ವಿಯೆಟ್ನಾಂನಲ್ಲಿ ಒಂಬತ್ತನೇ ಶತಮಾನದ ಶಿವಲಿಂಗ ಪತ್ತೆ
Published by Basavaraj Halli
28 ಮೇ 2020
ಹನೋಯಿ: ವಿಯೆಟ್ನಾಂನಲ್ಲಿರುವ ಮೈಸನ್ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆಯು ನಡೆಸಿದ ಉತ್ಖನನದ ವೇಳೆಯಲ್ಲಿ ಸುಮಾರು 9ನೇ ಶತಮಾನದಷ್ಟು ಹಳೆಯದಾದ ಬೃಹತ್ ಏಕಶಿಲಾ ಶಿವಲಿಂಗವನ್ನು ಪತ್ತೆ ಹಚ್ಚಿದೆ.
ಮೈಸನ್‌ನಲ್ಲಿ ಪ್ರಾಚೀನ ಸಂಸ್ಕೃತಿ ಸಂರಕ್ಷಣಾ ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಇದೆ ವೇಳೆ ನಡೆಸಿದ ಉತ್ಖನನದಲ್ಲಿ ಪ್ರಾಚೀನ ಶಿವಲಿಂಗ ಪತ್ತೆಯಾಗಿದೆ. ಮೈಸನ್ ಮಧ್ಯ ವಿಯೆಟ್ನಾಂನಲ್ಲಿನ ಭಾಗಶಃ ಹಾಳಾದ ಹಿಂದು ದೇವಾಲಯಗಳ ಸಮೂಹವಾಗಿದ್ದು, ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಿದೆ.