ಸ್ಮಾರ್ಟ್ ಸಿಟಿ ಯೋಜನೆ : ಮೂರನೇ ಹಂತದ ಲಾಕ್ ಡೌನ್ ನಿಂದ 50 ನಗರಗಳಲ್ಲಿ ಕಂಟ್ರೋಲ್ ರೂಮಗಳು ಆರಂಭ
Published by Basavaraj Halli
05 ಮೇ 2020
ಭಾರತ ಸರ್ಕಾರವು COVID-19 ಲಾಕ್ ಡೌನ್ ನ ಮೂರನೇ ಹಂತವನ್ನು ಜಾರಿಗೆ ತಂದಿದೆ. ಮೂರನೆಯ ಹಂತದ ಲಾಕ್ ಡೌನ್ ಸಡಿಲಗೊಳಿಸುವ ನಿರ್ಬಂಧಗಳನ್ನು ದೇಶಾದ್ಯಂತ ಜಾರಿಮಾಡಲಾದ ಹಿನ್ನಲೆ, ಪ್ರಮುಖ ನಗರಗಳಲ್ಲಿ ಇನ್ನೂ ವೈರಸ್ ಹರಡುವಿಕೆಗೆ ಹೆಚ್ಚಾಗಬಹುದಾದ ಸಾಧ್ಯತೆಯಿರುವದರಿಂದ, ವೈರಸ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಲು ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳಲು ಸ್ಮಾರ್ಟ್ ಸಿಟಿಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.