ಕೇಂದ್ರ ಸರ್ಕಾರದಿಂದ ರಾಜ್ಯಗಳ ಪಾಲಿನ ತೆರಿಗೆ ಹಣ ಬಿಡುಗಡೆ
Published by Siddaram Halli
21 ಏಪ್ರಿಲ್ 2020
ನವದೆಹಲಿ : ದೇಶದಲ್ಲಿ ವಿಧಿಸಿರುವ ಕೊರೋನಾ ಲಾಕ್ಡೌನ್ ನ ಈ ಸಮಯದಲ್ಲಿ ಕೇಂದ್ರ ಸರ್ಕಾರವೂ ಎಲ್ಲ ರಾಜ್ಯಗಳಿಗೆ ನೀಡಬೇಕಾದ ತೆರಿಗೆ ಹಣವನ್ನು ಆಯಾ ರಾಜ್ಯಗಳಿಗೆ ನೀಡಿದೆ.
ಕೇಂದ್ರವು ಒಟ್ಟು 46,038.70 ಕೋಟಿ ರೂ. ತೆರಿಗೆ ಹಣವನ್ನು ಬಿಡುಗಡೆ ಮಾಡಿದೆ.
2020-21 ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನ, ಜಿಎಸ್‌ಟಿ ಪರಿಹಾರ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ ರಾಜ್ಯ ಸರ್ಕಾರಗಳಿಗೆ ಹತ್ತಾರು ಸಾವಿರ ಕೋಟಿಗಳಷ್ಟು ಅನುದಾನ ನೀಡಬೆಕಿದ್ದ ಕೇಂದ್ರ ಸರ್ಕಾರವು ಅದರಂತೆಯೇ ಎಲ್ಲಾ ರಾಜ್ಯಗಳ ಪಾಲಿನ ತೆರಿಗೆ ಅನುದಾನ ಬಿಡುಗಡೆ ಮಾಡಿದ್ದು, ಮೊದಲ ಕಂತಿನಲ್ಲಿ ಕರ್ನಾಟಕಕ್ಕೆ 1678 ಕೋಟಿ ರೂ. ನೀಡಲಾಗಿದೆ.