➤ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸೆಪ್ಟೆಂಬರ್ 4 ರಿಂದ 9, 2026 ರವರೆಗೆ ನಡೆದ ವಿಶ್ವ ಆರ್ಚರಿ ಪ್ಯಾರಾ ಸರಣಿ (ಸ್ಟೇಜ್-III) [World Archery Para Series (Stage III)] ಪಂದ್ಯಾವಳಿಯಲ್ಲಿ ಭಾರತದ ಪ್ಯಾರಾ ಬಿಲ್ಲುಗಾರರು (Para-Archers) ಅದ್ಭುತ ಪ್ರದರ್ಶನ ನೀಡಿದ್ದು, ಸೆಪ್ಟೆಂಬರ್ 8, 2026 ರಂದು ನಡೆದ ಪ್ರಮುಖ ಫೈನಲ್ ಪಂದ್ಯಗಳಲ್ಲಿ ಒಟ್ಟು 2 ಚಿನ್ನ ಮತ್ತು 1 ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ➤ ಭಾರತದ ಸಾಧನೆ:1. ಪುರುಷರ ಕಾಂಪೌಂಡ್ ತಂಡ: ಚಿನ್ನದ ಪದಕ2. ಪುರುಷರ ರಿಕರ್ವ್ ತಂಡ: ಚಿನ್ನದ ಪದಕ3. ಮಹಿಳೆಯರ ರಿಕರ್ವ್ ತಂಡ: ಬೆಳ್ಳಿ ಪದಕ➤ ಭಾರತೀಯ ಅಥ್ಲೀಟ್‌ಗಳ ಸಾಧನೆಯ ವಿವರ1. ಪುರುಷರ ಕಾಂಪೌಂಡ್ ತಂಡಕ್ಕೆ ಚಿನ್ನದ ಪದಕ (Men's Compound Team): ವಿಶ್ವ ಚಾಂಪಿಯನ್ ತೋಮನ್ ಕುಮಾರ್ (Toman Kumar) ಮತ್ತು ಶ್ಯಾಮ್ ಸುಂದರ್ ಸ್ವಾಮಿ (Shyam Sunder Swami) ಅವರನ್ನೊಳಗೊಂಡ ಭಾರತೀಯ ಜೋಡಿಯು ಫೈನಲ್ ಪಂದ್ಯದಲ್ಲಿ ಇರಾಕ್‌ನ ಅಬ್ಬಾಸ್ ಕಧಿಮ್ ಮತ್ತು ಅನ್ವರ್ ಅಲ್ದಾವೋಡ್ ಅವರನ್ನು 152-139 ಅಂಕಗಳ ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತು.2. ಪುರುಷರ ರಿಕರ್ವ್ ತಂಡಕ್ಕೆ ಚಿನ್ನದ ಪದಕ (Men's Recurve Team): ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕ ವಿಜೇತರಾದ ಹರ್ವಿಂದರ್ ಸಿಂಗ್ (Harvinder Singh) ಮತ್ತು ವಿಜಯ್ ಸುಂಡಿ (Vijay Sundi) ಅವರಿದ್ದ ತಂಡವು ಸ್ಲೊವಾಕಿಯಾದ ಡೇವಿಡ್ ಇವಾನ್ ಮತ್ತು ಡೆನಿಸ್ ಇವಾನ್ ಅವರನ್ನು 6-2 ಸೆಟ್‌ಗಳಿಂದ ಸೋಲಿಸಿ ಭಾರತಕ್ಕೆ ಎರಡನೇ ಚಿನ್ನದ ಪದಕ ತಂದಿತ್ತರು.- ವಿಶೇಷ ಸೂಚನೆ: ಹರ್ವಿಂದರ್ ಸಿಂಗ್ ಅವರು ಟೋಕಿಯೋ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಕಂಸ್ಯ ಹಾಗೂ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಬಿಲ್ಲುಗಾರರಾಗಿದ್ದಾರೆ.3. ಮಹಿಳೆಯರ ರಿಕರ್ವ್ ತಂಡಕ್ಕೆ ಬೆಳ್ಳಿ ಪದಕ (Women's Recurve Team): ಭಾವನಾ (Bhawna) ಮತ್ತು ಪೂಜಾ (Pooja) ಅವರನ್ನೊಳಗೊಂಡ ಭಾರತೀಯ ಮಹಿಳಾ ರಿಕರ್ವ್ ತಂಡವು ಫೈನಲ್‌ನಲ್ಲಿ ಚೀನಾ ವಿರುದ್ಧ 0-6 ಸೆಟ್‌ಗಳಿಂದ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.➤ ಇತರ ಪ್ರಮುಖ ಸಾಧನೆಗಳು:- W1 ಮಿಕ್ಸ್‌ಡ್ ತಂಡ: ಸ್ವಾತಿ ಚೌಧರಿ ಮತ್ತು ಆದಿಲ್ ಮೊಹಮ್ಮದ್ ನಜೀರ್ ಅನ್ಸಾರಿ ಜೋಡಿಯು W1 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದೆ.- ಶೀತಲ್ ದೇವಿ ಮತ್ತು ಪಾಯಲ್ ನಾಗ್ ಅವರಿದ್ದ ಮಹಿಳೆಯರ ಕಾಂಪೌಂಡ್ ತಂಡವು ಕಂಚಿನ ಪದಕದ ಪಂದ್ಯದಲ್ಲಿ ಚೀನಾ ವಿರುದ್ಧ ಸಣ್ಣ ಅಂತರದಲ್ಲಿ ಸೋತು ಪದಕ ವಂಚಿತವಾಯಿತು.