ಕೇಂದ್ರ ಸರ್ಕಾರದಿಂದ 14 ರಾಜ್ಯಗಳಿಗೆ 6,195 ಕೋಟಿ ವಿಶೇಷ ಕೊವಿಡ್ ಅನುದಾನ ಬಿಡುಗಡೆ
Published by Basavaraj Halli
12 ಮೇ 2020
ದೆಹಲಿ : ಭಾರತಕ್ಕೆ ಮಾರಕವಾಗಿರುವ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರವು 2ನೇ ಹಂತದಲ್ಲಿ ಒಟ್ಟು 14 ರಾಜ್ಯಗಳಿಗೆ ಸುಮಾರು 6,195 ಕೋಟಿ ರೂಪಾಯಿನಷ್ಟು ಅನುದಾನ ಬಿಡುಗಡೆ ಮಾಡಿದೆ.
ವಿವಿಧ ರಾಜ್ಯಗಳಲ್ಲಿ ಕೊವಿಡ್ ವೈರಸ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು, ಕಾರ್ಮಿಕರು, ಮಹಿಳೆಯರು ಸೇರಿ ವಿವಿಧ ಕ್ಷೇತ್ರಗಳ ಉತ್ತೇಜಿಸಲು ಈ ಮೊದಲು ಮಾರ್ಚ್ ತಿಂಗಳಲ್ಲಿ, ಒಟ್ಟು 1.70 ಲಕ್ಷ ಕೋಟಿ ಅನುದಾನವನ್ನು ಹಣಕಾಸು ಇಲಾಖೆಯಿಂದ ಘೋಷಿಸಲಾಗಿತ್ತು.
ಈಗ ಎರಡನೇ ಹಂತದಲ್ಲಿ 14 ರಾಜ್ಯಗಳಿಗೆ 6,195 ಕೋಟಿ ರಿಲೀಸ್ ಮಾಡಿದೆ. ಎರಡನೇ ಹಂತದ ಅನುದಾನದಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ್, ಮೇಘಲಾಯ, ಮಿಜಾರೋಂ, ನಾಗಲ್ಯಾಂಡ್, ಪಂಜಾಬ್, ತಮಿಳುನಾಡು, ತ್ರಿಪುರ, ಉತ್ತರಾಖಂಡ, ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.