ಏರ್‌ಏಷ್ಯಾ ಸಿಬ್ಬಂದಿ ವೇತನದಲ್ಲಿ ಶೇ. 20 ರಷ್ಟು ಕಡಿತಗೊಳಿಸಲು ನಿರ್ಧಾರ
Published by Siddaram Halli
20 ಏಪ್ರಿಲ್ 2020
ಮುಂಬೈ: ದೇಶದಲ್ಲಿ ವಿಧಿಸಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಸ್ಥಗಿತವಾಗಿದ್ದು ಇದರಿಂದ ಎಲ್ಲ ವಿಮಾನಯಾನ ಸಂಸ್ಥೆಗಳು ತೀವ್ರ ನಷ್ಟದಲ್ಲಿವೆ, ಇದೆ ಕಾರಣದಿಂದಾಗಿ ಏರ್‌ಏಷ್ಯಾ ಇಂಡಿಯಾ ವಿಮಾನ ಯಾನ ಸಂಸ್ಥೆಯು ತನ್ನ ಸಿಬ್ಬಂದಿಯ ಏಪ್ರಿಲ್ ವೇತನದಲ್ಲಿ ಶೇ. 20 ರಷ್ಟು ಕಡಿತಗೊಳಿಸಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.
* ತಿಂಗಳಿಗೆ 50,000 ರೂ ಅಥವಾ ಅದಕ್ಕಿಂತ ಕಡಿಮೆ ವೇತನ ಪಡೆಯುವವರಿಗೆ ಇದು ಅನ್ವಯವಾಗುವುದಿಲ್ಲ.