ಮತ್ತೆ ಏಷ್ಯಾದ ನಂಬರ್ 1 ಶ್ರೀಮಂತನಾದ ಮುಕೇಶ್ ಅಂಬಾನಿ
Published by Siddaram Halli
24 ಏಪ್ರಿಲ್ 2020
ಇತ್ತೀಚಿಗೆ ಮುಕೇಶ್ ಅಂಬಾನಿ ಏಷ್ಯಾದ ನಂಬರ್ 1 ಪಟ್ಟದಿಂದ ಕೆಳ ಜಾರಿದ್ದರು. ಆದರೆ ಇದೀಗ ಫೇಸ್‌ಬುಕ್ ಮತ್ತು Jio ಸಂಸ್ಥೆಗಳು ಜೊತೆ ಕೈ ಜೋಡಿಸಿದ್ದರ ಪರಿಣಾಮ ಅಂಬಾನಿ ಮತ್ತೊಮ್ಮೆ ಏಷ್ಯಾದ ನಂಬರ್ 1 ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ.
ಫೇಸ್‌ಬುಕ್ ಸಂಸ್ಥೆಯು ರಿಲಯನ್ಸ್ ಜಿಯೋದಲ್ಲಿ 5.7 ಬಿಲಿಯನ್ ಅಮೆರಿಕನ್ ಡಾಲರ್ (43,574 ಕೋಟಿ ರುಪಾಯಿ) ಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ. ಈ ನಿರ್ಧಾರ ಹೊರಬೀಳುತ್ತಿದ್ದಂತೆ ಅಂಬಾನಿಯು ಏಷ್ಯಾದ ಶ್ರೀಮಂತರ ಪಟ್ಟಿಯಿಂದ ಮೊದಲ ಸ್ಥಾನ ಪಡೆದಿದ್ದಾರೆ.
* ಫೇಸ್‌ಬುಕ್ ಮಾಲೀಕ ಮಾರ್ಕ್ ಜುಗರ್‌ಬರ್ಗ್ ಭಾರತದ ಬೃಹತ್ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋದ 10 ಪರ್ಸೆಂಟ್ ಪಾಲು ಖರೀದಿಸಲಿದೆ.