➤ 20ನೇ ಏಷ್ಯನ್ ಗೇಮ್ಸ್ (Asian Games 2026) ಕ್ರೀಡಾಕೂಟಕ್ಕೆ ಭಾರತೀಯ ಕ್ರೀಡಾಪಟುಗಳ ತಂಡ ಸಂಪೂರ್ಣವಾಗಿ ಸಜ್ಜಾಗಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ ಹಾಗೂ ಭಾರತೀಯ ಒಲಿಂಪಿಕ್ ಸಂಸ್ಥೆಯ (IOA) ಅಧ್ಯಕ್ಷೆ ಪಿ.ಟಿ. ಉಷಾ ಅವರು 503 ಸದಸ್ಯರ ಭಾರತೀಯ ತಂಡಕ್ಕೆ ಭವ್ಯ ಬೀಳ್ಕೊಡುಗೆ (Send-off) ನೀಡಿ, ಅಧಿಕೃತ ಜರ್ಸಿಯನ್ನು ಅನಾವರಣಗೊಳಿಸಿದರು. - 503 ಸದಸ್ಯರ ತಂಡ: 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಭಾರತದಿಂದ ಒಟ್ಟು 503 ಸದಸ್ಯರ ಬೃಹತ್ ತಂಡ (ಕ್ರೀಡಾಪಟುಗಳು ಮತ್ತು ಬೆಂಬಲ ಸಿಬ್ಬಂದಿ) ತೆರಳುತ್ತಿದೆ. - ಹೊಸ ಪ್ರತಿಭೆಗಳ ಪಾದಾರ್ಪಣೆ: ಈ ತಂಡದ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಪದಾರ್ಪಣೆ (Debut) ಮಾಡುತ್ತಿದ್ದಾರೆ. - ಅಧಿಕೃತ ಜರ್ಸಿ ಬಿಡುಗಡೆ: ಸಚಿವ ಡಾ. ಮನ್ಸುಖ್ ಮಾಂಡವೀಯ, IOA ಅಧ್ಯಕ್ಷೆ ಪಿ.ಟಿ. ಉಷಾ, ಕ್ರೀಡಾ ಕಾರ್ಯದರ್ಶಿ ಹರಿರಂಜನ್ ರಾವ್ ಹಾಗೂ 'ಶೆಫ್ ಡಿ ಮಿಷನ್' (Chef de Mission) ಸಹದೇವ್ ಯಾದವ್ ಅವರು ಕ್ರೀಡಾಪಟುಗಳ ಅಧಿಕೃತ ಜರ್ಸಿಯನ್ನು ಅನಾವರಣಗೊಳಿಸಿದರು. - 2036ರ ಒಲಿಂಪಿಕ್ಸ್ ಗುರಿ: ಭಾರತವು 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ದೂರದೃಷ್ಟಿ ಹೊಂದಿದ್ದು, ಕ್ರೀಡಾ ಮೂಲಸೌಕರ್ಯಕ್ಕಾಗಿ 10 ವರ್ಷಗಳ ಯೋಜನೆಯಡಿಯಲ್ಲಿ ₹36,000 ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. - ಕ್ರಿಕೆಟ್ ವಿಭಾಗ: ಏಷ್ಯನ್ ಗೇಮ್ಸ್‌ನ ಟ್ವೆಂಟಿ-20 (T20) ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡ ಭಾಗವಹಿಸುತ್ತಿದೆ. ➤ ಏಷ್ಯನ್ ಗೇಮ್ಸ್ ಕುರಿತು ಸಾಮಾನ್ಯ ಜ್ಞಾನ : ಏಷ್ಯನ್ ಗೇಮ್ಸ್ ಮೊದಲ ಬಾರಿಗೆ 1951ರಲ್ಲಿ ನವದೆಹಲಿಯಲ್ಲಿ (ಭಾರತ) ಆರಂಭವಾಯಿತು. ಇದನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ಆಯೋಜಿಸುತ್ತದೆ. ಒಲಿಂಪಿಕ್ಸ್‌ನಂತೆ ಏಷ್ಯನ್ ಗೇಮ್ಸ್ ಕೂಡ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. ಒಲಿಂಪಿಕ್ಸ್ ನಂತರ ಇದು ವಿಶ್ವದ 2ನೇ ಅತಿ ದೊಡ್ಡ ಬಹು-ಕ್ರೀಡಾ ಕೂಟವಾಗಿದೆ.