ಕೊರೊನಾ ನಿರ್ವಹಣೆಯಲ್ಲಿ ವಿಶ್ವದಲ್ಲೇ ಮೋದಿ ನಂಬರ್ ಒನ್
Published by Siddaram Halli
24 ಏಪ್ರಿಲ್ 2020
ನವದೆಹಲಿ : ಕೊರೊನಾ ವೈರಸ್ ಸಮರ್ಥವಾಗಿ ನಿಭಾಯಿಸಿದ ವಿಶ್ವದ 10 ಪ್ರಮುಖ ದೇಶಗಳ ನಾಯಕರುಗಳ ಸಾಲಿನಲ್ಲಿ ಭಾರತದ ಪ್ರಧಾನಿ ಮೋದಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ದಿನಾಂಕ ಜನವರಿ 1 ರಿಂದ ಏಪ್ರಿಲ್ 14ರವರೆಗಿನ ಕೋರೋಣ ವೈರಸ್ ನಿರ್ವಹಣೆ ಕುರಿತ ಜಾಗತಿಕ ವರದಿಗಳನ್ನಾಧರಿಸಿ ಅಮೆರಿಕದ 'ಮಾರ್ನಿಂಗ್ ಕನ್ಸಲ್ಟ್' ಎಂಬ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯ ವರದಿಯನುಸಾರ ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವದ 10 ಪ್ರಮುಖ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಮೊದಲನೇ ಸ್ಥಾನ ಪಡೆದಿದ್ದಾರೆ.
ಅಗ್ರಸ್ಥಾನ ಪಡೆದ ನಾಯಕರು :
ನರೇಂದ್ರ ಮೋದಿ-ಭಾರತ,
ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್- ಮೆಕ್ಸಿಕೋ,
ಬೋರಿಸ್ ಜಾನ್ಸನ್-ಇಂಗ್ಲೆಂಡ್,
ಜೈರ್ ಬೋಲ್ಸನಾರೋ- ಬ್ರೆಜಿಲ್,
ಸ್ಕಾಟ್ ಮಾರಿಸನ್- ಆಸ್ಟ್ರಲೀಯಾ,
ಜಸ್ಟಿನ್ ಟ್ರುಡೊ- ಕೆನಡಾ,
ಏಂಜೆಲಾ ಮಾರ್ಕೆಲ್- ಜರ್ಮನಿ,
ಶಿಂಜೋ ಅಬೆ- ಜಪಾನ್,
ಇಮ್ಯಾನುಯೆಲ್ ಮ್ಯಾಕ್ರೋನ್- ಫ್ರಾನ್ಸ್,
ಡೊನಾಲ್ಡ್ ಟ್ರಂಪ್- ಅಮೆರಿಕ.