ನವದೆಹಲಿ: ಆಧಾರ್‌ ಕಾರ್ಡನಲ್ಲಿರುವ ಮಾಹಿತಿ ನೀಡಿ ಆನ್‌ಲೈನ್‌ ಮೂಲಕ ತಕ್ಷಣವೇ ಉಚಿತವಾಗಿ ಮತ್ತು ಶಾಶ್ವತ ಖಾತೆ ಸಂಖ್ಯೆ (ಪರ್ಮನೆಂಟ್ ಅಕೌಂಟ್ ನಂಬರ್(PAN)‌) ಪಡೆಯುವ ನೂತನ ಸೇವೆಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು ಚಾಲನೆ ನೀಡಿದರು. ಪ್ಯಾನ್‌ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಕುರಿತು ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಪ್ರಸ್ತುತ ಇರುವ ಪ್ರಕ್ರಿಯೆಯಾದ ಅರ್ಜಿ ನಮೂನೆಯಲ್ಲಿ ವಿಸ್ತೃತ ಮಾಹಿತಿ ತುಂಬಿ ಅದನ್ನು ಇಲಾಖೆಗೆ ಸಲ್ಲಿಸುವ ಸಮಸ್ಯೆ ತಪ್ಪಲಿದೆ. ಜೊತೆಗೆ ತೆರಿಗೆ ಇಲಾಖೆಯು ತೆರಿಗೆ ಪಾವತಿದಾರರ ಮನೆ ವಿಳಾಸಕ್ಕೆ ಪ್ಯಾನ್‌ ತಲುಪಿಸುವ ಸಮಸ್ಯೆ ಕೂಡ ಇರುವದಿಲ್ಲ.