ನರೆಗಾ ಕೂಲಿ ಬೇಡಿಕೆ ಸರಳೀಕರಣಕ್ಕಾಗಿ 'ಕಾಯಕ ಮಿತ್ರ' ಆಯಪ್ ಬಿಡುಗಡೆ
Published by Siddaram Halli
01 ಮೇ 2020
ಬೆಂಗಳೂರು: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ನಡೆಯುವ ಕೂಲಿ ಕೆಲಸದ ಬೇಡಿಕೆಯನ್ನು ಸುಲಭಗೊಳಿಸಲು ರಾಜ್ಯ ಸರ್ಕಾರದಿಂದ 'ಕಾಯಕ ಮಿತ್ರ' ಆಯಪ್ ಅನ್ನು ಬಿಡುಗಡೆ ಮಾಡಲಾಗಿದೆ.
* ಈ ಆಯಪ್ ಮೂಲಕ ಕೂಲಿ ಬೇಡಿಕೆ ಸಲ್ಲಿಸಲು ಲಾಗಿನ್ ನೋಂದಣಿಯ ಅವಶ್ಯಕತೆ ಇರುವದಿಲ್ಲ. ಸುಮಾರು 15 ದಿನಗಳ ವರೆಗೆ ಕೂಲಿ ಮನವಿ ಸಲ್ಲಿಸಬಹುದು.
* ಉದ್ಯೋಗ ಚೀಟಿ ಹೊಂದಿರಬೇಕು.
* ಕೃಷಿ ಹೊಂಡ, ಬದು ನಿರ್ಮಾಣ, ತೋಟಗಾರಿಕೆ, ರೇಷ್ಮೆ, ಕೃಷಿ, ಅರಣ್ಯ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ ಸೇರಿ ವಿವಿಧ ಕೃಷಿ ಬೇಡಿಕೆ ಸಲ್ಲಿಸಲು ಅವಕಾಶನೀಡಲಾಗಿದೆ.