ಬೆಂಗಳೂರು ವಿಮಾನ ನಿಲ್ದಾಣಕ್ಕೆ 3 ನೇ ಬಾರಿಗೆ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ
Published by Basavaraj Halli
12 ಮೇ 2020
ಭಾರತ ಮತ್ತು ಕೇಂದ್ರ ಏಷ್ಯಾ ಪ್ರದೇಶದಲ್ಲಿನ "ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿಗೆ" ಪಾತ್ರವಾಗಿದೆ. ಬೆಂಗಳೂರಿನ ಸಮೀಪದ ದೇವನಹಳ್ಳಿಯಲ್ಲಿ ಕಳೆದ 11 ವರ್ಷಗಳ ಹಿಂದೆ ಆರಂಭವಾದ ಈ ವಿಮಾನ ನಿಲ್ದಾಣಕ್ಕೆ "ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ" ಎಂದು ನಾಮಕರಣ ಮಾಡಲಾಗಿದೆ.
* ನಿಲ್ದಾಣದ ಬಳಕೆದಾರರು ನೀಡುವ ಈ ಪ್ರಶಸ್ತಿಯು ಸತತ ಮೂರನೇ ಬಾರಿಗೆ ಬೆಂಗಳೂರು ವಿಮಾನ ನಿಲ್ದಾಣದ ಪಾಲಾಗಿದೆ. ವಿಮಾನ ಪ್ರಯಾಣಿಕರ ಸಂತೃಪ್ತಿ ಸಮೀಕ್ಷೆ ಆಧರಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.