ಹೈದರಾಬಾದ್ : ಇಡೀ ವಿಶ್ವವೇ ಕೊರೋನಾ ವೈರಸ್ ನಿಂದ ತತ್ತರಿಸಿರುವ ಹಿನ್ನಲೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯು ಕೋರೋಣ ವಿರುದ್ಧದ ಹೋರಾಟಕ್ಕೆ ಮೊದಲ ಲಸಿಕೆ 'ಕೊವಾಕ್ಸಿನ್ ' ಸಿದ್ಧಪಡಿಸಿದೆ. ಈ ಲಸಿಕೆಯನ್ನು ಮಾನವ ಪ್ರಯೋಗಕ್ಕೆ ಒಳಪಡಿಸಲು ಹೈದರಾಬಾದ್ ಮೂಲದ ಲಸಿಕೆ ತಯಾರಿಕ ಕಂಪನಿ ಭಾರತ್ ಬಯೋಟೆಕ್ ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ( DCGI) ಅನುಮತಿ ನೀಡಿದೆ. ಈ ಮೂಲಕ ಮಾನವ ಪ್ರಯೋಗಕ್ಕೆ ಅನುಮತಿ ಪಡೆದ ದೇಶದ ಮೊದಲ ದೇಶಿಯ ಕೋರೋಣ ಔಷಧಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.