100 ಜಾಗತಿಕ ಶ್ರೇಷ್ಠ ವಿವಿಗಳಲ್ಲಿ ಸ್ಥಾನ ಪಡೆದ ಬೆಂಗಳೂರಿನ IISC
Published by Siddaram Halli
01 ಮೇ 2020
ನವದೆಹಲಿ: ಜಾಗತಿಕ ರೌಂಡ್ ಯೂನಿವರ್ಸಿಟಿ ರ್ಯಾಂಕಿಂಗ್ ಬಿಡುಗಡೆಗೊಂಡಿದ್ದು ಈ ರ್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISC) ಯು ಟಾಪ್ 100 ಅಥವಾ ಡೈಮಂಡ್ ಲೀಗ್‌ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ವಿಶ್ವ ವಿದ್ಯಾಲಯವಾಗಿದೆ.
* 2019 ರಲ್ಲಿ 84ನೇ ಸ್ಥಾನದಲ್ಲಿದ್ದ IISC ಯು ಈ ಬಾರಿ 62ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
* ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿ 249 ಸ್ಥಾನ ಗಳಿಸಿದೆ.
* ಐಐಟಿ-ಮದ್ರಾಸ್ 271 ಮತ್ತು ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ 287 ನೇ ಸ್ಥಾನದಲ್ಲಿದೆ.
* ಜಾಗತಿಕ ಮಟ್ಟದಲ್ಲಿ ಯುಎಸ್‌ಎ ಹಾರ್ವರ್ಡ್ ವಿಶ್ವವಿದ್ಯಾಲಯ ಅಗ್ರಸ್ಥಾನದಲ್ಲಿದೆ.
* ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕ್ಯಾಲ್ಟೆಕ್) ಎರಡೇ ಸ್ಥಾನದಲ್ಲಿದೆ.