129 ವರ್ಷಗಳ ಬಳಿಕ ಪತ್ತೆಯಾದ ಹೆಬಿಯಸ್ ಪಿಯಾಲಿ ಎಂಬ ಅಪರೂಪದ ಹಾವು
Published by Basavaraj Halli
30 ಜೂನ್ 2020
ಗುವಾಹಟಿ: ಸುಮಾರು 129 ವರ್ಷಗಳಿಂದ ಕಣ್ಮರೆಯಾಗಿದ್ದ ಅಪರೂಪದ ಜಾತಿಯ ಹೆಬಿಯಸ್ ಪಿಯಾಲಿ ಎಂಬ ವೈಜ್ಞಾನಿಕ ಹೆಸರಿನ ಹಾಗೂ ಅಸ್ಸಾಂ ಕೀಲ್ ಬ್ಯಾಕ್ ಎಂದು ಕರೆಯಲ್ಪಡುವ ಹಾವನ್ನು ಭಾರತೀಯ ವನ್ಯಜೀವಿ ಸಂಸ್ಥೆಯ ತಂಡವೊಂದು ಪತ್ತೆಹಚ್ಚಿದೆ.
ಈ ಹಾವು 1891 ರಲ್ಲಿ ಅಸ್ಸಾಂನ ಸಿಬ್ಸಗರ್ ಜಿಲ್ಲೆಯಲ್ಲಿ ಬ್ರಿಟಿಷ್ ಟೀ ಪ್ಲಾಂಟರ್ ಸ್ಯಾಮ್ಯುಯಲ್ ಎಡ್ವರ್ಡ್ ಪೀಲ್ ಎಂಬಾತನಿಗೆ ಕಡೆಯದಾಗಿ ಕಾಣಿಸಿಕೊಂಡಿತ್ತು.
* 50 ರಿಂದ 60 ಸೆ.ಮೀ ಉದ್ದ ಬೆಳೆಯುವ ಅಸ್ಸಾಂ ಕೀಲ್ಬ್ಯಾಕ್, ಒಂದು ವಿಷವಿಲ್ಲದ ಹಾವು.
* ಅಸ್ಸಾಂ-ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಿರುವ 118 ಕಿ.ಮೀ ವ್ಯಾಪ್ತಿ ಹೊಂದಿರುವ ಪೋಬಾ ಸಂರಕ್ಷಿತ ಅರಣ್ಯದಲ್ಲಿ ಈ ಹಾವು ದೊರೆತಿದೆ.