ರಾಮಾಯಣ ಧಾರಾವಾಹಿಗೆ ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮನೋರಂಜನಾ ಕಾರ್ಯಕ್ರಮ ಎಂಬ ವಿಶ್ವ ದಾಖಲೆ
Published by Siddaram Halli
01 ಮೇ 2020
ನವದೆಹಲಿ : ರಮಾನಂದ ಸಾಗರ್ ಅವರು ನಿರ್ದೇಶಿಸಿರುವ ಸುಪ್ರಸಿದ್ದ ದಾರಾವಾಹಿಯಾದ ರಾಮಾಯಣವು ಜಗತ್ತಿನ ದೂರದರ್ಶನ ಕ್ಷೇತ್ರದಲ್ಲೇ ಹೆಚ್ಚು TRP ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಮಾಡಿದೆ. ದಿನಾಂಕ ಏಪ್ರಿಲ್16, 2020 ರಂದು ಒಟ್ಟು 7.7 ಕೋಟಿ ವೀಕ್ಷಕರು ಈ ಕಾರ್ಯಕ್ರಮ ವೀಕ್ಷಿಸುವ ಮೂಲಕ ಹೊಸ ವಿಶ್ವದಾಖಲೆ ಮಾಡಿದೆ ಎಂದು ದೂರದರ್ಶನ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.
* ನಿರ್ದೇಶಕರಾದ ರಮಾನಂದ ಸಾಗರ್ ಅವರು ವಾಲ್ಮೀಕಿ ರಾಮಾಯಣ ಹಾಗೂ ತುಳಸಿದಾಸ್ ಅವರ ರಾಮಚರಿತಮಾನಸ್ ನ ಆಧರಿಸಿ 78 ಎಪಿಸೋಡ್ ಗಳ ರಾಮಾಯಣವನ್ನು ನಿರ್ದೇಶಿಸಿದ್ದರು.
* 1987 ರ ಜನವರಿ 25 ರಿಂದ 1988ರ ಜುಲೈ 31 ರವರೆಗೆ ಈ ಧಾರಾವಾಹಿ ಮೊದಲ ಬಾರಿಗೆ ಪ್ರಸಾರವಾಗಿತ್ತು.