ಇತಿಹಾಸ ತಜ್ಞ ಹರಿಶಂಕರ್ ಇನ್ನಿಲ್ಲ
Published by Basavaraj Halli
11 ಮೇ 2020
ಕೋಲ್ಕತಾ : ಪಶ್ಚಿಮ ಬಂಗಾಳ ಮೂಲದ ಖ್ಯಾತ ಇತಿಹಾಸತಜ್ಞರಾದ ಹರಿ ಶಂಕರ್ ವಾಸುದೇವನ್ ಅವರು ದಿನಾಂಕ 10 ಮೇ 2020 ರ ರವಿವಾರ ದಂದು ಮಾರಕ ಕೋವಿಡ್-19 ಸೋಂಕಿನಿಂದಾಗಿ ತಮ್ಮ ಕೊನೆಯುಸಿರೆಳೆದರು.
* ರಶ್ಯ ಹಾಗೂ ಮಧ್ಯ ಏಶ್ಯದ ಕುರಿತಾದ ಮುಂಚೂಣಿಯ ಇತಿಹಾಸ ತಜ್ಞರಲ್ಲಿ ವಾಸುದೇವನ್ ಕೂಡಾ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.
* ''ಪ್ರೊಫೆಸರ್ ವಾಸುದೇವನ್ ಅವರು ರಶ್ಯ, ಯುರೋಪ್ ಇತಿಹಾಸ ಹಾಗೂ ಇಂಡೋ-ರಶ್ಯನ್ ಬಾಂಧವ್ಯಗಳ ವಿಷಯದಲ್ಲಿ ವಿಶೇಷತಜ್ಞರಾಗಿದ್ದರು.
* 1930-47ರ ಅವಧಿಯಲ್ಲಿ ಭಾರತ-ರಶ್ಯ ಬಾಂಧವ್ಯಗಳ ಬಗ್ಗೆ ಹಲವಾರು ವಿಚಾರಸಂಕಿರಣ ಪ್ರಬಂಧಗಳನ್ನು ವಾಸುದೇವನ್ ಮಂಡಿಸಿದ್ದು, ಅವುಗಳನ್ನು ಏಶ್ಯಾಟಿಕ್ ಸೊಸೈಟಿ ಪ್ರಕಟಿಸಿದೆ.