ಭಾರತದಲ್ಲಿ 9 ಲಕ್ಷ ಉದ್ಯೋಗ ಸೃಷ್ಟಿಗೆ PM FME ಯೋಜನೆ ಆರಂಭ
Published by Basavaraj Halli
30 ಜೂನ್ 2020
ಭಾರತದಲ್ಲಿ ಕೋರೋಣ ಸೋಂಕಿನಿಂದಾಗಿ ವಿಧಿಸಿರುವ lockdown ಸಮಯದಲ್ಲಿ ಪ್ರಧಾನಿಯಿಂದ ಘೋಷಣೆಯಾದ ಆತ್ಮ ನಿರ್ಭರ್ ಭಾರತ್ ಅಭಿಯಾನದ ಅಂಗವಾಗಿ, ಪ್ರೈಮ್ ಮಿನಿಸ್ಟರ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ (PM FME) ಯೋಜನೆಯನ್ನು 2020 ಜೂನ್ 29 ರಂದು ಆರಂಭಿಸಲಾಯಿತು. ಈ ಯೋಜನೆಯನ್ನು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಅವರು ಚಾಲನೆ ನೀಡಿದರು. ಈ ಯೋಜನೆಗೆ ದಿನಾಂಕ 2020 ರ ಮೇ 20 ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು.
* ಈ ಯೋಜನೆಯಿಂದ 9 ಲಕ್ಷ ನುರಿತ ಮತ್ತು ಅರೆ-ನುರಿತ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಈ ಯೋಜನೆಗೆ ಒಟ್ಟು 35000 ಕೋಟಿ ರೂ ಹೂಡಿಕೆ ಮಾಡಲಾಗಿದೆ.