ಲಾಕ್ ಡೌನ್: ಗಂಗೆಯ ನೀರಿನ ಗುಣಮಟ್ಟವನ್ನು ಸುಧಾರಣೆ
Published by Basavaraj Halli
30 ಏಪ್ರಿಲ್ 2020
ದಿನಾಂಕ ಮಾರ್ಚ್ 22, 2020 ರಂದು ದೇಶದಲ್ಲಿ ಕೋರೋಣ ವಿರುದ್ದ ಹೋರಾಡಲು ವಿಧಿಸಲಾದ ಲಾಕ್ ಡೌನ್ ನಿಂದಾಗಿ ಗಾಳಿಯ ಗುಣಮಟ್ಟ ಮತ್ತು ನೀರಿನ ಗುಣಮಟ್ಟವನ್ನು ಸುಧಾರಿಸಿದೆ.
* ಗಂಗಾ : ಜೈವಿಕ ಆಮ್ಲಜನಕ ಬೇಡಿಕೆ (BOD) ಆಧರಿಸಿ ನದಿಯ ನೀರಿನ ಮಾಲಿನ್ಯವನ್ನು ಅಳೆಯಲಾಗುತ್ತದೆ. ಲಾಕ್ ಡೌನ್ ಮಾಡಿದ ನಂತರ, ಗಂಗೆಯ 36 ಮಾನಿಟರಿಂಗ್ ಪಾಯಿಂಟ್‌ಗಳಲ್ಲಿ 27 ಪಾಯಿಂಟಗಳಷ್ಟು ಈಗ ಸ್ವಚ್'ವಾಗಿದೆ ಮತ್ತು ವನ್ಯಜೀವಿ ಮತ್ತು ಮೀನುಗಾರಿಕೆ ಪ್ರಸರಣಕ್ಕೆ ಸೂಕ್ತವಾಗಿದೆ ಎಂದು ಸಿಪಿಸಿಬಿಯ ವರದಿಯಿಂದ ತಿಳಿದು ಬರುತ್ತದೆ.
* ನೀರಿನ ಗುಣಮಟ್ಟದಲ್ಲಿ ಸುಧಾರಣೆಗೆ ಪ್ರಮುಖ ಕಾರಣವೆಂದರೆ ಸ್ನಾನ, ಪ್ರವಾಸೋದ್ಯಮ, ಜಾತ್ರೆಗಳು ಸೇರಿ ಮುಂತಾದ ಚಟುವಟಿಕೆಗಳ ನಿರ್ಬಂಧ ವಿಧಿಸಿರುವದು. ಅಲ್ಲದೆ, ನದಿಯ ಸುತ್ತಲಿನ ಪ್ರಮುಖ ಕೈಗಾರಿಕಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವದಾಗಿದೆ.