➤ ಕರ್ನಾಟಕದ ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆಯ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಎರಡು ವಿನೂತನ ಯೋಜನೆಗಳನ್ನು ಘೋಷಿಸಿದೆ. ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ (Karnataka State Western Ghats Conservation Task Force Committee) ಅಧ್ಯಕ್ಷರಾದ ಮೊಹಮ್ಮದ್ ತಬ್ರೇಜ್ ಆಲಂ ಶರೀಫ್ (Mohammed Tabrez Alam Shariff) ಅವರು ನವೆಂಬರ್ 2026 ರಲ್ಲಿ ಈ ಯೋಜನೆಗಳನ್ನು ಪ್ರಕಟಿಸಿದ್ದಾರೆ.
➤ ವೆಸ್ಟರ್ನ್ ಘಾಟ್ಸ್ ಆನ್ ವೀಲ್ಸ್' : ಪಶ್ಚಿಮ ಘಟ್ಟಗಳ ಶ್ರೀಮಂತ ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರೂಪಿಸಲಾದ ಭಾರತದ ಮೊದಲ ಶೂನ್ಯ-ಇಂಗಾಲದ (Zero-Carbon) ಸಂಚಾರಿ ಜೀವವೈವಿಧ್ಯ ವಸ್ತುಸಂಗ್ರಹಾಲಯ ಇದಾಗಿದೆ.
- ವಿನ್ಯಾಸ ಮತ್ತು ತಂತ್ರಜ್ಞಾನ: ವೋಲ್ವೋ (Volvo) ಸಂಸ್ಥೆಯು ದೇಣಿಗೆಯಾಗಿ ನೀಡಿರುವ 15 ಮೀಟರ್ ಉದ್ದದ ಐಷಾರಾಮಿ ಬಸ್ಸನ್ನು (9600 ಸರಣಿ) ಸುಮಾರು ₹1 ಕೋಟಿ ವೆಚ್ಚದಲ್ಲಿ ಸಂಚಾರಿ ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತಿದೆ.
- ಶೂನ್ಯ-ಇಂಗಾಲ (Zero-Carbon): ಈ ಬಸ್ಸಿನ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು (Solar Panels) ಅಳವಡಿಸಲಾಗಿದ್ದು, ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ.
- ಒಳಾಂಗಣ ವೈಶಿಷ್ಟ್ಯಗಳು: ಬಸ್ಸಿನ ಒಳಭಾಗದಲ್ಲಿ ಮಳೆಕಾಡುಗಳ ಮಾದರಿಗಳು, ವನ್ಯಜೀವಿಗಳ ನೈಜ ಗಾತ್ರದ ಪ್ರತಿಕೃತಿಗಳು, ಸಂವಾದಾತ್ಮಕ ಡಿಜಿಟಲ್ ಪರದೆಗಳು, ಜೀವವೈವಿಧ್ಯ ನಕ್ಷೆಗಳು ಮತ್ತು ಬಹುಭಾಷಾ ಆಡಿಯೋ ಮಾರ್ಗದರ್ಶಿ (Multilingual Audio Guides) ಸೌಲಭ್ಯವಿರಲಿದೆ.
- ವಿಶೇಷ ಪ್ರಭೇದಗಳ ಪ್ರದರ್ಶನ: ಪಶ್ಚಿಮ ಘಟ್ಟಗಳ ಸ್ಥಳೀಯ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಾದ ಸಿಂಗಳೀಕ (Lion-tailed Macaque) ಮತ್ತು ನೀಲಗಿರಿ ತಹ್ರ್ (Nilgiri Tahr) ಮುಂತಾದವುಗಳ ಕುರಿತು ವಿಶೇಷ ಮಾಹಿತಿ ಇರಲಿದೆ.
- ವ್ಯಾಪ್ತಿ: ಈ ಸಂಚಾರಿ ವಸ್ತುಸಂಗ್ರಹಾಲಯವು ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿ ಸಂಚರಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಪಶ್ಚಿಮ ಘಟ್ಟಗಳ ಮಹತ್ವವನ್ನು ತಿಳಿಸಲಿದೆ.
➤ 'ಪ್ರಾಜೆಕ್ಟ್ ಸಹ್ಯಾದ್ರಿ ಸಂವರ್ಧನಾ 2026' (Project Sahyadri Samvardhana 2026): ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಹಸಿರು ಹೊದಿಕೆಯನ್ನು (Green Cover) ಹೆಚ್ಚಿಸಲು ಮತ್ತು ಪರಿಸರ ಪುನರುಜ್ಜೀವನಗೊಳಿಸಲು 17 ಸರ್ಕಾರಿ ಇಲಾಖೆಗಳ ಸಮನ್ವಯದೊಂದಿಗೆ ಆರಂಭಿಸಲಾದ ಬೃಹತ್ ಸಂರಕ್ಷಣಾ ಯೋಜನೆಯೇ 'ಪ್ರಾಜೆಕ್ಟ್ ಸಹ್ಯಾದ್ರಿ ಸಂವರ್ಧನಾ 2026'.
- ಅರಣ್ಯ ಇಲಾಖೆ: ಮುಂದಿನ ಒಂದು ವರ್ಷದೊಳಗೆ 50 ಲಕ್ಷ ಸ್ಥಳೀಯ ಜಾತಿಯ ಸಸಿಗಳನ್ನು (Native Saplings) ನೆಡುವ ಗುರಿಯನ್ನು ಹೊಂದಿದೆ.
- ಕಂದಾಯ ಇಲಾಖೆ: ಜಿಲ್ಲಾಡಳಿತಗಳ ಸಹಯೋಗದೊಂದಿಗೆ ನೆಡುತೋಪು ಮತ್ತು ಅರಣ್ಯೀಕರಣಕ್ಕಾಗಿ 300 ರಿಂದ 500 ಹೆಕ್ಟೇರ್ ಭೂಮಿಯನ್ನು ಗುರುತಿಸಲಿದೆ.
- ಪ್ರವಾಸೋದ್ಯಮ ಇಲಾಖೆ: ಪರಿಸರಕ್ಕೆ ಹಾನಿಯಾಗದಂತೆ (Low-impact) ಐದು 'ಪಶ್ಚಿಮ ಘಟ್ಟಗಳ ಅನುಭವ ಕೇಂದ್ರಗಳನ್ನು' (Western Ghats Experience Centres) ಸ್ಥಾಪಿಸಲಿದ್ದು, ಮೊದಲ ಕೇಂದ್ರವು ಜೋಗ ಜಲಪಾತದ (Jog Falls) ಬಳಿ ತಲೆ ಎತ್ತಲಿದೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಕರ್ನಾಟಕದ ಎರಡು ಮಹತ್ವದ ಯೋಜನೆಗಳು: 'ವೆಸ್ಟರ್ನ್ ಘಾಟ್ಸ್ ಆನ್ ವೀಲ್ಸ್' ಮತ್ತು 'ಪ್ರಾಜೆಕ್ಟ್ ಸಹ್ಯಾದ್ರಿ ಸಂವರ್ಧನಾ 2026'
Published by
Akshata Halli
20 hours ago