ಶೀಘ್ರದಲ್ಲೇ ₹20 ರೂಪಾಯಿ ಹೊಳೆಯುವ ನಾಣ್ಯ ಬಿಡುಗಡೆ
Published by Siddaram Halli
21 ಏಪ್ರಿಲ್ 2020
ನವದೆಹಲಿ : ಭಾರತೀಯ ಕರೆನ್ಸಿಯಲ್ಲಿ ಈಗಾಗಲೇ ವಿವಿಧ ಮುಖಬೆಲೆಯ ನಾಣ್ಯಗಳು ಚಲಾವಣೆಯಲ್ಲಿವೆ. ಈಗ ಈ ಪಟ್ಟಿಗೆ ಮತ್ತೊಂದು ನಾಣ್ಯವನ್ನು ಸೇರಿಸಲಾಗುವುದು. ಶೀಘ್ರದಲ್ಲೇ RBI ನಿಂದ 20 ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆಗೊಳಿಸಲಾಗುವದು. ಇದೆ ಮೊದಲ ಬಾರಿಗೆ ಭಾರತದಲ್ಲಿ 20 ರೂಪಾಯಿ ಮುಖಬೆಲೆಯ ನಾಣ್ಯಗಳು ಚಲಾವಣೆಗೆ ಬರಲಿವೆ.
* ಶೀಘ್ರದಲ್ಲೇ ಆರ್‌ಬಿಐ ಈ ನಾಣ್ಯಗಳನ್ನು ಬ್ಯಾಂಕ್‌ಗಳಿಗೆ ನೀಡಲಿದೆ. ಮುಂಬೈ, ಕೋಲ್ಕತಾ, ನೋಯ್ಡಾ ಮತ್ತು ಹೈದರಾಬಾದ್ ಟಂಕಸಾಲಾಗಳಲ್ಲಿ 20 ರೂಪಾಯಿ ನಾಣ್ಯಗಳನ್ನು ತಯಾರಿಸಲಾಗುತ್ತಿದೆ.
* ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ ಈ ನಾಣ್ಯವು 12 ಮೂಲೆಗಳನ್ನು ಹೊಂದಿರುತ್ತದೆ.
* 11 ವರ್ಷಗಳ ನಂತರ ಹೊಸ ನಾಣ್ಯವನ್ನು ನೀಡಲಾಗುತ್ತಿದೆ. ಇದಕ್ಕೂ ಮೊದಲು ಮಾರ್ಚ್ 2009ರಲ್ಲಿ 10 ರೂಪಾಯಿ ನಾಣ್ಯವನ್ನು ಬಿಡುಗಡೆಗೊಳಿಸಲಾಗಿತ್ತು.
* ಈ ನಾಣ್ಯವು 20 ಎಂಎಂ ವ್ಯಾಸವನ್ನು ಹೊಂದಿರುತ್ತದೆ.
* ₹ 20 ನಾಣ್ಯವು ₹ 10 ನಾಣ್ಯದಂತೆ 2 ಉಂಗುರಗಳನ್ನು ಹೊಂದಿರುತ್ತದೆ.
* ಮೇಲಿನ ಉಂಗುರವು 65 ಪ್ರತಿಶತ ತಾಮ್ರ, 15 ಪ್ರತಿಶತ ಸತು ಮತ್ತು 20 ಪ್ರತಿಶತ ನಿಕ್ಕಲ್ ಅನ್ನು ಹೊಂದಿರುತ್ತದೆ.