ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ(DRDO) ದಿಂದ ವೈರಸ್ ನಾಶಕ್ಕೆ ನೂತನ ಉಪಕರಣ
Published by Basavaraj Halli
11 ಮೇ 2020
ನವದೆಹಲಿ : ಭಾರತ ಸರ್ಕಾರದ ಅದೀನದಲ್ಲಿ ಕಾರ್ಯನಿರ್ವಹಿಸುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಯು ಎಲೆಕ್ಟ್ರಾನಿಕ್ ಉಪಕರಣಗಳು, ಕರೆನ್ಸಿ ನೋಟುಗಳು ಸೇರಿದಂತೆ ವಿವಿಧ ವಸ್ತುಗಳ ಮೇಲಿರುವ ವೈರಾಣುಗಳನ್ನು ನಾಶಪಡಿಸಲು ನೂತನ ಉಪಕರಣವೊಂದನ್ನು ಅಭಿವೃದ್ಧಿಪಡಿಸಿದೆ.
* ಈ ಉಪಕರಣವು ನೇರಳಾತೀತ ಕಿರಣಗಳ ಮೂಲಕ ವೈರಾಣಗಳನ್ನು ನಾಶಪಡಿಸುತ್ತದೆ.
* ಮೊಬೈಲ್ ದೂರವಾಣಿಗಳು, ಐಪ್ಯಾಡ್‌ಗಳು, ಲ್ಯಾಪ್‌ಟಾಪ್‌ಗಳು, ನೋಟುಗಳು, ಚೆಕ್‌ಗಳು, ಚಲನ್‌ಗಳು, ಪಾಸ್‌ಬುಕ್‌ಗಳು, ಪೇಪರ್, ಲಕೋಟೆ ಮುಂತಾದ ವಸ್ತುಗಳಲ್ಲಿರುವ ವೈರಾಣು ನಾಶಕ್ಕೆ ಈ ಉಪಕರಣ ಬಳಸಬಹುದು ಎಂದು ಸಚಿವಾಲಯ ತಿಳಿಸಿದೆ.
* ಹೈದರಾಬಾದ್‌ನಲ್ಲಿರುವ DRDOದ ಸಂಶೋಧನಾ ಕೇಂದ್ರ ಇದನ್ನು ಅಭಿವೃದ್ಧಿಪಡಿಸಿದೆ.