➤ ಕ್ರೀಡಾ ಲೋಕದಲ್ಲಿ ಭಾರತ ಮತ್ತೊಂದು ಹೆಮ್ಮೆಯ ಮೈಲಿಗಲ್ಲು ಸ್ಥಾಪಿಸಿದೆ. ಸೆನೆಗಲ್‌ನ ಡಾಕರ್‌ನಲ್ಲಿ ನಡೆಯುತ್ತಿರುವ 2026ರ ಯೂತ್ ಒಲಿಂಪಿಕ್ ಕ್ರೀಡಾಕೂಟದಲ್ಲಿ (Youth Olympic Games 2026) ಮಣಿಪಾಗಳ ಯುವ ಬಾಕ್ಸರ್ ಲೈರೆನ್ಲಾಕ್ಪಮ್ ಅಂಬೇಕರ್ ಮೀಟೈ (Lairenlakpam Ambekar Meetei) ಅವರು ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಸಾರ್ವಕಾಲಿಕ ಮೊದಲ ಚಿನ್ನದ ಪದಕ ತಂದುಕೊಟ್ಟು ಇತಿಹಾಸ ಸೃಷ್ಟಿಸಿದ್ದಾರೆ.
➤ ಪುರುಷರ 50 ಕೆ.ಜಿ ತೂಕ ವಿಭಾಗದ ಫೈನಲ್ ಪಂದ್ಯದಲ್ಲಿ ಅಂಬೇಕರ್ ಮೀಟೈ ಅವರು ಐರ್ಲೆಂಡ್‌ನ ಕ್ರಿಶ್ಚಿಯನ್ ಜುಬಾನಿ (Kristian Jubani) ಅವರ ವಿರುದ್ಧ ಸೆಣಸಾಡಿದರು. ಆರಂಭಿಕ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರೂ, ಅದ್ಭುತ ಹೋರಾಟದ ಗುಣ ಪ್ರದರ್ಶಿಸಿದ ಅಂಬೇಕರ್, ಅಂತಿಮವಾಗಿ 3-2 ಅಂತರದ ರೋಚಕ ಜಯ ಸಾಧಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
➤ ಇದೇ ದಿನ ಹರಿಯಾಣದ ಮತ್ತೊಬ್ಬ ಬಾಕ್ಸರ್ ಗುಂಜನ್ ಕೂಡ ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಡಬಲ್ ಸಂಭ್ರಮ ತಂದುಕೊಟ್ಟರು.
➤ ಯೂತ್ ಒಲಿಂಪಿಕ್ಸ್ ಬಾಕ್ಸಿಂಗ್‌ ಇತಿಹಾಸದಲ್ಲಿ ಭಾರತದ ಹೆಜ್ಜೆಗುರುತುಗಳು: ಯೂತ್ ಒಲಿಂಪಿಕ್ಸ್‌ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಬಾಕ್ಸರ್ ಒಬ್ಬರು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು.   
- 2010ರ ಸಿಂಗಾಪುರ್ ಯೂತ್ ಒಲಿಂಪಿಕ್ಸ್: ಈ ಹಿಂದೆ 2010ರಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಶಿವ ಥಾಪ (ಬೆಳ್ಳಿ) ಮತ್ತು ವಿಕಾಸ್ ಕೃಷ್ಣನ್ (ಕಂಚು) ಪದಕಗಳನ್ನು ಪಡೆದಿದ್ದೇ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.
- ಈಗ ಅಂಬೇಕರ್ ಮೀಟೈ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ದೇಶಕ್ಕೆ ಪ್ರಥಮ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ.
➤ ಅಂಬೇಕರ್ ಮೀಟೈ ಅವರ ಜಯಯಾತ್ರೆ: ಫೈನಲ್ ತಲುಪುವ ಹಾದಿಯಲ್ಲಿ ಅಂಬೇಕರ್ ಅತ್ಯಂತ ಪ್ರಾಬಲ್ಯ ಮೆರೆದಿದ್ದರು:
1. ಕ್ವಾರ್ಟರ್ ಫೈನಲ್: ನಮೀಬಿಯಾದ ಅಬ್ರಹಾಂ ಕಲೆಂಗಾ ವಿರುದ್ಧ ಮೊದಲ ಸುತ್ತಿನಲ್ಲೇ ಭರ್ಜರಿ ಜಯ ಸಾಧಿಸಿದ್ದರು.
2. ಸೆಮಿಫೈನಲ್: ಕೊಲಂಬಿಯಾದ ಇಝೋನ್ ಜೆಫ್ರಿ ಗೇಲಿಯಾ ಅರೆವಾಲೋ ವಿರುದ್ಧ 5-0 ಅಂತರದ ಸರ್ವಾನುಮತದ ಜಯಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.