ಧಾರವಾಡ ಕೃಷಿ ವಿವಿಗೆ ಪ್ರಶಸ್ತಿ
Published by Basavaraj Halli
30 ಜೂನ್ 2020
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಜೋಳ ಸಂಶೋಧನಾ ವಿಭಾಗಕ್ಕೆ ದೇಶದ 'ಅತ್ಯುತ್ತಮ ಸಂಶೋಧನಾ ಕೇಂದ್ರ' ಪ್ರಶಸ್ತಿಗೆ ಪಡೆದಿದೆ.
ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಜೋಳ ಸಂಶೋಧನಾ ವಿಭಾಗವು 'ದೇಶದ ಒಟ್ಟಾರೆ ಜೋಳದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜೋಳ ಸಂಶೋಧನಾ ವಿಭಾಗವು 1929 ರಿಂದ ಕಾರ್ಯಾರಂಭ ಮಾಡಿದ್ದು ಸುವರ್ಣ ಸಂಭ್ರಮ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಬಂದಿದ್ದು ವಿಶೇಷವಾಗಿದೆ ಎಂದು ಕುಲಪತಿ ಡಾ. ಮಹಾದೇವ ಚೆಟ್ಟಿ ಮಾಹಿತಿ ನೀಡಿದ್ದಾರೆ.