ಕೊರೋನಾ ವೈರಸ್ ನಿರ್ವಹಣೆ: ಬಿಬಿಎಂಪಿ ರಾಯಭಾರಿಯಾಗಿ ನಟ ರಮೇಶ್ ಅರವಿಂದ್ ನೇಮಕ
Published by Basavaraj Halli
23 ಜುಲೈ 2020
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಕೋರೋಣ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸದ್ದುದ್ದೇಶದಿಂದ ಬಿಬಿಎಂಪಿ ಕೋವಿಡ್ ನಿಯಂತ್ರಣ ರಾಯಭಾರಿಯನ್ನಾಗಿ ಹಿರಿಯ ನಟ ರಮೇಶ್ ಅರವಿಂದ್ ಅವರನ್ನು ನೇಮಕ ಮಾಡಿದೆ. ಸೋಂಕಿನಿಂದ ಮುಕ್ತವಾಗಿರುವುದು ಹೇಗೆ ಎಂಬುದು ಸೇರಿದಂತೆ ಸೋಂಕಿನ ಕುರಿತು ಅರಿವು ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.