ಉಷ್ಣವಲಯದ ಚಂಡಮಾರುತಗಳ 169 ಹೊಸ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ IMD
Published by Basavaraj Halli
30 ಏಪ್ರಿಲ್ 2020
ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಉಂಟಾಗಬಹುದಾದ ಉಷ್ಣವಲಯದ ಚಂಡಮಾರುತಗಳಿಗೆ ಭಾರತೀಯ ಹವಾಮಾನ ಇಲಾಖೆ (IMD)ಯು 169 ಹೊಸ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
* ಭಾರತ, ಶ್ರೀಲಂಕಾ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಥೈಲ್ಯಾಂಡ್, ಕತಾರ್, ಯುಎಇ, ಸೌದಿ ಅರೇಬಿಯಾ, ಯೆಮೆನ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇರಾನ್ ಈ ಎಲ್ಲ 13 ರಾಷ್ಟ್ರಗಳ ಈ ಹೆಸರುಗಳನ್ನು ನೀಡಿವೆ.
* ವಿಶ್ವ ಹವಾಮಾನ ಸಂಸ್ಥೆ ನಡೆಸಿದ ಉಷ್ಣವಲಯದ ಚಂಡಮಾರುತಗಳ (PTC) 45 ನೇ ಅಧಿವೇಶನದಲ್ಲಿ ಚಂಡಮಾರುತಗಳ ಹೊಸ ಪಟ್ಟಿಯನ್ನು ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.