ನಬಾರ್ಡ್ ನೂತನ ಅಧ್ಯಕ್ಷರಾಗಿ ಜಿ.ಆರ್.ಚಿಂತಲ ಅಧಿಕಾರ ಸ್ವೀಕಾರ
Published by Basavaraj Halli
29 ಮೇ 2020
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ನೂತನ ಅಧ್ಯಕ್ಷರಾಗಿ ಜಿ.ಆರ್.ಚಿಂತಲ ಅವರು ಅಧಿಕಾರ ವಹಿಸಿಕೊಂಡರು. ಬೆಂಗಳೂರಿನಲ್ಲಿರುವ ನಬಾರ್ಡ್‍ನ ಕೇಂದ್ರ ಕಚೇರಿಯಲ್ಲಿ ಇದೆ ದಿನಾಂಕ ಮೇ 27 ರಿಂದ ಅನ್ವಯವಾಗುವಂತೆ ಇವರ ಆಡಳಿತ ಆರಂಭವಾಗುತ್ತದೆ.
ನಬಾರ್ಡ್‍ನ ಅಂಗಸಂಸ್ಥೆಯಾಗಿರುವ ಎನ್‍ಎಬಿಎಫ್‍ಐಎನ್‍ಎಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಇದುವರೆಗೆ ಇವರು ಕಾರ್ಯನಿರ್ವಹಿಸುತ್ತಿದ್ದರು.