ನವದೆಹಲಿ : ಚೀನಾದ ಪ್ರಮುಖ ಆಪ್ ಗಳಾದ ಟಿಕ್‌ಟಾಕ್, ಶೇರ್‌ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್‌ ಮತ್ತು ವಿ-ಚಾಟ್ ಸೇರಿದಂತೆ ಪ್ರಮುಖ 59 ಮೊಬೈಲ್‌ ಆಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಆಯಪ್ ಗಳು ಭಾರತದಲ್ಲಿ ಬಳಕೆಯಾಗುತ್ತಿದ್ದು ಇದರಿಂದಾಗಿ 'ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ಉಂಟಾಗುವ ಕಾರಣ ಇವುಗಳನ್ನು ನಿಷೇಧಿಸಲಾಗಿದೆ' ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ನೀಡಿದೆ. Android ಮತ್ತು ios‌ ಆಪರೇಟಿಂಗ್ ಸಿಸ್ಟಮ್ ಉಳ್ಳ ಪ್ಲಾಟ್‌ಫಾರ್ಮ್‌ ನಲ್ಲಿ ಈ ಆಯಪ್‌ಗಳು ಲಭ್ಯವಿದ್ದು, ಇವುಗಳ ಸರ್ವರ್‌ಗಳು ವಿದೇಶದಲ್ಲಿರುವದರಿಂದ ದತ್ತಾಂಶ ಸಂಗ್ರಹ, ಬಳಕೆದಾರರ ಪ್ರೊಫೈಲಿಂಗ್ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಹಿನ್ನೆಲೆ ಈ ಆಯಪ್‌ಗಳನ್ನು ನಿಷೇಧಿಸಿರುವದಾಗಿ ಎಂದು ಸಚಿವಾಲಯವು ತಿಳಿಸಿದೆ.