ಬಜಾಜ್ ಫೈನಾನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಬಜಾಜ್ ರಾಜೀನಾಮೆ
Published by Basavaraj Halli
23 ಜುಲೈ 2020
ಜೂಲೈ ತಿಂಗಳ ಕೊನೆಯಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನವನ್ನು ರಾಹುಲ್ ಬಜಾಜ್ ತ್ಯೆಜಿಸಲಿದ್ದಾರೆ ಎಂದು ಕಂಪನಿಯು ತಿಳಿಸಿದೆ. ಅವರ ನಂತರ ಹಾಲಿ ಉಪಾಧ್ಯಕ್ಷರಾದ ಸಂಜೀವ್ ಬಜಾಜ್ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಬಜಾಜ್ ಫೈನಾನ್ಸ್ ತಿಳಿಸಿದೆ.
ರಾಹುಲ್ ಬಜಾಜ್ ಅವರು 1987 ರಲ್ಲಿ ಕಂಪನಿಯ ಪ್ರಾರಂಭದಿಂದಲೂ ಮತ್ತು ಐದು ದಶಕಗಳಿಂದಲೂ ಕಂಪನಿಯ ನಡೆಸಿದ್ದರು. ಅಲ್ಲದೆ ಕಂಪನಿಗೆ ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕರಾಗಿ ಕೂಡ ತಮ್ಮ ಸೇವೆ ಸಲ್ಲಿಸಲಿದ್ದಾರೆ.