➤ ಸಂವಿಧಾನ ದಿನದ ಮುನ್ನಾದಿನವಾದ ನವೆಂಬರ್ 26, 2026 ರಂದು, ಹರಿಯಾಣದ ಸೋನಿಪತ್‌ನಲ್ಲಿರುವ ಓ.ಪಿ. ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿ (JGU) ಆವರಣದಲ್ಲಿ ಭಾರತದ ಮೊದಲ ಭಾರತದ ಮುಖ್ಯ ನ್ಯಾಯಮೂರ್ತಿಗಳ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಲಾಯಿತು. ‘ಗಣರಾಜ್ಯದ ರಕ್ಷಕರು’ ಎಂಬ ಪರಿಕಲ್ಪನೆಯಡಿ ರೂಪುಗೊಂಡ ಈ ವಸ್ತುಸಂಗ್ರಹಾಲಯವನ್ನು 10 ಮಾಜಿ ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ಪ್ರತ್ಯಕ್ಷವಾಗಿ ಅಥವಾ ವರ್ಚುವಲ್ ಮೂಲಕ ಭಾಗವಹಿಸಿ ಲೋಕಾರ್ಪಣೆ ಮಾಡಿದರು.
➤ ಉದ್ಘಾಟನೆಯಲ್ಲಿ ಭಾಗವಹಿಸಿದ ಮಾಜಿ ಮುಖ್ಯ ನ್ಯಾಯಮೂರ್ತಿಗಳು: ಭಾರತದ ನ್ಯಾಯಾಂಗ ಇತಿಹಾಸ ಮತ್ತು ಸಾಂವಿಧಾನಿಕ ಬೆಳವಣಿಗೆಯನ್ನು ದಾಖಲಿಸುವ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಮುಖ್ಯ ನ್ಯಾಯಮೂರ್ತಿಗಳು: ಎಂ.ಎನ್. ವೆಂಕಟಾಚಲಯ್ಯ ಬಿ.ಎನ್. ಕೃಪಾಲ್, ಎಸ್. ರಾಜೇಂದ್ರ ಬಾಬು, ಕೆ.ಜಿ. ಬಾಲಕೃಷ್ಣನ್, ಪಿ. ಸದಾಶಿವಂ, ಆರ್.ಎಂ. ಲೋಧಾ, ದೀಪಕ್ ಮಿಶ್ರಾ, ಎಸ್.ಎ. ಬೋಬ್ಡೆ, ಯು.ಯು. ಲಲಿತ್ ಬಿ.ಆರ್. ಗವಾಯಿ.
➤ ವಸ್ತುಸಂಗ್ರಹಾಲಯದ ಐದು ಪ್ರಮುಖ ಗ್ಯಾಲರಿಗಳು: ಕಲೆ, ತಂತ್ರಜ್ಞಾನ, ಇತಿಹಾಸ ಮತ್ತು ವೈಯಕ್ತಿಕ ಅನುಭವಗಳನ್ನು ಒಗ್ಗೂಡಿಸಿ ಈ ವಸ್ತುಸಂಗ್ರಹಾಲಯವನ್ನು ಐದು ವಿಭಾಗಗಳಲ್ಲಿ ವಿನ್ಯಾಸಗೊಳಿಸಲಾಗಿದೆ:
1. ಪಾಥ್‌ವೇಸ್ ಆಫ್ ಜಸ್ಟಿಸ್: ನ್ಯಾಯದ ಐತಿಹಾಸಿಕ ಮತ್ತು ಸಾಮಾಜಿಕ ಅಡಿಪಾಯಗಳನ್ನು ಪರಿಚಯಿಸುತ್ತದೆ. ವಸಾಹತುಶಾಹಿ ಭಾರತದ ವಿಚಾರಣೆಗಳನ್ನು ನೆನಪಿಸುವ ಹತ್ತು ಅಮೃತಶಿಲಾ ಫಲಕಗಳು, ಅಸ್ಪೃಶ್ಯತೆ, ವರದಕ್ಷಿಣೆ, ಜೀತ ಪದ್ಧತಿ, ಶಿಕ್ಷಣ, ಪಾರದರ್ಶಕತೆ, ಕಾರ್ಯಸ್ಥಳದ ಘನತೆ ಮತ್ತು ಹವಾಮಾನ ನ್ಯಾಯದ ಕುರಿತ ಕಲಾಕೃತಿಗಳು ಇಲ್ಲಿವೆ. ಸುಪ್ರೀಂ ಕೋರ್ಟ್ ಮಾದರಿಯೂ ಇಲ್ಲಿದೆ.
2. ಪಿಲ್ಲರ್ಸ್ ಆಫ್ ಜಸ್ಟಿಸ್: ಮುಖ್ಯ ನ್ಯಾಯಮೂರ್ತಿಗಳ ಜೀವನಚರಿತ್ರೆ ಮತ್ತು ಸಂವಿಧಾನದ ಕಲೆಯನ್ನು ತೋರಿಸುವ 20 ಸ್ತಂಭಗಳಿವೆ; ಪ್ರತಿಯೊಂದರಲ್ಲೂ ನಾಲ್ಕು ಸಂವಾದಾತ್ಮಕ ಪರದೆಗಳಿವೆ. ಎಂಟನೇ ಪರಿಶಿಷ್ಟದ ಎಲ್ಲಾ 22 ಭಾಷೆಗಳಲ್ಲಿ 'ನ್ಯಾಯ'ವನ್ನು ಬಿಂಬಿಸುವ 22 ಪ್ರಾದೇಶಿಕ ಕೈಮಗ್ಗದ ನೇಯ್ಗೆಗಳು ಮತ್ತು 25 ಹೈಕೋರ್ಟ್‌ಗಳ ಮಾದರಿಗಳು ಭಾರತದ ಭಾಷಾ ವೈವಿಧ್ಯ ಹಾಗೂ ಸಾಂಸ್ಥಿಕ ವ್ಯಾಪ್ತಿಯನ್ನು ತೋರಿಸುತ್ತವೆ.
3. ಹಾಲ್ ಆಫ್ ಕಾನ್ಸ್ಟಿಟ್ಯೂಷನಲ್ ವಾಯ್ಸಸ್: ಭಾರತದ ಸಾಂವಿಧಾನಿಕ ಚಿಂತನೆಯನ್ನು ರೂಪಿಸಿದ 11 ವ್ಯಕ್ತಿಗಳ ಧ್ವನಿ ಮುದ್ರಿಕೆಗಳು ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಹಿರಿಯ ನ್ಯಾಯಾಧೀಶರೊಂದಿಗಿನ ಮೌಖಿಕ ಇತಿಹಾಸದ ಸಂದರ್ಶನಗಳನ್ನು ಇದು ಒಳಗೊಂಡಿದೆ.
4. ಕೀಸ್ಟೋನ್ಸ್ ಆಫ್ ಜಸ್ಟಿಸ್: 20 ಮಹತ್ವದ ತೀರ್ಪುಗಳು ಮತ್ತು ಅವುಗಳ ಹಿಂದಿನ ತತ್ವಗಳನ್ನು ವಿವರಿಸುತ್ತದೆ. ಇಲ್ಲಿ ಹೊಲೋಗ್ರಾಫಿಕ್ ನ್ಯಾಯಾಲಯ ಮತ್ತು ಸೆರಾಮಿಕ್, ಕಾಗದ ಹಾಗೂ ಸೆಣಬಿನಿಂದ ತಯಾರಿಸಿದ ಫ್ರಮ್ ಪೇಪರ್ ಟು ಪ್ರೆಸಿಡೆಂಟ್ ಕಲಾಕೃತಿ ಗಮನ ಸೆಳೆಯುತ್ತವೆ.
5. ಐಡಿಯಾಸ್ ಆಫ್ ಜಸ್ಟಿಸ್: ಶಿಲ್ಪಕಲೆ ಉದ್ಯಾನ ಮತ್ತು ನ್ಯಾಯಾಧೀಶರ ಪ್ರತಿಮೆಗಳ ಮೂಲಕ ನ್ಯಾಯಾಂಗ ಹುದ್ದೆಯ ಜವಾಬ್ದಾರಿಗಳನ್ನು ಚಿತ್ರಿಸುತ್ತದೆ. ದಿ ರೋಬ್ ಆಫ್ ಜಸ್ಟಿಸ್ ಮತ್ತು ರಾಷ್ಟ್ರಧ್ವಜ ಹಾರಿಸುವ ನಾಗರಿಕರ ಹಕ್ಕಿಗಾಗಿ ಜಿಂದಾಲ್ ನಡೆಸಿದ ಕಾನೂನು ಹೋರಾಟವನ್ನು ನೆನಪಿಸುವ ದಿ ರೈಟ್ ಟು ಫ್ಲೈ ಕಲಾಕೃತಿಗಳು ಇಲ್ಲಿವೆ.
ಭಾರತದ ಮೊದಲ ‘ಭಾರತದ ಮುಖ್ಯ ನ್ಯಾಯಮೂರ್ತಿಗಳ ವಸ್ತುಸಂಗ್ರಹಾಲಯ’ ಉದ್ಘಾಟನೆ
Published by
Akshata Halli
1 day ago