಕಪ್ 2026: ಭಾರತಕ್ಕೆ 4ನೇ ಸ್ಥಾನ, 41 ಪದಕಗಳ ಐತಿಹಾಸಿಕ ಸಾಧನೆ!
Published by Yallamma G
10 ಸೆಪ್ಟೆಂಬರ್ 2026